ಬಿಜೆಪಿ ಪರವಾಗಿ ಕುರುಬ ಸಮಾಜ- ಸತ್ಯನಾರಾಯಣ

ಮಾನ್ವಿ,ಏ.೨೩- ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಗೆ ಬೆಂಬಲಸಿದ ನಮ್ಮ ಕುರುಬ ಸಮಾಜವನ್ನು ಈ ಬಾರಿ ಬಿಜೆಪಿ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಸಂಘಟನೆ ಮಾಡುವ ಜವಾಬ್ದಾರಿ ನನ್ನದಾಗಿದೆ ಎಂದು ಸಮಾಜದ ಅಧ್ಯಕ್ಷ ಸತ್ಯನಾರಾಯಣ ಮೂಸ್ಟೂರು ವಕೀಲರು ಹೇಳಿದರು.
ಶುಕ್ರವಾರ ಸಂಜೆ ಬಿಜೆಪಿ ಅಭ್ಯರ್ಥಿ ಬಿ.ವಿ ನಾಯಕ ಸಮ್ಮುಖದಲ್ಲಿ ಗ್ರಾಮಸ್ಥರೊಡನೆ ಪಕ್ಷಕ್ಕೆ ಸೇರ್ಪಡೆಯಾದ ಇವರು ನಮ್ಮ ಸಮಾಜದ ಸ್ವಾಭಿಮಾನದ ದೃಷ್ಟಿಯಿಂದ ಈ ಬಾರಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸುವ ಉದ್ದೇಶವನ್ನು ಹೊಂದಿದ್ದು ಪಕ್ಷದ ಪರವಾಗಿ ತಾಲೂಕ ಮಟ್ಟದಲ್ಲಿ ಕೆಲಸ ಮಾಡುವುದರ ಜೊತೆಗೆ ನಮ್ಮ ಕುರುಬ ಸಮಾಜದ ಮುಖಂಡರಲ್ಲಿ ಹಾಗೂ ಕಾರ್ಯಕರ್ತರಲ್ಲಿ ಮನವರಿಕೆ ಮಾಡಿ ಈ ಬಾರಿ ಭಾರತೀಯ ಜನತಾ ಪಕ್ಷಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಅಧ್ಯಕ್ಷ ಸತ್ಯನಾರಾಯಣ ಮೂಸ್ಟೂರು ವಕೀಲರು ಹೇಳಿದರು.