
ಸಿರುಗುಪ್ಪ ಜ 12 : ನಗರದ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪಕ್ಷದ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಇಂದು ಗ್ರಾಮ ಮಟ್ಟದಿಂದ ಕೇಂದ್ರದವರೆಗೂ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿರುವುದು ಇತಿಹಾಸವಾಗಿದೆ, ಮಹಾತ್ಮ ಗಾಂಧಿಜೀಯವರ ಕನಸಿನ ಭಾರತ ನಿರ್ಮಾಣವಾಗುವ ದಾಪುಗಾಲು ಬಿಜೆಪಿ ಸರ್ಕಾರದಿಂದ ಮಾತ್ರ ಸಾಧ್ಯವಾಗುತ್ತಿದೆ, ಮುಂದಿನ ದಿನಗಳಲ್ಲಿ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಬಡತನ ರೇಖೆಗಿಂತ ಹಿಂದುಳಿದ ಪ್ರತಿಯೊಬ್ಬರಿಗೂ ಸ್ಥಳೀಯ ಪ್ರತಿನಿಧಿಗಳೊಂದಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳನ್ನು ನೀಡಲಾಗುತ್ತದೆ, ಗ್ರಾಮೀಣ ಭಾಗದ ಅಭಿವೃದ್ದಿ ದೇಶದ ಅಭಿವೃದ್ದಿ ಸಾಧ್ಯವಾಗುತ್ತದೆ, ಗ್ರಾಮೀಣ ಭಾಗದ ಯುವಕರು ಯುವತಿಯರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡುವ ಉದ್ಯೋಗದ ತರಬೇತಿಗಳನ್ನು ಪಡೆದುಕೊಂಡು ಸ್ವ ಉದ್ಯೋಗವನ್ನು ಕಂಡು ಕೊಂಡು ಆರ್ಥಿಕವಾಗಿ ಸದೃಢವಾಗ ಬೇಕು, ಕೆಲವು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಕೆಲವೇ ಕೆಲವು ಮತಗಳ ಅಂತರದಿಂದ ಪರಾಭವಗೊಂಡರೆ ಅವರು ಸೋತ್ತಿದ್ದೆನೆ ಎಂದು ಕುಗ್ಗದೆ ನಿಮ್ಮೊಂದಿಗೆ ಶಾಸಕ ಸೋಮಲಿಂಗಪ್ಪ ಇದ್ದಾನೆ ಇಂದಿನ ಸೋಲು ನಾಳೇಯ ಗೆಲ್ಲು ಆಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಬಿಜೆಪಿ ಪಕ್ಷದವತಿಯಿಂದ ಬಿಜೆಪಿ ಪಕ್ಷದ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳಿಗೆ ಸನ್ಮಾನಿಸಿ ಗೌರವಿಸಿದರು.
ಇದೆ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚೆನ್ನಬಸವನಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಆರ್.ಸಿ.ಪೊಂಪನಗೌಡ, ತೆಕ್ಕಲಕೋಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮೀ ಮಾರುತಿ, ಮುಂಖಡರಾದ ಕೋಟೇಶ್ವರರೆಡ್ಡಿ, ಪಕ್ಕಿರಪ್ಪ, ದಮ್ಮೂರು ಸೋಮಪ್ಪ, ವೀರನಗೌಡ, ನಾಗೇಶಪ್ಪ, ಅನಿಲನಾಯ್ಡು, ಸೂರಿಬಾಬು, ತೆಕ್ಕಲಕೋಟೆ ಸಿದ್ದಪ್ಪ, ಮಲ್ಲನಗೌಡ, ಪಿಡ್ಡಯ್ಯ, ಗಂಗಪ್ಪ, ಮೇಕಾಲಿ ವೀರೇಶ, ಮಹಾದೇವ, ವಿಕ್ರಮಜೈನ್, ಹುಲುಗಪ್ಪ, ಮಲ್ಲಿಕಾರ್ಜುನ, ಶರಣಬಸವ, ರಾಮಮೂರ್ತಿ, ಹೊನ್ನಪ್ಪ,