ಬಿಜೆಪಿ ನಗರ ಮಂಡಲ 2ನೇ ಕಾರ್ಯಕಾರಿಣಿ ಸಭೆ

ಬೀದರ:ನ.18: ಭಾರತೀಯ ಜನತಾ ಪಕ್ಷ ನಗರ ಮಂಡಲದ 2ನೇ ಕಾರ್ಯಕಾರಣಿ ಸಭೆ ನಡೆಸಲಾಯಿತು. ನಗರ ಅಧ್ಯಕ್ಷರಾದ ಹಣಮಂತ ಬುಳ್ಳಾ ರವರ ನೇತೃತ್ವದಲ್ಲಿ ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ರಘುನಾಥರಾವ ಮಲ್ಕಾಪುರೆ, ಸೂರ್ಯಕಾಂತ ನಾಗಮಾರಪಳ್ಳಿಜಿ, ಬುಡಾ ಅಧ್ಯಕ್ಷರಾದ ಶ್ರೀ ಬಾಬು ವಾಲಿ, ಜೈಕುಮಾರ ಕಾಂಗೆ, ಮ. ರೌಫೋದ್ದಿನ ಕಛೇರಿವಾಲೆ ರವರುಗಳು ಉದ್ಘಾಟಿಸಿ ಸಭೆಗೆ ಚಾಲನೆ ನೀಡಿದರು.

ಎರಡನೇ ಅವಧಿ ಸಂಘಟನಾ ಅವಧಿ ಶ್ರೀ ಸೂರ್ಯಕಾಂತ ಡೋಣಿ ರವರು ನಡೆಸಿಕೊಟ್ಟರು. ಮೂರನೇ ಅವಧಿ ಸಮಾರೋಪದ ಅವಧಿ ಶ್ರೀ ಅರಹಂತ ಸಾವಳೆ ರವರು ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ರಾಜಕುಮಾರ ಚಿದ್ರಿ, ಪ್ರಸನ್ನಲಕ್ಷ್ಮಿ ದೇಶಪಾಂಡೆ, ಜಗನ್ನಾಥ ಪಾಟೀಲ ಶ್ರೀಕಟನಳ್ಳಿ, ಮಹೇಶ್ವರ ಸ್ವಾಮಿ, ರಾಜಕುಮಾರ ಪಾಟೀಲ ನೆಮತಾಬಾದ, ಉಪಸ್ಥೀತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು. ಅಲ್ಲದೇ ನಗರ ಸಭೆಯ ಚುನಾಯಿತ ಪ್ರತಿನಿಧಿಗಳಾದ ರಾಜಾರಾಮ ಚಿಟ್ಟಾ, ಶಶಿಧರ ಹೊಸಳ್ಳಿ, ಪ್ರಭು ಪಾಟೀಲ, ರಾಜೇಶ ಪಪ್ಪು, ವಿಕ್ರಮ ಮುದಾಳೆ, ಸಂಗಮೇಶ ನೌಬಾದೆ ಉಪಸ್ಥಿತರಿದ್ದರು.

ಅದಲ್ಲದೇ ಜಿಲ್ಲಾ ಪದಾಧಿಕಾರಿಗಳು, ನಗರ ಪದಾಧಿಕಾರಿಗಳು, ನಗರ ಮೋರ್ಚಾ ಪದಾಧಿಕಾರಿಗಳು, ಶಕ್ತಿ ಕೇಂದ್ರ ಮತ್ತು ಮಹಾ ಶಕ್ತಿಕೇಂದ್ರದ ಪದಾಧಿಕಾರಿಗಳು ಮತ್ತು ಅಪೇಕ್ಷಿತರು ಪಾಲ್ಗೊಂಡರು.

ಪ್ರಾರಂಭದಲ್ಲಿ ಸುಭಾಷ ಮಡಿವಾಳ ರವರು ಸ್ವಾಗತಿಸಿದರು, ಕಾರ್ಯಕ್ರಮದ ಸಂಚಾಲನೆ ಅನೀಲ ರಾಜಗಿರಾ ರವರು ನೆರವೇರಿಸಿದರೆ ಕೊನೆಯಲ್ಲಿ ಸುನೀಲಕುಮಾರ ಗೌಳಿ ವಂದಿಸಿದರು.