ಬಿಜೆಪಿ ಪಕ್ಷ ಮಾಡಿದ ಅಭಿವೃದ್ಧಿಗೆ ಮತ ನೀಡುತ್ತಾರೆ

ದೇವದುರ್ಗ,ಫೆ.೨೮-
ರಾಜ್ಯದಲ್ಲಿ ಬಿಜೆಪಿ ಪಕ್ಷದ ಮೇಲೆ ಜನರಿಗೆ ವಿಶ್ವಾಸ ಹೆಚ್ಚಾಗಿದ್ದು ಬಿಜೆಪಿ ಪಕ್ಷ ಮಾಡಿದ ಅಭಿವೃದ್ಧಿಗೆ ಮತನೀಡುತ್ತಾರೆ ದಿನದಿಂದ ದಿನಕ್ಕೆ ಪಕ್ಷಕ್ಕೆ ಸೇರ್ಪಡೆಯಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಶಾಸಕ ಕೆ.ಶಿವನಗೌಡ ನಾಯಕ ತಿಳಿಸಿದರು.
ಎಂ ಕೆ.ಎಚ್. ನಗರದಲ್ಲಿ ಆಯೋಜಿಸಲಾಗಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ತಾಲೂಕಿನ ಬೂಮನಗುಂಡ ಹಾಗೂ ನಿಲವಂಜಿ ಗ್ರಾಮದ ೩೦ಕ್ಕೂ ಅಧಿಕ ಜನರು ಕಾಂಗ್ರೆಸ್ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೇಶದಲ್ಲಿ ಬಿಜೆಪಿಯಿಂದ ಬದಲಾವಣೆ ಸಾಧ್ಯವಾಗಿದೆ ದೇಶ ಅಭಿವೃದ್ಧಿಯಾದರೆ ನಾಡಿನ ಜನ ಸಮೂಹವು ಕೂಡ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಮನೆ ಮಾಡಿದೆ. ಅಲ್ಲದೆ ಕ್ಷೇತ್ರಾದ್ಯಂತೆ ನಾವು ಕೈಗೊಂಡಿರುವ ಹಲವಾರು ಜನಪರವಾದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿ ಸಹಸ್ರಾರಾರು ಸಂಖ್ಯೆಯಲ್ಲಿ ಯುವಜನತೆ ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದಾರೆ. ಜನರ ಸಹಕಾರದೊಂದಿಗೆ ದೇಶ ಹಾಗೂ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಿಜೆಪಿ ಅಧಿ?ಕಾರ ನಿಶ್ಚಿತ ಎಂದು ಹೇಳಿದರು.
ಸೇರ್ಪಡೆಯಾದ ಕಾರ್ಯಕರ್ತರಿಗೆ ಬಿಜೆಪಿ ಅಧ್ಯಕ್ಷಕೆ.ಜಂಬಣ್ಣ ನೀಲಗಲ್ ಹಾಗೂ ಎಪಿಎಂಸಿ ಅಧ್ಯಕ್ಷ ಪ್ರಕಾಶ್ ಪಾಟೀಲ್ ಬಿಜೆಪಿ ಪಕ್ಷದ ಶಾಲು ಹಾಕುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಅನಂತರಾಜ ನಾಯಕ, ನಿರಂಜನ್ ಬಳೆ, ಗೋಪಾಲಪ್ಪಗೌಡ ಚಿಂತಲಕುಂಟಿ, ರುದ್ರಗೌಡ ಮಾಚನೂರುಕೆಂಚಣ್ಣ ಪೂಜಾರಿ ಕೊತ್ತದೊಡ್ಡಿ, ನಾಗರಾಜ ಪಾಟೀಲ್ ಗೋಪಳಾಪುರ, ಚಂದ್ರಕಾಂತ ತಾತ. ಮುರುಗೇಂದ್ರ ಮಸರಕಲ್, ಶಿವು ಸಾಹುಕಾರ ಇಸ್ಮಾಯಿಲ್ ಮಸರಕಲ್, ಭಗವಂತರಾಯ ನಾಯಕ, ವೀರೇಶ ನಾಯಕ , ಬಸವರಾಜ ಕೊಪ್ಪರು, ಬಸನಗೌಡ ವೆಂಕಟಾಪುರ ನರಸಪ್ಪ ಹರಳೆಬಂಡಿ, ದೇವಣ್ಣ ಕಾಸಂಗೇರಾ, ಚಿದಾನಂದ ಇರಬಗೇರಾ, ಬಾಲಪ್ಪ ಬಡಿಗೇರ, ಮರೆಪ್ಪ ಬಡಿಗೇರ, ರಾಮಣ್ಣ ಹೇಮನೂರು, ಮಲ್ಲು ಪೂಜಾರಿ ಬಿ.ಗಣೇಕಲ್, ಸೇರಿದಂತೆ ಅನೇಕರಿದ್ದರು