ಬಿಜೆಪಿ ಪಕ್ಷದ ಬೃಹತ್ ಅದ್ದೂರಿ ರೋಡ ಶೋ

ಹುಮನಾಬಾದ್ : ಮಾ.4:ವಿಜಯ ಸಂಕಲ್ಪ ಯಾತ್ರೆ ಹಿನ್ನಲೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮಾಜಿ ಸಿಎಂ. ಜಗದೀಶ್ ಶಟ್ಟರ್ ನೇತೃತ್ವದಲ್ಲಿ ಬಿಜೆಪಿ ಪಕ್ಷದ ಹಿರಿಯ ನಾಯಕರಿಂದ ಬೃಹತ್ ರೋಡ ಶೋ ನಡೆಯಿತು.
ಪಟ್ಟಣದ ರಾಷ್ಟ್ರೀಯ ಹೆದ್ದಾರಿಯ ಶಿವಾಜಿ ವೃತ್ತ, ಹಳೆ ಪುರಸಭೆ ಕಚೇರಿ, ಬಸವೇಶ್ವರ ವೃತ್ತ, ಬಾಲಾಜಿ ಮಂದಿರ, ಸರ್ದಾರ ವಲ್ಲಾಬಾಯಿ ಪಟೇಲ್ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಕೇಂದ್ರ ಬಸ್ ನಿಲ್ದಾಣ, ಎಪಿಎಂಸಿ ಗೇಟ್ ಮಾರ್ಗವಾಗಿ ಮಾಜಿ ಸಂಸದ ದಿ. ರಾಮಚಂದ್ರ ವೀರಪ್ಪ ಆರ್ಯ, ವೃತ್ತದ ವರೆಗೆ ಬೃಹತ್ ರೋಡ ಸೋ ನಡೆಯಿತು.
ರೋಡ ಸೋ ನಡೆಯುವ ದಾರಿಯುದ್ದಕ್ಕೂ ಲಂಬಾಣಿ ಕುಣಿತ, ಮಹಿಳೆಯರಿಂದ ಕುಂಬ ಕಳಸ ಮೆರವಣಿಗೆ, ಬ್ರಾಸ್ ಬ್ಯಾಂಡ್ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಯುವಕರು ಡಿಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಪ್ರಭು ಚವ್ಹಾಣ, ಸಚಿವ ಬಿ. ಶ್ರೀರಾಮಲು, ವಿಧಾನ ಪರಿಷತ್ ಸಭಾಪತಿ ರಘುನಾಥ ಮಲ್ಕಾಪೂರೆ, ಬಾಬುರಾವ ಚಿಂಚನಸೂರ, ಬಿಎಸ್‍ಎಸ್‍ಕೆ ಅಧ್ಯಕ್ಷ ಸುಭಾಷ ಕಲ್ಲೂರ, ಅಮರನಾಥ ಪಾಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ್, ಬಸವರಾಜ ಆರ್ಯ, ವಿಜಯಕುಮಾರ ಪಾಟೀಲ್ ಗಾದಗಿ, ಬಿಜೆಪಿ ಯುವ ಮುಖಂಡ ಡಾ. ಸಿದ್ದು ಪಾಟೀಲ್, ಮಂಡಲ ಅಧ್ಯಕ್ಷ ಪ್ರಭಾಕರ್ ನಾಗರಾಳೆ, ರಾಜು ಭಂಡಾರಿ, ಪುರಸಭೆ ಸದಸ್ಯ ಸುನಿಲ್ ಪಾಟೀಲ್ , ಅನಿಲ ಪಸಾರ್ಗಿ, ರಮೇಶ ಕಲ್ಲೂರ, ಶ್ರೀನಾಥ್ ದೇವಣಿ ಇದ್ದರು.