ಬಿಜೆಪಿ ಪಕ್ಷದಿಂದ ಎಸ್.ವಿ.ರಾಮಚಂದ್ರಪ್ಪ ಗೆ ಗ್ರೀನ್ ಸಿಗ್ನಲ್.

ಜಗಳೂರು.ಏ.೧೩: ಜಗಳೂರು ವಿಧಾನ ಸಭಾ ಎಸ್. ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಹಾಲಿ ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ ಇತ್ತೀಚೆಗೆ ಹೈಕಮಾಂಡ್ ಬಿಡುಗಡೆಗೊಳಿಸಿ ದ ಪಟ್ಟಿಯಲ್ಲಿ ಬಿಫಾರಂ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಪಟ್ಟಿ ಗೊಂದಲದ ಗೂಡಾಗಿದ್ದು.ಮತ ದಾರ ಪ್ರಭುಗಳ ಚಿತ್ತ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯತ್ತ ಕುತೂಹಲ ಮೂಡಿಸಿರುವುದು ಅಕ್ಷರಶಃ ಸತ್ಯವಾಗಿದೆ.ಹೌದು ಬಿಜೆಪಿ ಪಕ್ಷದಿಂದ ಶಾಸಕ ಎಸ್.ವಿ‌.ರಾಮಚಂದ್ರ  ಹೆಸರನ್ನು ಹೊರತುಪಡಿಸಿ ಬೇರೊಬ್ಬ ಸ್ಪರ್ಧಾಳು ಇಲ್ಲದೆ ಹೈ ಕಮಾಂಡ್ ನ ಸ್ಪಷ್ಟ ನಿರ್ಧಾರಕ್ಕೆ ಸಾಕ್ಷಿಯಾಗಿದೆ.ಕ್ಷೇತ್ರದಲ್ಲಿ ಕೆಲ ದಿನ ಗಳಿಂದ ನಾನೊಬ್ಬ ಬಿಜೆಪಿ ಪಕ್ಷದ ಆಕಾಂಕ್ಷಿ ಎಂದು ತಮ್ಮದೇ ಚೌಕಟ್ಟಿನಲ್ಲಿ ಪ್ರಚಾರ ಸಭೆ ಸಮಾರಂಭಗಳಿಗೆ ಮುಂದಾಗಿದ್ದ ನಿವೃತ್ತ ಡಿವೈಎಸ್ ಪಿ ತಮಲೇಹಳ್ಳಿ ಕಲ್ಲೇಶಪ್ಪ ಅವರು ಸಂಚಲನ ಮೂಡಿಸಿದ್ದರು ಆದರೆ ಬಿಜೆಪಿ ವರಿಷ್ಠರ ಲೆಕ್ಕಾಚಾರದಂತೆ ಅವರ ಪ್ರಯತ್ನಕ್ಕೆ ಮಣೆಹಾಕದೆ ಕ್ಲೀನ್ ಸ್ವಿಪ್ ನೀಡಿರುವುದು ಕೆಲ ಅಭಿ ಮಾನಿಗಳನ್ನು ದಿಗ್ಭ್ರಾಂತಿಗೊಳಿಸಿದೆ.ಶಾಸಕ ಎಸ್.ವಿ.ಆರ್ ಬಗ್ಗೆ ಮತದಾರನ ನಿಲುವು:- ಕ್ಷೇತ್ರದಲ್ಲಿ ಅರಸೀಕೆರೆ ಹೋಬಳಿ 7 ಗ್ರಾಮಪಂಚಾಯಿತಿಗಳನ್ನೊಳ ಗೊಂಡಂತೆ 29 ಗ್ರಾಮಪಂಚಾಯಿತಿಗಳು ಹಾಗೂ 1 ಪಟ್ಟಣ ಪಂಚಾಯಿತಿ ವ್ಯಾಪ್ತಿ ಮತದಾರರು.ಶಾಸಕ ಎಸ್.ವಿ. ರಾಮಚಂದ್ರ ಸಾಧು ಸ್ವಭಾವ,ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಸೇವೆ ಗೈದ ರಾಜಕಾರಣ ತೃಪ್ತಿ ತಂದಿದೆ.ಅಲ್ಲದೆ ಅವರ ಉತ್ಸಾಹಭರಿತ ಭಾಷಣಗಳು,ಮೂರು ಶಾಶ್ವತ ನೀರಾವರಿ ಯೋಜನೆಗಳು ಸಾಕಾರ ಗೊಳ್ಳಲು ನಡೆಸಿದ ಹೊರಾಟ,ರಸಮಂಜರಿ ಕಾರ್ಯಕ್ರಮಗಳ ಹಾಗೂ ಕ್ರೀಡಾಭಿಮಾನಿಗಳ ಕಣ್ಮನ ಸೆಳೆದ ರಾಜ್ಯ ಮಟ್ಟದ ಕ್ರೀಡಾ ಆಯೋಜನೆ,ಅಭಿವೃದ್ದಿ ಕಾಮಗಾರಿಗಳು,ವಾಲ್ಮೀಕಿ ನಿಗಮದಿಂದ ಕ್ಷೇತ್ರಕ್ಕೆ ತಂದಿರುವ ಅನುದಾನಗಳು ಮತದಾರರಲ್ಲಿ ಮತ್ತೊಮ್ಮೆ ಎಸ್ ವಿ ಆರ್ ಶಾಸಕರಾಗಿ ಸಚಿವಸಂಪುಟ ಸೇರಬೇಕಿದೆ ಎಂಬ ಸ್ಪಷ್ಟ ನಿಲುವು ಹೊಂದಿದ್ದಾರೆ.