ಬಿಜೆಪಿ ಪ್ರತಿಭಟನೆ ಹಾಸ್ಯಾಸ್ಪದ: ಶರಣೇಗೌಡ ಮಾಲಿ ಪಾಟೀಲ್


ಸಂಜೆವಾಣಿ ವಾರ್ತೆ
ಕಾರಟಗಿ:ಜು:08: ಬಿಜೆಪಿ ಪಕ್ಷದ ಪ್ರತಿಭಟನೆ ಹಾಸ್ಯಸ್ಪದವಾಗಿದೆ ಎಂದು ಕಾರಟಗಿ ಬ್ಲಾಕ್ ಸಮಿತಿ ಅಧ್ಯಕ್ಷ ಶರಣೇಗೌಡ ಎಂ ಮಾಲಿ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ವಾರ್ಷಿಕ ಸುಮಾರು 60 ಕೋಟಿಗೆ ಅಧಿಕ ಮೊತ್ತದ ಯೋಜನೆ ಜಾರಿಗೆ ತಂದಿದ್ದು ಬಿಜೆಪಿ ಪಕ್ಷದವರಿಗೆ ಸೋಲು ಅರಗಿಸಿಕೊಳ್ಳಲಾದ್ದರಿಂದ ಪ್ರತಿಭಟನೆಯ ನಾಟಕ ವಾಡುತ್ತಿದ್ದಾರೆಂದು ತಿಳಿಸಿದ್ದಾರೆ,
ಮಾಜಿ ಶಾಸಕ ಬಸವರಾಜ್ ದಡೇಸೂಗೂರು ತಮ್ಮ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡದೆ ಕಮಿಷನ್ ರೂಪದಲ್ಲಿ ಹಣವನ್ನು ಎತ್ತುವಳಿ ಮಾಡಿದ್ದು ಕ್ಷೇತ್ರದ ಜನರು ತಕ್ಕ ಬುದ್ದಿ ಕಳಿಸಿದ್ದಾರೆ, ಶಾಲೆ ಮಕ್ಕಳ ಶೋ ಖರೀದಿಯಲ್ಲಿ ಭ್ರಷ್ಟಾಚಾರ, ಪಿಎಸ್ಐ ನೇಮಕಾತಿಯಲ್ಲಿ ಹಗರಣ ಸೇರಿದಂತೆ ರಾಜ್ಯದ ತುಂಬಾ ಮಾನ ಹರಾಜ್ ಹಾಕಿದ ಶಾಸಕರಿಗೆ ನೈತಿಕತೆ ಇಲ್ಲದೆ ಪ್ರತಿಭಟನೆ ಹಮ್ಮಿಕೊಂಡಿದ್ದು ಹಾಸ್ಯಸ್ಪದವಾಗಿದೆ, ಈಗಲಾದರೂ ಮಾಜಿ ಶಾಸಕರು ಸಮಯ ವ್ಯರ್ಥ ಮಾಡದೆ ಅರ್ಥ ಹೀನಾದ ಪ್ರತಿಭಟನೆಗೆ ಕೈ ಹಾಕಬಾರದೆಂದು ಕಿವಿಮಾತು ಹೇಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ,