ಬಿಜೆಪಿ ನಗರಸಭೆ ಚುನಾವಣೆ ಪೂರ್ವ ಸಿದ್ಧತಾ ಸಭೆ

ಬೀದರ:ಎ.1:ಏ. 27ರಂದು ನಗರಸಭೆ ಸದಸ್ಯರ ಚುನಾವಣೆ ನಿಗದಿಯಾಗಿದ್ದು ಭಾರತೀಯ ಜನತಾ ಪಕ್ಷದ ನಗರ ಘಟಕ ವತಿಯಿಂದ ಇಂದು ಪೂರ್ವ ಭಾವಿ ಸಿದ್ಧತಾ ಸಭೆ ಜಿಲ್ಲಾ ಕಾರ್ಯಲಯದಲ್ಲಿ ನಗರಧ್ಯಕ್ಷರಾದ ಹಣಮಂತ ಬುಳ್ಳಾ ಅಧ್ಯಕ್ಷತೆಯಲ್ಲಿ ನಡೆಯಿತು.

ಭಾರತೀಯ ಜನತಾ ಪಕ್ಷದ ಕೇಂದ್ರ ಮತ್ತು ರಾಜ್ಯ ಸರಕಾರಗಳ ಸಾಧನೆಗಳನ್ನು ಮನೆ ಮನೆಗೆ ತಲುಪಿಸಿ ನಗರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಭರ್ಜರಿ ಜಯ ನೀಡಲು ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಪಕ್ಷದ ಪ್ರತಿ ವಾರ್ಡ್‍ಗೊಂದು ಪ್ರಭಾರಿ ನೇಮಕ ಮಾಡಲಾಯಿತು.

ಸಂಸದರಾದ ಭಗವಂತ ಖೂಬಾ, ಬೀದರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬು ವಾಲಿ, ಸಂಘಟನಾ ಮಹಾ ಮಂತ್ರಿ ದತ್ತು ತುಗಾಂವಕರ್, ವಿಭಾಗ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಮಾಜಿ ಜಿಲ್ಲಾಧ್ಯಕ್ಷರು ಹಾಗೂ ಹಿರಿಯರಾದ ಎನ್ ಆರ್, ವರ್ಮಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಶೋಕ ಹೊಕ್ರಾಣೆ, ಜಯಕುಮಾರ ಕಾಂಗೆ, ಗುರುನಾಥ ಜಾಂಥಿಕರ್, ರಾಜಕುಮಾರ ಚಿದ್ರಿ, ಮಹೇಶ್ವರ ಸ್ವಾಮಿ, ಶಿವಪುತ್ರ ವೈದ್ಯ, ರವೌಪೋಧ್ದಿನ್ ಕಚೋರಿವಾಲಾ, ಜಗನ್ನಾಥ ಪಾಟೀಲ, ಮಲ್ಲಿಕಾರ್ಜುನ ಕುಂಬಾರ, ಸೇರಿದಂತೆ ಭಾವಿ ನಗರಸಭೆ ಸದಸ್ಯರು ಮತ್ತು ಪ್ರಮುಖರು ಉಪಸ್ಥಿತರಿದ್ದರು.