ಬಿಜೆಪಿ ಪಕ್ಷದ ಸಾಧನೆ ಗ್ರಾಮೀಣ ಪ್ರದೇಶಗಳಲ್ಲಿ ಪ್ರಚಾರ

ಲಿಂಗಸುಗೂರು,ಮಾ.೦೫- ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಲಿಂಗರಾಜ ಕೋಟೆ ವಕೀಲರು ಇವರು ಇಂದು ಕರಡಕಲ್ ತಾಂಡಾದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡುತ್ತಾ, ತಮ್ಮ ಬೆಂಬಲಿಗರೊಂದಿಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಮುಖಾಂತರ ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಹಲವು ಯೋಜನೆಗಳು ಬಗ್ಗೆ ಮಾಹಿತಿ ನೀಡುತ್ತಾ, ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.
ಲಿಂಗಸುಗೂರು ಮೀಸಲು ಕ್ಷೇತ್ರಕ್ಕೆ ನಾನು ಕೂಡ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತದಲ್ಲಿ ನಡೆದಿರುವ ಅಭಿವೃದ್ಧಿ ಯೋಜನೆಗಳ ಕುಂಟುತ್ತಾ ಸಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಶಾಸಕರು ವಿಫಲರಾಗಿದ್ದಾರೆ ಎಂಬುದು ಈಗಾಗಲೇ ಎಲ್ಲಾಕಡೆ ಬಹು ಚರ್ಚಿತ ವಿಷಯವಾಗಿದೆ ಎಂಬುದು ಈಗಾಗಲೇ ಶಾಸಕರ ವಿರುದ್ಧ ಗ್ರಾಮೀಣ ಪ್ರದೇಶದ ಜನರು ಮಾತನಾಡುತ್ತಿದ್ದಾರೆ ಎಂದರು.
ಹಟ್ಟಿ ಮುದಗಲ್ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಇದಕ್ಕೆಲ್ಲಾ ಕಾರಣ ಈಗಿರುವ ಶಾಸಕರ ಆಡಳಿತ ವೈಫಲ್ಯದಿಂದ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಗ್ರಾಮೀಣ ರಸ್ತೆಗಳ ಸಂಪೂರ್ಣವಾಗಿ ಹದಗೆಟ್ಟು ಎಕ್ಕುಟ್ಟಿ ಹೋಗಿದೆ. ಕ್ಷೇತ್ರದಲ್ಲಿ ಸಮಸ್ಯೆಗಳ ತಾಂಡವವಾಡುತ್ತಿವೆ. ಇನ್ನು ವಿದ್ಯಾರ್ಥಿಗಳಿಗೆ ಬಸ್‌ಗಳ ಸೌಕರ್ಯ ಇಲ್ಲದೆ ಖಾಸಗಿ ವಾಹನಗಳ ಮೂಲಕ ಶಾಲಾ ಕಾಲೇಜುಗಳಿಗೆ ಹೋಗುವ ಸ್ಥಿತಿ ಹೇಳತೀರದು ಕೃಷಿ ಚಟುವಟಿಕೆ ತೊಡಗಿರುವ ರೈತರಿಗೆ ಕೂಲಿಕಾರರಿಗೆ ಜಮೀನುಗಳಿಗೆ ಹೋಗಲು ರಸ್ತೆ ಸಮರ್ಪಕವಾಗಿ ನಿರ್ಮಾಣವಾಗದೆ ರೈತರು ಕೃಷಿ ಕೂಲಿಕಾರರು ಇಲ್ಲಿರುವ ಆಡಳಿತಕ್ಕೆ ಶಾಪ ಹಾಕುತ್ತಿದ್ದಾರೆ ಎಂದು ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಲಿಂಗರಾಜ ಕೋಟೆ ವಕೀಲರು ಇವರು ಸಂಜೆ ವಾಣಿ ಪತ್ರಿಕೆ ವರದಿಗಾರರೊಂದಿಗೆ ಮಾತನಾಡಿದರು .
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಡಗೈ ಸಮುದಾಯಕ್ಕೆ ಸೇರಿದ ನಾನು ಲಿಂಗರಾಜ ಕೋಟೆ ವಕೀಲರು ಇವರು ಕ್ಷೇತ್ರದಲ್ಲಿ ನಿಮ್ಮ ಸೇವೆ ಮಾಡಲಿಕ್ಕೆ ಅವಕಾಶ ನೀಡಬೇಕು ಎಂದು ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ
ತಾಲ್ಲೂಕಿನ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಅದರಂತೆ ನಿಮ್ಮ ಸೇವೆ ಮಾಡಲಿಕ್ಕೆ ಬಂದಿದ್ದೆನೆ ಹಾಗೂ ಮಾದಿಗ ಸಮುದಾಯ ನಿಮ್ಮ ಮಗನಿಗೆ ಆಶಿರ್ವಾದ ಮಾಡಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗೆ ಸಹಕಾರಿ ಯಾಗಬೇಕು ಎಂಬುದು ನನ್ನ ಕಳಕಳಿಯ ಮನವಿ ಸಾರ್ವಜನಿಕರಲ್ಲಿ ಬಿಜೆಪಿ ಪಕ್ಷದ ಅನೇಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಡಾಕು ನಾಯಕ ವಕೀಲರು, ಸೋಮಪ್ಪ, ಚವಾಣ್, ಪ್ರಕಾಶ್, ದೇವರಾಜ್, ಸೋಮಲೆಪ್ಪ, ಟೋಪಣ್ಣ ಸೇರಿದಂತೆ ಇತರರು ಬಿಜೆಪಿ ಪಕ್ಷದ ಸಾಧನೆಗಳು ತಿಳಿಸಿದರು.