ಬಿಜೆಪಿ ದಕ್ಷಿಣ ಮಂಡಲ ಕಾರ್ಯಕಾರಿಣಿ ಸಭೆ

ಕಲಬುರಗಿ:ಡಿ.6: ನಗರದ ಸಂಗಮೇಶ್ವರ ಕಾಲೋನಿಯಲ್ಲಿರುವ ಯಜ್ಞವಲಕ ಸಭಾಗಂಣದಲ್ಲಿ ಭಾರತೀಯ ಜನತಾ ಪಕ್ಷದ ದಕ್ಷಿಣ ಮಂಡಲ ಕಾರ್ಯಕಾರಿಣಿ ಸಭೆಯನ್ನು ಭಾರತಮಾತೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ದಕ್ಷಿಣ ಮಂಡಲದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ರಾಮಚಂದ್ರ ಗುಮ್ಮಟ್ ಅವರು ಸ್ವಾಗತ ಭಾಷಣ ಮಾಡಿದರು.

ಪ್ರಧಾನ ಕಾರ್ಯದರ್ಶಿಗಳಾದ ವಿಶ್ವನಾಥ ಸಾಲಿಮಠ ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ ಮೂರು ತಿಂಗಳಲ್ಲಿ ನಡೆದ ಪಕ್ಷದ ಕಾರ್ಯ ಕ್ರಮಗಳನ್ನು ವಿವರಿಸಿದರು.

ಪಕ್ಷದ ನಗರ ಜಿಲ್ಲಾ ಅಧ್ಯಕ್ಷರಾದ ಸಿದ್ಧಾಜೀ ಪಾಟೀಲ್ ಅವರು ಮಾತನಾಡಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಬೇಕೆಂದು ತಿಳಿಸಿದರು. ಜಿಡಿಎ ಅಧ್ಯಕ್ಷರಾದ ದಯಾಘನ ಧಾರವಾಡಕರ ವಂಧನಾ ನಿರ್ಣಯದಲ್ಲಿ ಮಾತನಾಡಿ ವಿಧಾನಪರಿಷತ್ತಿನ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಬಿ.ಜಿ ಪಾಟೀಲ್ ಅವರನ್ನು ಗೆಲ್ಲಿಸಲು ಕಾರ್ಯಕರ್ತರ ಶ್ರಮವಹಿಸಬೇಕಾಗಿದೆ ಎಂದು ತಿಳಿಸಿದರು.

ಇದಕ್ಕೂ ಮುಂಚೆ ಇತ್ತೀಚಿಗೆ ನಿಧನರಾದ ಕರ್ನಾಟಕರತ್ನ ಪವರ್ ಸ್ಟಾರ್ ಪುನೀತ ರಾಜಕುಮಾರ ಅವರಿಗೆ ಹಾಗೂ ಹಿರಿಯ ನಟ ಶಿವರಾಮ ರವರಿಗೆ ಶ್ರದ್ದಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು. ಈ ಕಾರ್ಯಕಾರಿಣಿ ಸಭೆಯಲ್ಲಿ ಸಿದ್ದೋಜಿ ಪಾಟೀಲ್, ಮಹದೇವ ಬೆಳಮಗಿ, ಸುರಜ ಪ್ರಸಾದ ತಿವಾರಿ, ವಿಶ್ವನಾಥ ಸಾಲಿಮಠ, ಸತೀಶ್ ಜಮಖಂಡಿ, ರಂಜಿತ್ ಮೂಲಿಮನಿ, ಮಹಾನಗರ ಪಾಲಿಕೆ ಸದಸ್ಯರಾದ ವಿಶಾಲ್ ದರ್ಗಿ, ಮಲ್ಲು ಉದನೂರು, ವೀರಣ್ಣ ಹೊನ್ನಳ್ಳಿ, ಶಂಭು ಬಳಬಟ್ಟಿ, ಗುರು ಪಟ್ಟಣ, ಮಹಿಳಾ ಮೋರ್ಚಾ ಅಧ್ಯಕ್ಷರಾದ ಶೋಭಾ ಪಾಟೀಲ್ ಬಾಗೆವಾಡಿ, ವಿಜಯಲಕ್ಷ್ಮಿ ಗೊಬ್ಬುರ್, ಮಹಾದೇವಿ,ಆರತಿ ತಿವಾರಿ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ದಕ್ಷಿಣ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಜಮಖಂಡಿ ಅವರು ನಿರೂಪಿಸಿದರು. ಕಾರ್ಯದರ್ಶಿಗಳಾದ ರಂಜಿತ ಮೂಲಿಮನಿ ವಂದಿಸಿದರು.