ಬಿಜೆಪಿ ದಲಿತ ವಿರೋಧಿ ಸರ್ಕಾರ – ಆಂಜನೇಯ

ಸಿಂಧನೂರು.ಏ.೮-ಬಿಜೆಪಿ ಅಧಿಕಾರ ಹಾಗೂ ಹಣ ಬಲದಿಂದ ಮತದಾರರನ್ನು ಕೊಂಡುಕೊಂಡು ಮಸ್ಕಿ ಕ್ಷೇತ್ರದಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದು ಇಲ್ಲಿನ ಮತದಾರರು ಪ್ರಜ್ಞಾ ವಂತರಿದ್ದು ಹಣ ಹಾಗೂ ಅಧಿಕಾರಕ್ಕೆ ಮರಳಾಗದೆ ಜನಪರ ಕಾಳಜಿ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರವಿಹಾಳರನ್ನು ಗೆಲ್ಲಿಸಿಲಿದ್ದಾರೆ ಎಂದು ಮಾಜಿ ಮಂತ್ರಿ ಆಂಜನೇಯ ಹೇಳಿದರು.
ನಗರದಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರತಾಪ್ ಪಾಟೀಲ ಸಜ್ಜನನಂತೆ ಕಂಡರು ಡೆಂಜರ್ ಮನುಷ್ಯನಾಗಿದ್ದು ತಾನು ಹಣೆಗೆ ವಿಭೂತಿ ಹಚ್ಚಿ ಬಿಜೆಪಿಗೆ ನಾಮ ಹಾಕಿ ಚುನಾವಣೆಯಲ್ಲಿ ನಿಂತು ಗೆಲ್ಲುವ ಹಗಲುಗನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಪಾಟೀಲ ವಿರುದ್ಧ ಅಲೆಯಿದ್ದು ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ಪರ ಜನ ಬೆಂಬಲ ಅಲೆಯಿದ್ದು ಈ ಚುನಾವಣೆಯಲ್ಲಿ ಪ್ರತಾಪ್ ಪಾಟೀಲನ್ನು ಮತದಾರರು ಸೋಲಿಸುವದು ಗ್ಯಾರಂಟಿ ಪ್ರತಾಪ್ ಪಾಟೀಲಗೆ ವಯಸ್ಸಾಗಿದ್ದು ವೃದ್ದಾಶ್ರಮಕ್ಕೆ ಹೋಗುವದು ಸೂಕ್ತ ಎಂದರು.
ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್.ಸಿ, ಎಸ್.ಟಿ ಜನರ ಮೂಲ ಸೌಕರ್ಯಗಳಿಗಾಗಿ ಪ್ರತಿ ವರ್ಷ ೩೦ ಸಾವಿರ ಕೋಟಿ ಹಣ ನೀಡಿದ್ದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅನುದಾನವನ್ನು ಕಡಿತ ಮಾಡಿ ದಲಿತ ವಿರೋಧಿ ಸರ್ಕಾರವಾಗಿದೆ.
ದಲಿತರಿಗೆ ಅನ್ಯಾಯವಾಗುತ್ತಿದ್ದರೂ ಸಹ ಇದರ ಬಗ್ಗೆ ಪ್ರಶ್ನೆ ಮಾಡಬೇಕಾದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮೌನ ವಹಿಸಿರುವದು ನೋಡಿದರೆ ಇವರು ದಲಿತರ ಉಪಯೋಗವಿಲ್ಲದ ಉಪ ಮುಖ್ಯಮಂತ್ರಿ ಗಳಾಗಿದ್ದಾರೆ.
ಮಸ್ಕಿ ಕ್ಷೇತ್ರದಲ್ಲಿ ಪ್ರತಾಪ್ ಪಾಟೀಲ ಮೂರು ಬಾರಿ ಶಾಸಕರಾದರೂ ಸಹ ಕ್ಷೇತ್ರ ಯಾವುದೇ ಅಭಿವೃದ್ಧಿ ಯಾಗಿಲ್ಲ ಕೆಲವು ಕಡೆ ಸರಿಯಾದ ರಸ್ತೆಗಳಿಲ್ಲ ದಲಿತರ ಓಣಿಗಳಲ್ಲಿ ಚರಂಡಿ ಮತ್ತು ರಸ್ತೆಗಳಿಲ್ಲದೆ ದಲಿತರು ನರಕಯಾತನೆ ಅನುಭಿಸುತ್ತಿದ್ದಾರೆ. ಕ್ಷೇತ್ರದ ಮತದಾರರನ್ನು ಕೇಳದೆ ಹಣ ಹಾಗೂ ಅಧಿಮಾರಕ್ಕಾಗಿ ಬಿಜೆಪಿಗೆ ತನ್ನನ್ನು ಮಾರಿಕೊಂಡ ಪ್ರತಾಪ್ ಪಾಟೀಲ ವಿರುದ್ಧ ಕ್ಷೇತ್ರದ ಮತದಾರರು ರೋಸಿ ಹೋಗಿ ಉಪಚುನಾವಣೆಯಲ್ಲಿ ಸರಳ ,ಜನಪರ ಕಾಳಜಿ ಇರುವ ಬಸನಗೌಡ ತುರವಿಹಾಳ ರನ್ನು ಗೆಲ್ಲಿಸಿಲಿದ್ದಾರೆ ಎಂದು ಆಂಜನೇಯ ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಸ್.ಸಿ, ಎಸ್.ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗದ ಜನರ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಜನರು ಮನಸ್ಸಿನಲ್ಲಿಟ್ಟುಕೊಂಡು ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಮತದಾರರು ಗೆಲ್ಲಿಸಿಲಿದ್ದಾರೆ ಎಂದು ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜೇಯೇಂದ್ರ ಭ್ರಷ್ಟಾಚಾರದ ಹಣ ತಂದು ಮಸ್ಕಿ ಕ್ಷೇತ್ರದಲ್ಲಿ ಚುನಾವಣೆ ನಡೆಸುತ್ತಿದ್ದು ಕ್ಷೇತ್ರದ ಮತದಾರರು ಹಣ ಹಾಗೂ ಜಾತಿಗೆ ಮರಳಾಗದೆ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಪಕ್ಷದ ಅಭ್ಯರ್ಥಿ ಬಸನಗೌಡ ರಿಗೆ ಮತ ಹಾಕಿ ಗೆಲ್ಲಿಸಲಿದ್ದಾರೆ ಎಂದರು.
ಕಾಂಗ್ರೆಸ್ ಜಿಲ್ಲಾದ್ಯಕ್ಷರಾದ ಬಿ.ವಿ ನಾಯಕ, ಮಸ್ಕಿ ಉಸ್ತುವಾರಿ ಹಾಗೂ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ದೃವ ನಾರಾಯಣ, ಶಾಸಕರಾದ ಅನಿಲ ಚಿಕ್ಕ ಮಾದು, ವಸಂತ ಕುಮಾರ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.