ಬಿಜೆಪಿ ನೂತನ ಚುನಾವಣಾ ಕಾರ್ಯಾಲಯ ಉದ್ಘಾಟನೆ.

ಹೊನ್ನಾಳಿ ಏ.೧೫:  ಹೊನ್ನಾಳಿಯ ಹಿರೇಕಲ್ ಮಠದ ಎದುರು ಭಾರತೀಯ ಜನತಾ ಪಾರ್ಟಿಯ ನೂತನ ಚುನಾವಣಾ ಕಾರ್ಯಾಲಯವನ್ನು ಎಂ.ಪಿ ರೇಣುಕಾಚಾರ್ಯ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು ಸಾರ್ವಜನಿಕರ  ಕುಂದು ಕೊರತೆ ಇರಬಹುದು ನಮ್ಮ ಪಕ್ಷದ ಕಾರ್ಯಕರ್ತರು ಕಚೇರಿಯಲ್ಲಿ  ಒಂದು ಕಡೆ ಸೇರಿ ನಮ್ಮ ಪಕ್ಷದ ಬಲವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ ಹಾಗಾಗಿ ನಾವು ಈ ನೂತನ ಚುನಾವಣಾ ಕಾರ್ಯಾಲಯವನ್ನು ಅಂಬೇಡ್ಕರ್ ಜಯಂತಿ ಮಾಡುವ ಮೂಲಕ  ಉದ್ಘಾಟನೆ ಮಾಡಿದ್ದೇವೆ.ಈ ದಿನ  ಒಳ್ಳೆಯ ದಿನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು  ನಾವು ಭಾರತೀಯ ಜನತಾ ಪಾರ್ಟಿಯ ನೂತನ ಚುನಾವಣಾ ಕಾರ್ಯಾಲಯವನ್ನು ಉದ್ಘಾಟನೆ ಮಾಡಿದ್ದೇವೆ ಎಂದರು. ಈ ವೇಳೆ ಕಾರ್ಯಕರ್ತರು ಹಾಗೂ  ಅಧ್ಯಕ್ಷರಾದ ಜೆ.ಕೆ ಸುರೇಶ್. ಹಾಗೂ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.