ಬಿಜೆಪಿ ಪಕ್ಷದ ಆಡಳಿತದಿಂದ ಸಂವಿಧಾನ- ಪ್ರಜಾಪ್ರಭುತ್ವಕ್ಕೆ‌ ಧಕ್ಕೆ

ಜಗಳೂರು.ಮಾ‌೧೧; ಬಿಜೆಪಿ ಪಕ್ಷದ ಆಡಳಿತದಿಂದ ಸಂವಿಧಾನ ಪ್ರಜಾಪ್ರಭುತ್ವಕ್ಕೆ‌ ಧಕ್ಕೆ ಉಂಟಾಗಿದೆ. ಸಂವಿಧಾನ,ಸಾಮಾಜಿಕ ನ್ಯಾಯದಮೇಲೆ ನಂಬಿಕೆಯಿಟ್ಟವರಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.ಜಗಳೂರು ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು ಸಂಘ ಪರಿವಾರದ ಗೋಲ್ವಾಲ್ಕರ್,ಸಾರ್ವಕರ್ ಸಾಮಾಜಿಕನ್ಯಾಯ,ಸಂವಿಧಾನದ ಒಂದೂ ಹೇಳಿಕೆಗಳಿಲ್ಲ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಧರ್ಮಾತೀತ,ಜಾತ್ಯಾತೀತ ಸಮಾನತೆಯ ವಿರುದ್ದ ಸಂಘ ಪರಿವಾರವಿದೆ. ವಿವೇಕಾನಂದರ ಹೇಳಿಕೆಯಂತೆ ಪುರೋಹಿತ ಶಾಹಿ,ಮನುವಾದಿಗಳನ್ನು ಬೆಂಬಲಿಸುವವರಿಂದ ದೇಶಕ್ಕೆ ಶಾಪ ಎಂದಿದ್ದಾರೆ ಎಂದರು.ರಾಜ್ಯದಲ್ಲಿ ಪರಿಶಿಷ್ಟ ಜಾತಿ ಶೇ.17.15 ಪರಿಶಿಷ್ಟ ವರ್ಗ 6.95 ಸೇರಿ ಶೇ.24.1 ರಷ್ಟು ಪರಿಶಿಷ್ಠ ಸಮುದಾಯದವರು ವಾಸ ವಾಗಿದ್ದಾರೆ. ನಾನು ಮುಖ್ಯಮಂತ್ರಿಯಾದ ನಂತರ ವಿವಿಧ ಸಮುದಾಯಗಳ ಜನ ಸಂಖ್ಯೆಗಳಿಗನು ಗುಣವಾಗಿ ಎಸ್.ಇ.ಪಿ ಟಿ.ಎಸ್.ಪಿ ಕಾನೂನು ಜಾರಿಗೊಳಿಸಿದೆ.ಆದರೆ ಬಿಜೆಪಿ ಯವರು ದೇಶದ ಯಾವ ರಾಜ್ಯದಲ್ಲಿ ಪರಿಶಿಷ್ಠ ಸಮುದಾಯದ ಪರ ಏಕೆ ಕಾನೂನು ಜಾರಿಗೊಳಿಸಿಲ್ಲ ಹಾಗಾದರೆ ಸಮುದಾಯ ದವರು ಏಕೆ ಬಿಜೆಪಿಗೆ ಮತನೀಡಬೇಕು ಎಂದು ಪ್ರಶ್ನಿಸಿದರು.ಪ್ರಧಾನಿ ಅವರ ಸಬ್ ಕಾಸಾಥ್ ಸಬ್ ಕಾ ವಿಕಾಸ್ ಎಂದು ಹೇಳು ವವರು.ಶೋಷಿತರಿಗೆ ಸಾಮಾಜಿಕ ನ್ಯಾಯ ಸಿಕ್ಕಿದೆನಾ? ಬಿಜೆಪಿ ಪಕ್ಷದ ಆಡಳಿತದಲ್ಲಿ 5 ವರ್ಷದಲ್ಲಿ ಪರಿಶಿಷ್ಠ ಸಮುದಾಯದವರಿಗೆ 27 ಸಾವಿರ ಕೋಟಿ ಮಾತ್ರ ಆದರೆ ನಮ್ಮ ಕಾಂಗ್ರೆಸ್ ಆಡಳಿತಾವಧಿ ಯಲ್ಲಿ 88‌ಸಾವಿರ ಕೋಟಿ ಅನುದಾನ.ಇದು ರಾಜಕೀಯ ಇಚ್ಛಾ ಶಕ್ತಿ ಬದ್ದತೆ ಅಗತ್ಯ ಎಂದುರುಬಸವರಾಜ್ ಬೊಮ್ಮಾಯಿ ಅವರ ಶೇ.40 ಪರ್ಸಂಟೇಜ್ ಸರಕಾರ ಎಂಬುದು ಗುತ್ತಿಗೆದಾರರು ನೊಂದು ಹೇಳಿದ ಮಾತು.ಪಿ.ಎಸ್.ಐ ನೇಮಕಾತಿ ಲಂಚ ಪ್ರಕರಣ,ಭ್ರಷ್ಟಾಚಾರದ ಕುರಿತು ಅನುದಾನ ರಹಿತ ಸಂಸ್ಥೆಗಳ ಅಧ್ಯಕ್ಷ ಹೇಳಿಕೆ ಸುಳ್ಳಾ? ಮಾಡಾಳ್ ವಿರುಪಾಕ್ಷಪ್ಪ ನವರ ಪುತ್ರನ ಲೋಕಾಯುಕ್ತರಿಗೆ ಸಿಕ್ಕಿರುವುದಕ್ಕೆ ಸಾಕ್ಷಿಬೇಕಾ? ಹಾಗಾದರೆ ತಂದೆ ಶಾಸಕ ಹಾಗೂ ಸಚಿವರು ಎಷ್ಟು ಪಡೆದಿರ ಬಹುದು ಇದನ್ನು ಮನಗಾಣಬೇಕು.7 ಕೆಜಿ ಅಕ್ಕಿ ವಿತರಣೆ ಇಳಿಕೆಯನ್ನು ಯಡಿಯೂರಪ್ಪನವರಿಗೆ ಪ್ರಶ್ನಿಸಿದರೆ ಕೋವಿಡ್ ನೆಪ ಹೇಳಿದರು.ಅಲ್ಲದೆ ಅಗತ್ಯ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿದ್ದಾರೆ.ಇಂತಹವರಿಂದ ರಾಜ್ಯದ ಉಳಿವು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.