ಬಿಜೆಪಿ ಬಂಡಿಯನ್ನು ಎತ್ತುಗಳಾಗಿ ಎಳೆದುಕೊಂಡು ಹೋಗೊಣ:ಸಂಸದ ರಮೇಶ ಜಿಗಜಿಣಗಿ

ಇಂಡಿ :ಎ.5:ಪಕ್ಷವೇ ನಮಗೆಲ್ಲ ತಾಯಿ-ತಂದೆ,ಬಿಜೆಪಿ ಎಂಬ ಬಂಡಿಗೆ ನಾನು ಎತ್ತು ಆಗುತ್ತೇನೆ,ನಿವೆಲ್ಲ ಹಿಂದೆ ಬನ್ನಿ,ಇಲ್ಲವೆ ನೀವು ಎತ್ತು ಆಗಿ ,ನಾನು ನಿಮ್ಮ ಬೆನ್ನು ಹಿಂದೆ ಬರುತ್ತೇನೆ.ನಾವೆಲ್ಲ ಸೇರಿ ಬಂಡಿಯನ್ನು ಮುನ್ನಡೆಸಿಕೊಂಡು ಹೋಗೊಣ. ಪಕ್ಷ ಬೆಳೆಸುವ ಕೆಲಸ ಎಲ್ಲರೂ ಪ್ರಾಮಾಣಿಕವಾಗಿ ಮಾಡೋಣ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.

ಅವರು ಭಾನುವಾರ ಪಟ್ಟಣದ ಶುಭಂ ಮಂಗಲ ಕಾರ್ಯಾಲಯದಲ್ಲಿ ಬಿಜೆಪಿ ಮಂಡಲ ವತಿಯಿಂದ ಹಮ್ಮಿಕೊಂಡ ಬಿಜೆಪಿ ಕಾರ್ಯಕಾರಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಒಬ್ಬ ವ್ಯಕ್ತಿ,ಒಂದೇ ಸಮುದಾಯದಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಎಲ್ಲ ಸಮಾಜದ ಜನರನ್ನು ಹೆಗಲ ಮೇಲೆ ಹೊತ್ತುಕೊಂಡು ಬರುತ್ತಿರುವುದರಿಂದ ಎಲ್ಲ ಸಮಾಜದ ಜನರು ನನಗೆ ಮತ ಹಾಕುತ್ತಾರೆ.ಚುನಾವಣೆಯಲ್ಲಿ ಸಮಾಜ ಬರವುದಿಲ್ಲ. ಜಾತ್ರೆ,ಹಬ್ಬ,ಮದುವೆ ಕಾರ್ಯಗಳಿಗೆ ಮಾತ್ರ ಸಮಾಜದಲ್ಲಿ ಇರಬೇಕಾಗುತ್ತದೆ ಎಂದು ಹೇಳಿದರು.ಕಾರ್ಯಕರ್ತರು ರಾಜ್ಯ,ಜಿಲ್ಲೆಯಲ್ಲಿ ಎನು ನಡೆದಿದೆ.ಈಶ್ವರಪ್ಪ ಹಾಗೆ ಅಂದಿದ್ದಾರೆ,ಜಿಗಜಿಣಗಿ ಅವರು ಹೀಗೆ ಅಂದ್ರು ಎಂದು ತಲೆ ಕೆಡಿಸಿಕೊಳ್ಳುವುದು ಬೇಡ. ನಮ್ಮ ತಾಲೂಕಿನಲ್ಲಿ ಪಕ್ಷ ಸಂಘಟನೆ ಮಾಡುವ ಗುರಿ ಒಂದೆ ತಲೆಯಲ್ಲಿ ಹಾಕಿಕೊಳ್ಳಬೇಕು ಎಂದು ಹೇಳಿದರು.ನನ್ನ ಬಳಿಗೆ ಬಂದಿರುವ ಪಕ್ಷದ ಕಾರ್ಯಕರ್ತರ ಕೆಲಸ ಮಾಡಿದ್ದೇನೆ. ಯಾರ ಮನಸ್ಸು ನೋಯಿಸುವ ಕೆಲಸ ಮಾಡಿರುವುದಿಲ್ಲ.ಯಾರ ಮೇಲೂ ಇಂದಿಗೂ ಹರಿಹಾಯ್ದಿರುವುದಿಲ್ಲ.ಇದರಿಂದ ಕಾರ್ಯಕರ್ತರಿಗೆ ತೊಂದರೆಯಾಗುತ್ತದೆ ಎಂದು ತಿಳಿದುಕೊಂಡು ಸುಮ್ಮನಿದ್ದೇನೆ ಎಂದು ಹೇಳಿದರು.ಇಂಡಿ ತಾಲೂಕಿನ ಹಳ್ಳಿಗಳಿಗೆ ಕುಡಿಯುವ ನೀರಿನ ಭವಣೆ ತಪ್ಪಿಸಲು ನಾನು ಕೇಂದ್ರ ಸಚಿವನಾಗಿದ್ದಾಗ 110 ಕೋಟಿ ಕೊಟ್ಟಿದ್ದೇನೆ.104 ಕೋಟಿ ರೂ.ಗಳ ವೆಚ್ಚದಲ್ಲಿ ಅಥರ್ಗಾ,ತಡವಲಗಾ,ಹಂಜಗಿ ಕೆರೆ ತುಂಬಿಸಲು ಕೆಲಸ ಮಾಡಿದ್ದೇನೆ ಎಂದು ಹೇಳಿದರು.ಹಿಂದಿನ ಸರ್ಕಾರಗಳು ದೇಶದಲ್ಲಿ ಅಭಿವೃದ್ದಿ ಕೆಲಸ ಮಾಡಿದ್ದರೆ ಇಂದು ದೇಶದ ಚಿತ್ರಣವೇ ಬೇರೆ ಇರುತ್ತಿತ್ತು.ದೇಶದ ಅಭಿವೃದ್ದಿಗಾಗಿ ಮೋದಿ ಅವರೇ ಬೇಕಾಯಿತು ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ,ಪಕ್ಷ,ಜನರ ಮಧ್ಯ ಕೊಂಡಿಯಾಗಿ ಕೆಲಸ ಮಾಡುವವರು ಕಾರ್ಯಕರ್ತರು.ಹೀಗಾಗಿ ಬೂತಮಟ್ಟದವರೆಗೆ ಕೇಂದ್ರ,ರಾಜ್ಯ ಸರ್ಕಾರದ ಸಾಧನೆಗಳನ್ನು ತಲುಪಿಸುವ ಕೆಲಸ ಕಾರ್ಯಕರ್ತರು ಮಾಡಬೇಕು ಎಂದು ಹೇಳಿದರು.

ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.ಚಂದ್ರಶೇಖರ ಕವಟಗಿ,ವಿವೇಕಾನಂದ ಡಬ್ಬಿ,ಮಲ್ಲಿಕಾರ್ಜುನ ಹೂಗಾರ,ಬಸವರಾಜ ಬಿರಾದಾರ,ಚಿದಾನಂದ ಚಲವಾದಿ,ದಯಾಸಾಗರ ಪಾಟೀಲ,ಕಾಸುಗೌಡ ಬಿರಾದಾರ,ರವಿಕಾಂತ ಬಗಲಿ,ಶೀಲವಂತ ಉಮರಾಣಿ,ಅನೀಲ ಜಮಾದಾರ,ಸಿದ್ದಲಿಂಗ ಹಂಜಗಿ,ಎಲ್ಲಪ್ಪ ಹದರಿ,ರವಿ ವಗ್ಗೆ,ಅನೀಲಗೌಡ ಬಿರಾದಾರ,ಲಾಯಪ್ಪ ದೊಡಮನಿ,ಗಣಪತಿ ಬಾಣಿಕೋಲ,ಶಾಂತು ಕಂಬಾರ,ಶಿವಾನಂದ ಕಲಶೆಟ್ಟಿ,ವಿಜಯಲಕ್ಷ್ಮಿ ರೂಗಿಮಠ,ರಾಜಶೇಖರ ಯರಗಲ್ಲ,ಶರಣಗೌಡ ಬಂಡಿ, ಶಿವರುದ್ರ ಪಾಟೀಲ,ಶ್ರೀಶೈಲ ಮದರಿ,ರವಿ ರೋಡಗಿ,ಬೊಗೇಶ ಕಲಶೆಟ್ಟಿ,ಸುರೇಶ ಕುಲಕರ್ಣಿ,ವಿಠಲ ಮೊರೆ,ಮಲ್ಲು ಪಡನೂರ,ದತ್ತಾ ಬಂಡೇನವರ,ಸಚಿನ ಬೊಳೆಗಾಂವ,ಅಂಬಣ್ಣ ಕವಟಗಿ ಇತರರು ಸಭೆಯಲ್ಲಿ ಇದ್ದರು.