ಬಿಜೆಪಿ ದುರಾಡಳಿತದಿಂದ ಜನರ ಬದುಕಿನ ಮೇಲೆ ಬರೆ -ಕೊಂಡಯ್ಯ


ಸಂಜೆವಾಣಿವಾರ್ತೆ
ಕಂಪ್ಲಿ,ಆ.05 ಬಿಜೆಪಿ ದುರಾಡಳಿತದಿಂದ ಜನರ ಬದುಕಿನ ಮೇಲೆ ಬರೆ ಬೀಳುವಂತಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಕೊಂಡಯ್ಯ ಅಭಿಪ್ರಾಯಪಟ್ಟರು.
ಅವರು ಗುರುವಾರ ಇಲ್ಲಿನ ಅತಿಥಿ ಗೃಹದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರಾಜಕೀಯ ವ್ಯಾಪಾರೀಕರಣವಾಗಿದೆ. ಯಾರೇ ಆಗಲಿ ಅಧಿಕಾರದಲ್ಲಿದ್ದಾಗ ಜನಪರ ಕೆಲಸ ಮಾಡಬೇಕು. ನಾವು ಅಧಿಕಾರದಲ್ಲಿದ್ದಾಗ ಜನಪರ ಕೆಲಸಗಳಿಗೆ ಮತ್ತು ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದರಿಂದ ಇಂದಿಗೂ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಶಾಸಕರು ಜನಪರ ಕೆಲಸ ಮಾಡಿದಾಗ ಮಾತ್ರ ಅಲ್ಲಿನ ಶಾಸಕರ ಭವಿಷ್ಯ ಉಳಿಯಲು ಸಾಧ್ಯ ಎಂದು ತಿಳಿಸಿದರು.
 ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯರಿಗೆ ಟಿಕೆಟ್ ಕೇಳುವುದು ತಪ್ಪೇನಿಲ್ಲ. ಕಾಂಗ್ರೆಸ್‍ನಲ್ಲಿ ಯಾರಿಗೆ ಟಿಕೆಟ್ ಸಿಗುತ್ತದೆ ಅವರಿಗೆ ಒಗ್ಗಟ್ಟಿನೊಂದಿಗೆ ಕೆಲಸ ಮಾಡಬೇಕು. ನಂತರ ಕ್ಷೇತ್ರೆದ ಜನರ ನಿರ್ಧಾರವೇ ಅಂತಿಮ ನಿರ್ಧಾರವಾಗಲಿದೆ ಎಂದರು.
  ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕೆ.ಸಿ.ಕೊಂಡಯ್ಯ ಅವರನ್ನು ಸನ್ಮಾನಿಸಿದರು. ಕೆ.ಸಿ.ಕೊಂಡಯ್ಯ ಅವರ ಧರ್ಮ ಪತ್ನಿ, ಕಂಪ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟಿಗಿ ಬಸವರಾಜಗೌಡ, ಪುರಸಭೆ ಸದಸ್ಯರಾದ ಭಟ್ಟ ಪ್ರಸಾದ್, ಲಡ್ಡು ಹೊನ್ನೂರವಲಿ, ಕಾಂಗ್ರೆಸ್ ಮುಖಂಡರಾದ ಬಿ.ನಾರಾಯಣಪ್ಪ, ಪಿ.ಮೂಕಯ್ಯಸ್ವಾಮಿ, ಎಂ.ಸುಧೀರ್, ಕೆ.ಷಣ್ಮುಖಪ್ಪ, ಕೆ.ಮನೋಹರ್, ಎಚ್.ಗಂಗಾಧರ, ಸೈಯದ್ ಉಸ್ಮಾನ್, ಬಿ.ಗೋಪಾಲ್, ಬಿ.ಜಾಫರ್, ಅಕ್ಕಿ ಜಿಲಾನ್, ಬಳೆ ಮಲ್ಲಿಕಾರ್ಜುನ, ವಿ.ಟಿ.ನಾಗರಾಜ, ಪಿ.ಶಂಭುಲಿಂಗ, ಬಿ.ಟಿ.ಶಿವಕುಮಾರ್, ಎಂ.ರಾಜಾಭಕ್ಷಿ, ಮಣ್ಣೂರು ವೀರೇಶ್, ಎಮ್ಮಿಗನೂರು ಗಂಗಾಧರ, ಪ್ರಶಾಂತ್, ಹೊನ್ನೂರ್‍ಸಾಬ್ ಇತರರು ಉಪಸ್ಥಿತರಿದ್ದರು.