ಬಿಜೆಪಿ ಪಕ್ಷದಲ್ಲಿ ಪದಾಧಿಕಾರಿಗಳ ಬದಲಾವಣೆಯ ಪರ್ವ ಪ್ರಾರಂಭ

ಕೋಲಾರ, ಮೇ ೨೧೦: ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಬಿಜೆಪಿ ಪಕ್ಷವು ಈಗಾ ವಿಧಾನ ಸಭೆ ಚುನಾವಣೆಯಲ್ಲಿ ಮತದಾರರ ಪ್ರಭುಗಳು ಮಕಾಡೆ ಮಲಗಿಸಿರುವ ಹಿನ್ನಲೆಯಲ್ಲಿ ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಪ್ರಬಲ ನಾಯಕರನ್ನು ಪಕ್ಷದಲ್ಲಿ ನೇಮಕ ಮಾಡಿ ಕೊಂಡು ಪಕ್ಷವನ್ನು ಸಂಘಟಿಸ ಬೇಕೆಂಬ ಸೂಚನೆಯನ್ನು ಹೈಕಮಾಂಡ್ ಜಾರಿ ಮಾಡಿದ ಹಿನ್ನಲೆಯಲ್ಲಿ ಬಿಜೆಪಿ ಪಕ್ಷದಲ್ಲಿ ಪದಾಧಿಕಾರಿಗಳ ಸ್ಥಾನವು ಗರಿಕೆದರಿದೆ.
ವಿಧಾನ ಸಭಾ ಚುನಾವಣೆಯಲ್ಲಿ ಭಾರೀ ಮರ್ಮಾಘಾತಕ್ಕೆ ಒಳಗಾಗಿರುವ ಬಿಜೆಪಿ ಪಕ್ಷದಲ್ಲಿ ಇದೀಗ ಲೋಕಸಭಾ ಚುನಾವಣೆಯತ್ತ ಗಮನ ಹರಿಸಿದ್ದು ಪ್ರಬಲ ಹಿಂದುತ್ವ ಹಿನ್ನಲೆಯುಳ್ಳವರಿಗೆ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ನೇಮಕ ಮಾಡಲು ಚಿಂತನೆ ನಡೆಸಿದೆ
ರಾಜ್ಯದಲ್ಲಿ ಲೋಕಸಭಾ ಚುನಾವಣೆಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ. ಹೀಗಾಗಲಿ ಬಿಜೆಪಿ ಪಕ್ಷವು ಎಲ್ಲಾ ಸ್ಥಾನಗಳನ್ನು ಗೆಲ್ಲಲು ಅವಶ್ಯಕತೆ ಇರುವಂತ ಎಲ್ಲಾ ಮಾರ್ಗಗಳನ್ನು ಸಿದ್ದ ಪಡೆಸಿ ಕೊಳ್ಳ ಬೇಕೆಂದು ದೆಹಲಿಯ ಹೈಕಮಾಂಡ್ ಸೂಚಿಸಿದೆ
ರಾಜ್ಯದಲ್ಲಿ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ೧೦ಕ್ಕೂ ಹೆಚ್ಚು ಮಂದಿ ಅಕಾಂಕ್ಷಿಗಳಿದ್ದಾರೆ. ಈ ಪೈಕಿ ಸಿ.ಟಿ.ರವಿ, ಆರ್.ಅಶೋಕ್,ಅರವಿಂದ ಲಿಂಬಾವಳಿ,ಬಿಶ್ರೀರಾಮುಲು ಹೆಸರು ಮುಂಚೊಣಿಯಲ್ಲಿದೆ.ಈ ಭಾರಿ ಒಕ್ಕಲಿಗರಿಗೆ ಅಧ್ಯಕ್ಷ ಸ್ಥಾನ ಒಲಿಯುವಂತ ಸಾಧ್ಯತೆ ಇದೆ ಎನ್ನಲಾಗಿದೆ. ಲಿಂಗಾಯಿತ, ವೀರಶೈವ ಮುಖಂಡರು,ಕುರುಬ ಹೀಗೆ ಜಾತಿವಾರು ಲೆಕ್ಕಚಾರಗಳು ನಡೆಯುತ್ತಿದೆ. ಅದರೆ ಎಲ್ಲವನ್ನು ಮೀರಿ ಮುಂದಿನ ಅವಧಿಯಲ್ಲಿ ಅಧಿಕಾರ ಸ್ಥಾಪನೆ ಮಾಡಲು ಬಿಜೆಪಿಗೆ ನಿರ್ಧರಿಸಿದೆ.
ಪ್ರಮುಖವಾಗಿ ಕಾಂಗ್ರೇಸ್ ಪಕ್ಷದಲ್ಲಿ ಒಕ್ಕಲಿಗರು ರಾಜ್ಯ ಅಧ್ಯಕ್ಷರಾಗಿರುವುದರಿಂದ ಬಿಜೆಪಿ ಪಕ್ಷದಲ್ಲಿಯೂ ಅಧ್ಯಕ್ಷ ಸ್ಥಾನವನ್ನು ಒಕ್ಕಲಿಗರಿಗೆ ನೀಡ ಬೇಕೆ ಅಥವಾ ವೀರಶೈವ ಲಿಂಗಾಯಿತರಿಗೆ ನೀಡ ಬೇಕೆಂಬ ಗೊಂದಲದಲ್ಲಿ ಮುಳುಗಿದೆ. ಯಾರಿಗೆ ಪ್ರಮುಖ್ಯತೆ ನೀಡಿದರೆ ಪಕ್ಷವನ್ನು ಸಧೃಢವಾಗಿ ಸಂಘಟಿಸಿ ಮುಂದಿನ ಚುನಾವಣೆಯನ್ನು ಎದುರಿಸಲು ಸಾಧ್ಯ ಎಂಬ ಶಾಧಕ,ಭಾದಕಗಳ ಕುರಿತು ಚಿಂಥನ-ಮಂಥನದಲ್ಲಿ ತೊಡಗಿದೆ.
ಹಾಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಯಾವೂದೇ ಕ್ಷಣದಲ್ಲಿ ಪಕ್ಷದ ಹೈಕಮಾಂಡ್ ಸೂಚಿಸುವ ಸಾಧ್ಯತೆಯಿದೆ. ಇದರ ಜೂತೆಗೆ ಈ ಭಾರಿಯ ಚುನಾವಣೆಯಲ್ಲಿ ವೀರಶೈವ ಲಿಂಗಾಯಿತರು ಕಾಂಗ್ರೇಸ್ ಪಕ್ಷದ ಕಡೆ ಒಲವು ತೋರಿರುವ ಕಾರಣ ಇದನ್ನು ಸರಿತೊಗಿಸಲು ಬಿ.ವೈ. ವಿಜೇಂದ್ರ ಅವರಿಗೆ ಪ್ರಮುಖ ಸ್ಥಾನ ನೀಡಬೇಕೆಂದು ಚಿಂತಿಸಲಾಗಿದೆ.
ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಸಚಿವರಾದ ಕೋಟಾ ಶ್ರೀನಿವಾಸ್ ಪೂಜಾರಿ ಮತ್ತು ಸುನೀಲ್ ಕುಮಾರ್ ಹಾಗೂ ಮಾಜಿ ಸಚಿವ ಈಶ್ವರಪ್ಪ ಅವರ ಅನುಭವಗಳನ್ನು ಮಾರ್ಗದರ್ಶಕವಾಗಿ ಪರಿಗಣಿಸಿಲು ಪಕ್ಷದ ಹೈಕಮಾಂಡ್ ಪರಮಾರ್ಷೆ ನಡೆಸುತ್ತಿದೆ ಎನ್ನಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಮೂಲ ಕಾರ್ಯಕರ್ತರನ್ನು ಗುರುತಿಸಿ ನೀಡಬೇಕೆಂಬುವುದು ಒಕ್ಕೂರಲಿನ ಕೊಗು ಅಗಿದ್ದು, ಪಕ್ಷಕ್ಕೆ ಅಮದು ಮಾಡಿಕೊಂಡಿರುವಂತ ನಾಯಕರಿಗೆ ಯಾವೂದೇ ಕಾರಣಕ್ಕೂ ಪಕ್ಷದಲ್ಲಿ ಯಾವೂದೇ ಪ್ರಮುಖ ಸ್ಥಾನ ಮಾನಗಳನ್ನು ನೀಡ ಬಾರದೆಂಬ ಒತ್ತಾಯಗಳು ಕೇಳಿ ಬರುತ್ತಿದೆ. ಅಧ್ಯಕ್ಷ ಸ್ಥಾನ ಅಕಾಂಕ್ಷಿಗಳಾಗಿ ಅಲಂಗೂರು ಸುರೇಂದ್ರಗೌಡ, ಕೃಷ್ಣಮೂರ್ತಿ, ಬಿ.ಪಿ.ವೆಂಕಟಮುನಿ, ಸಂಪಂಗಿ, ಕೃಷ್ಣರೆಡ್ಡಿ, ಸುರೇಶ್ ನಾರಾಯಣಕುಟ್ಟಿ, ವೆಂಕಟೇಗೌಡ, ಕೆಂಬೋಡಿ ನಾರಾಯಣಸ್ವಾಮಿ ಮುಂತಾದವರ ಹೆಸರುಗಳು ಕೇಳಿ ಬರುತ್ತಿದೆ.