ಬಿಜೆಪಿ ನಗರ ಘಟಕದಿಂದ ಕೋವಿಡ್ ಜಾಗೃತಿ

ಬೀದರ:ಮೇ.19: ಕೋವಿಡ್ ಬೀದರ: ಜಿಲ್ಲೆಯಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ತಮ್ಮ ವೆಚ್ಚದಲ್ಲಿ ಪ್ರಚಾರ ವಾಹನಗಳನ್ನು ಬಿಡುಗಡೆ ಮಾಡಿದರು.
ಈ ವೇಳೆ ನಗರಾಧ್ಯಕ್ಷ ಹಣಮಂತ ಬುಳ್ಳಾ ಮಾತನಾಡಿ, ಬೀದರ ನಗರ ಜನತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ ಧರಿಸಬೇಕು, ಕೈಗಳನ್ನು ಸ್ವಚ್ಛಗಳಿಸಬೇಕು ಹಾಗೂ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸುತ್ತಾ, ಪೊಲೀಸ್ ಅಧಿಕಾರಿಗಳನ್ನು ಸಹಕರಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ನಗರ ಪ್ರಾಧಿಕಾರ ಕಾರ್ಯದರ್ಶಿ ಸುನೀಲ ಗೌಳಿ, ನಗರ ಸಭೆ ಸದಸ್ಯರುಗಳಾದ ಪ್ರಭು ಪಾಟೀಲ್, ರಾಜಾರಾಮ ಚಿಟ್ಟಾ, ಶಶಿ ಹೊಸಳ್ಳಿ. ನಗರ ಪ್ರಮುಖರಾದ ನಾಗಶೆಟ್ಟಿ ವಾಗ್ದಾಳೆ, ಹಣಮಂತ್ ಕೊಂಡಿ, ರವಿ ಪಾಟೀಲ್, ಪವನ್ ಉಂಡೆ, ಮೃತುಂಜಯ್ ಬಿರಾದರ್, ನರೇಶ ಗೌಳಿ, ಶರಣು ಬಿರಾದರ್, ಗೋವಿಂದ್ ಕಾವಳೇ, ಗೋಪಾಲ್ ಕುಕ್ಕದಾಲ್ ಹಾಗೂ ಶರಣು ಬಿರಾದರ್ ಇತರರಿದ್ದರು.