ಬಿಜೆಪಿ ನಡೆ ಸಾಮಾಜಿಕ ನ್ಯಾಯದ ಕಡೆ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ನ,18- ಎಸ್ಸಿ, ಎಸ್ಟಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿ ನುಡಿದಂತೆ ನಡೆದಿದೆ ನಮ್ಮ‌ ಬಿಜೆಪಿ. ಅದಕ್ಕಾಗಿ ನವಶಕ್ತಿ ಸಮಾವೇಶ ಈ ತಿಂಗಳ 20 ರಂದು ಬಳ್ಳಾರಿ‌ ನಗರದಲ್ಲಿ  ಹಮ್ಮಿಕೊಂಡಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸಮಾವೇಶ ನಡೆಯುವ ಸ್ಥಳದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು. ಬಿಜೆಪಿ ಎಸ್ಸಿ ಮತ್ರು ಎಸ್ಟಿ ಸಮುದಾಯಕ್ಕೆ ಸದಾ ಸಹಕಾರಿಯಾಗಿ ನಡೆಯುತ್ತಾ ಬಂದಿದೆ. 2008 ರಲ್ಲಿ ಎಸ್ಟಿ ಸಮುದಾಯ  60 ಲಕ್ಷ ಜನ ಸಂಖ್ಯೆ ಇತ್ತು. ಆಗ ವಾಲ್ಮೀಕಿ ಜಯಂತಿ ಮಾಡಲು ಕೇಳಿತು. ಅದಕ್ಕೆ ತಕ್ಷಣ ಅಂದಿನ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಮಂಜೂರಾತಿ ನೀಡಿದರು. ಸರ್ಕಾರದಿಂದ  ವಾಲ್ಮೀಕಿ ಜತಂತಿಯನ್ನು ಸರ್ಕಾರಿ ರಜೆ ಮೂಲಕ ಆಚರಿಸಲು ಆದೇಶ ನೀಡಿದರು.
ನಂತರ ಕೇಂದ್ರ ಸರ್ಕಾರದ ರೀತಿಯಲ್ಲಿ ರಾಜ್ಯದಲ್ಲೂ ಎಸ್ಟಿ ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಮಾಡಿ ಅದಕ್ಕೆ ನನ್ನನ್ನು ಸಚಿವರನ್ನಾಗಿ ಮಾಡಿದೆ. ಇನ್ನು ಎಸ್ಟಿ ಮತ್ತು ಎಸ್ಸಿ ಮೀಸಲಾತಿ ಪ್ರಮಾಣ ಹೆಚ್ಚಿಸಲು  ಸಿಎಂ ಬಸವರಾಜ್  ಬೊಮ್ಮಾಯಿ ಅವರು ಅನುಮೋದನೆ ಕೊಟ್ಟಿದ್ದಾರೆ. ಅದಕ್ಕಾಗಿ ಸಮುದಾಯದಿಂದ ಸರ್ಕಾರಕ್ಕೆ ಕೃತಜ್ಞತಾಭಾವದಿಂದ ಈ ಸಮಾವೇಶ ಹಮ್ಮಿಕೊಂಡಿದೆಂದರು.
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಸೇರಿದಂತೆ ಆ ಪಕ್ಷದ ನಾಯಕರು ಎಸ್ಟಿ ಸಮುದಾಯದ ಮತ ಬ್ಯಾಂಕ್ ಕೇಳಿ ಪಡೆಯುತ್ತಾರೆ ಹೊರೆತು. ಮತ ಹಾಕಿದವರ  ಅಭಿವೃದ್ಧಿ ಮಾತ್ರ ಶೂನ್ಯ ಎಂದರು.
ಸಿದ್ದರಾಮಯ್ಯನವರು ಮತ್ತೆ ಸಿಎಂ ಆಗಲು ಮತ ನೀಡಿ ಎಂದು ಕೇಳುತ್ತಿದ್ದೀರಿ. ಅಹಿಂದಕ್ಕೆ ನಿಮ್ಮ‌ಕೊಡುಗೆ ಏನು. ನೀವು ಯಾಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲಿಲ್ಲ ಇದಕ್ಕೊಂದು ಉತ್ತರ ಕೊಡಿ ಎಂದರು.
ಸುದ್ದಿಗೋಷ್ಟಿಯಲ್ಲಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್, ಎಸ್ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಓಬಳೇಶ್, ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ,  ಮುಖಂಡರುಗಳಾದ ಸಿದ್ದರಾಜ್, ಡಾ.ಎಸ್.ಜೆ.ವಿ.ಮಹಿಪಾಲ್, ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್ ಮೊದಲಾದವರು ಇದ್ದರು.