ಬಿಜೆಪಿ ಪಕ್ಷದಿಂದ ಶಿಲ್ಪಾ ಪಾಟೀಲ್ ನಾಮಪತ್ರ ಸಲ್ಲಿಕೆ


ಸಂಜೆವಾಣಿ ವಾರ್ತೆ
ಸಂಡೂರು :ಏ: 18: ಸಂಡೂರು ವಿಧಾನಸಭಾ ಕ್ಷೇತ್ರಕ್ಕೆ ಸೋಮುವಾರ ಉತ್ತಮದಿನವಾಗಿದೆ ಎಂದು ಬಿಜೆಪಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಶಿಲ್ಪಾ ಪಾಟೀಲ್ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.
ಬಹುದಿನಗಳಿಂದ ಮತದಾರರಿಂದ ದೂರ ಉಳಿದು ರಾಜಕೀಯವೇ ಬೇಡ ಎನ್ನುವ ಮನಸ್ಥಿತಿಯಲ್ಲಿದ್ದ ಶಿಲ್ಪಾ ಅವರು ತಮ್ಮ ಪತಿಯನ್ನು ಕಳೆದು ದು:ಖಿತರಾಗಿದ್ದರು, ಕಾರಣ ಅವರ ಪತಿ  ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಸ್ವಲ್ಪದರಲ್ಲಿಯೇ ಸೋಲನ್ನು ಅನುಭವಿಸಿದ್ದರು, ಅದರೆ ಈ ಬಾರಿ ಪಕ್ಷದ ಕಾರ್ಯಕರ್ತರು, ಹಾಗೂ ಮುಖಂಡರಾದ ಕಾರ್ತಿಕ್ ಘೋರ್ಪಡೆಯವರು ಗಂಡನನ್ನು ಕಳೆದುಕೊಂಡಿದ್ದಾಳೆ, ಪಕ್ಷಕ್ಕೆ ದುಡಿದಿದ್ದಾರೆ, ಸ್ಥಳೀಯರಾಗಿದ್ದಾರೆ ಎಲ್ಲರಿಗೂ ಕೈಗೆ ಸಿಗುವ ವ್ಯಕ್ತಿಯಾಗುತ್ತಾರೆ ಎನ್ನುವ ಅಂಶವನ್ನು ಇಟ್ಟುಕೊಂಡು ಎಷ್ಟೇ ಪ್ರಯತ್ನ ಮಾಡಿದರೂ ಬೇರೆಯವರಿಗೆ ಟಿಕೇಟ್ ನೀಡದೇ ಸ್ಥಳೀಯ ಅಭ್ಯರ್ಥಿಗೆ ಟಿಕೇಟ್ ಕೊಡಿಸಿದ್ದು ಬಹು ವಿಶೇಷ ಹಾಗೂ ಬಹುದೊಡ್ಡ ನಿರ್ಧಾರವೇ ಸರಿ, ಕಾರಣ ಈಗಾಗಲೇ ಜನತೆ ಈ ಹಿಂದಿನ ಚುನಾವಣೆಯನ್ನು ಮರೆತಿದ್ದರು, ಗೆದ್ದೆ ಎನ್ನುವ ಗುಂಗಿನಲ್ಲಿರುವ ಕಾಂಗ್ರೇಸ್ ಅಭ್ಯರ್ಥಿ ಯಾಟ್ರಿಕ್ ಅಗಿದ್ದ ಈ. ತುಕರಾಂ ಅವರಿಗೆ ಈ ಬಾರಿ ತೀವ್ರ ಪೈಪೋಟಿ ನೀಡಲು ಒಂದು ಜೆ.ಡಿ.ಎಸ್. ಮತ್ತೋಂದು ಕಡೆ ಬಿಜೆಪಿ ಹಾಗೂ ಕೆ.ಅರ್.ಪಿ.ಪಿ. ಪೈಪೋಟಿ ನೀಡಲಿವೆ ಎಂಬುದು ಸ್ಪಷ್ಟ, ಒಟ್ಟಾರೆಯಾಗಿ ತ್ರಿಕೋನ ಸ್ಪರ್ಧೆ ಏರ್ಪಡುವ ಎಲ್ಲಾ ಲಕ್ಷಣಗಳು ಕ್ಷೇತ್ರದಲ್ಲಿ ಗೋಚರಿಸುತ್ತಿವೆ.