ಬಿಜೆಪಿ ದೇಶದ ಪ್ರಗತಿಗಾಗಿ ಕೆಲಸ ಮಾಡುವ ಪಕ್ಷ: ಅಜಿತ್ ಹೆಗಡೆ

ಕಲಬುರಗಿ.ಏ.05:ಭಾರತೀಯ ಜನತಾ ಪಕ್ಷವು ದೇಶ ಮೊದಲು ನಂತರ ಪಕ್ಷ ಕೊನೆಯದಾಗಿ ತಾನು ಎಂದು ಕೆಲಸ ಮಾಡುವ ಸಿದ್ಧಾಂತ ಹೊಂದಿರುವ ಏಕೈಕ ಪಕ್ಷವಾಗಿದೆ ಎಂದು ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗಡೆ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಯುವ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷವು ಅಖಂಡ ಭಾರತ ಒಳಿತಿಗಾಗಿ ಮತ್ತು ಅಂತ್ಯೋದಯ ಪರಿಕಲ್ಪನೆಯ ಸಂದೇಶವನ್ನು ಇಟ್ಟುಕೊಂಡು ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರು ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ ಇದನ್ನು ಅರಿತು ಯುವ ಮೋರ್ಚಾದ ಕಾರ್ಯಕರ್ತರು ಕೆಲಸ ಮಾಡಬೇಕಾಗಿದೆ ಎಂದರು.
ದೇಶಾದ್ಯಂತ ಯುವ ಮೋರ್ಚಾ ಬಲಿಷ್ಠವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಮತ್ತು ಬಿ ಎಸ್ ಯಡಿಯೂರಪ್ಪ ನವರ ಸರ್ಕಾರದ ಯೋಜನೆಗಳು ಮೋರ್ಚಾ ಕಾರ್ಯಕರ್ತರು ಪ್ರತಿ ಮನೆ ಮನೆಗೆ ತಲುಪಿಸಲು ಕಂಕಣಬದ್ಧರಾಗಬೇಕು ಎಂದು ಹೇಳಿದರು.
ಮೊದಲಿಗೆ ಭಾರತದ ಮಾಜಿ ಉಪಪ್ರಧಾನಿ ಹಸಿರು ಕ್ರಾಂತಿಯ ಹರಿಕಾರ ಡಾಕ್ಟರ್ ಬಾಬು ಜಗಜೀವನರಾಮ್ ಅವರ ಜಯಂತಿ ಅಂಗವಾಗಿ ಪಕ್ಷದ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಮನಗಳನ್ನು ಸಲ್ಲಿಸಲಾಯಿತು. ನಗರಾಧ್ಯಕ್ಷ ಸಿದ್ದಾಜಿ ಪಾಟೀಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರವೀಣ್ ತೆಗನೂರ್ ಶ್ರೀನಿವಾಸ್ ದೇಸಾಯಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಪ್ರೀತಮ್ ಪಾಟೀಲ್ ಸಚಿನ್ ಕಡಗಂಚಿ, ಉಪಾಧ್ಯಕ್ಷರಾದ ಶಿವ ಅಷ್ಟಗಿ, ರಾಘವೇಂದ್ರ ಚಿಂಚನಸೂರ, ಪ್ರಧಾನ ಕಾರ್ಯದರ್ಶಿಗಳಾದ ವಿನಯ್ ವಲ್ಲ್ಯಾಪುರ, ವೀರೇಂದ್ರ ರಾಯ್ಕೋಡ್, ಮಹೇಶ್ ಚವಾಣ್ ರಾಜು ಚೌಹಾನ್, ನಗರ ಜಿಲ್ಲೆ ಪ್ರಧಾನ ಕಾರ್ಯದರ್ಶಿ ಮಹದೇವ ಬೆಳಮಗಿ, ಯುವ ಮೋರ್ಚಾದ ಹಣಮಂತ ಬಿರಾದಾರ, ಮಲ್ಲು ತಡಕಲ್, ಮದನ ಯಾಗಾಪುರ, ಅಮಿತ್ ಚಿಡಗುಂಪಿ, ಮಹೇಶ್ ಹರವಾಳ ಇದ್ದರು.