ಬಿಜೆಪಿ ಪ್ರಬಂಧಕರ ಸಭೆ
 ಸಮಾವೇಶದ ಯಶಸ್ವಿಗೆ ಕರೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.12:  ನಗರದ ಟಿಬಿ ಆಸ್ಪತ್ರೆಯ ಪಕ್ಕದಲ್ಲಿರುವ  ಮೈದಾನದಲ್ಲಿ ಈ ತಿಂಗಳ 20 ರಂದು ನಡೆಯುವ ರಾಜ್ಯ ಮಟ್ಟದ ಬಿಜೆಪಿ ಎಸ್ ಟಿ ಮೋರ್ಚಾ ವಿರಾಟ್ ಸಮಾವೇಶದ ಹಿನ್ನೆಲೆಯಲ್ಲಿ ಇಂದು ಸಮಾವೇಶದ ಸ್ತಯಳದಲ್ಲಿ ಸಿದ್ದತೆ ಕುರಿತಂತೆ ಪ್ರಬಂಧಕರ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಪಕ್ಷದ  ಜಿಲ್ಲಾಧ್ಯಕ್ಷ ಗೋನಾಳು ಮುರಹರಗೌಡ, ನಗರ ಶಾಸಕ   ಸೋಮಶೇಖರ ರೆಡ್ಡಿ, ಕಲ್ಬುರ್ಗಿ ವಿಭಾಗದ ಸಂಘಟನಾ ಕಾರ್ಯದರ್ಶಿ ಅರುಣ್ ಬಿನ್ನಡಿ, ಬಳ್ಳಾರಿ ವಿಭಾಗದ ಪ್ರಭಾರಿಗಳಾದ ಸಿದ್ದೇಶ್ ಯಾದವ್, ಚಂದ್ರಶೇಖರ ಪಾಟೀಲ ಹಲಗೇರಿ, ಬಳ್ಳಾರಿ ವಿಭಾಗದ ಸಂಘಟನಾ ಕಾರ್ಯದರ್ಶಿ ಪೂಜಪ್ಪ,  ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಕೆ.ಎಸ್ ಅಶೋಕ್ ಕುಮಾರ್,  ಶಿವಶಂಕರ ರೆಡ್ಡಿ,ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಬಿ ರಾಮಕೃಷ್ಣ  ವೇದಿಕೆಯಲ್ಲಿ ಉಪಸ್ಥಿತರಿದ್ದರು