ದಾವಣಗೆರೆ ಏ 28: 2023 ರ ವಿಧಾನಸಭಾ ಚುನಾವಣೆ ಇತಿಹಾಸ ಸೃಷ್ಟಿಸಲಿದೆ. ರಾಜಕೀಯವಾಗಿ ಮೈಲಿಗಲ್ಲಾಗಲಿದೆ ಎಂದು ಶೋಷಿತ ವರ್ಗಗಳ ಒಕ್ಕೂಟದ ಮುಖಂಡ ಬಾಡದ ಆನಂದರಾಜ್ ರವರು ತಿಳಿಸಿದರು. ಬಿಜೆಪಿ ಪಕ್ಷದ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಬರುವುದನ್ನ ಕಂಡು ವಿರೋಧ ಪಕ್ಷದವರಿಗೆ ನಡುಕ ಎದುರಾಗಿದ್ದು ಕೋವಿಡ್ ನಲ್ಲಿ ಹೊರ ಬಾರದ ರಾಜಕೀಯ ನಾಯಕರು ಇಂದು ಹಳ್ಳಿ ಹಳ್ಳಿಗೆ ಭೇಟಿ ನೀಡುತ್ತಿದ್ದರು ಬಿಜೆಪಿಗೆ ಸಿಗುವ ಬೆಂಬಲ ಅಪಾರ ಅಮೂಲ್ಯವಾದ್ದು. ಈ ಬಾರೀ ಮತ್ತೆ ಉತ್ತರದಲ್ಲಿ ಬಿಜೆಪಿ ಗೆಲ್ಲುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಜನರು ಸರಳ ಸಜ್ಜನಿಕೆ ವ್ಯಕ್ತಿಗೆ ಬೆಂಬಲಿಸಲಿದ್ದಾರೆ. ಜನರು ಶ್ರೀಮಂತಿಕೆಗಿಂತ ಹೃದಯ ಸಿರಿವಂತ ಬೇಕೆನ್ನುತ್ತಿದ್ದಾರೆ. ನಾಗರಾಜ್ ಲೋಕಿಕೆರೆ ಪ್ರಚಾರ ವೇಳೆ ಕಂಡು ಬಂದ ಮತದಾರರ ಬೆಂಬಲವೇ ಇದಕ್ಕೆ ಕಾರಣ. ಸ್ವ ಇಚ್ಛೆಯಿಂದ ಜನ ಪ್ರಚಾರಕ್ಕೆ ಬರುತ್ತಿದ್ದಾರೆ. ದುಡ್ಡು ಕೊಟ್ಟರು ಬಾರದ ಜನ ಇಂದು ಸ್ವಂತ ಹಣ ಖರ್ಚಿನಿಂದ ದಾವಣಗೆರೆ ಉತ್ತರದಲ್ಲಿ ಪ್ರಚಾರಕ್ಕೆ ಬರುತ್ತಿದ್ದಾರೆ. ಇದಕ್ಕೆ ಮತ್ತಷ್ಟು ಆನೆ ಬಲ ಎಂದರೆ ಸಂಸದರಾದ ಸಿದ್ದೇಶ್ವರ್ ಹಾಗೂ ಹಾಲಿ ಜನಪ್ರಿಯ ಶಾಸಕರಾದ ರವೀಂದ್ರನಾಥ್ ಅವರು ಈ ಜೋಡಿ ನಾಯಕರ ಅಭಿವೃದ್ಧಿ ಕಾರ್ಯಗಳೇ ಬಿಜೆಪಿ ಅಭ್ಯರ್ಥಿ ನಾಗರಾಜ್ ಲೋಕಿಕೆರೆ ಗೆಲುವಿಗೆ ಕಾರಣವಾಗುತ್ತದೆ. ಬಿಜೆಪಿ ಮಾಡಿದ ಆಭಿವೃದ್ಧಿ ಕೆಲಸಗಳೇ ಉತ್ತರದಲ್ಲಿ ಮತ್ತೆ ಬಿಜೆಪಿ ಗೆಲ್ಲಲು ಕಾರಣಗಾಗುತ್ತದೆ. ಸೂರ್ಯ ಚಂದ್ರ ಎಷ್ಟು ಸತ್ಯವೋ ಲೋಕಿಕೆರೆ ನಾಗರಾಜ್ ಗೆಲುವು ಸಹ ಸತ್ಯವೆಂದು ಬಾಡದ ಆನಂದರಾಜ್ ರವರು ಬ್ಯಾಂಕ್ ಗಳ ಆಸ್ಪತ್ರೆಗಳ ಸಿಬ್ಬಂದಿಗಳನ್ನು ಬಿಜೆಪಿ ಪರವಾಗಿ ಮತಯಾಚನೆ ಮಾಡಿದರು.ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಲೋಕಿಕೆರೆ ನಾಗರಾಜ್ ಅವರ ತಂದೆ ಲೋಕಿಕೆರೆ ಹನುಮಂತಪ್ಪ ಸಹೋದರ ಲೋಕಿಕೆರೆ ಸುರೇಶ್. ಬಸವರಾಜ್. ಬಿಜೆಪಿ ಯುವನಾಯಕ ಶ್ಯಾಮನೂರು ಹರೀಶ್.ಹನುಮೇಗೌಡ. ದಲಿತ ಮುಖಂಡ ಬಿ.ಆನಂದ್ ಇನ್ನೂ ಮುಂತಾದವರಿದ್ದರು.