ಬಿಜೆಪಿ ತೆಕ್ಕೆಗೆ ಭೂಮನಗುಂಡ ಗ್ರಾಮ ಪಂಚಾಯತ್

ಅರಕೇರಾ,ಆ.೦೫-
ಎರಡನೇ ಅವಧಿಗೆ ಶುಕ್ರವಾರ ಭುಮನಗುಂಡ ಗ್ರಾಮ ಪಂಚಾಯತ ಕಾರ್ಯಲಯದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮತ್ತು ಉಪಾಧಕ್ಷ್ಯ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೆಂಕೋಬನಾಯಕ ಅಡಕಲಗುಡ್ಡ ಉಪಾಧ್ಯಕ್ಷ ಸ್ಥಾನಕ್ಕೆ ಶಿವಮ್ಮ ಅವಿರೋದವಾಗಿ ಆಯ್ಕೆಯಾದರು.ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಭುಮನಗುಂಡ ಗ್ರಾಮ ಪಂಚಾಯತ ಬಿಜೆಪಿ ತೆಕ್ಕೆಗೆ ಸೇರಿತು.
ಪಂಚಾಯತ ಸದಸ್ಯರು ೧೭ ಜನರ ಸದಸ್ಯರ ಬಲಹೊಂದಿದ್ದು ಪ.ಪಂ.ಸಾಮಾನ್ಯಸ್ಥಾನ ಪುರುಷ ಮೀಸಲು ಅಧ್ಯಕ್ಷಸ್ಥಾನಕ್ಕೆ ವೆಂಕೋಬನಾಯಕಅಡಕಲಗುಡ್ಡ, ಹನುಮಯ್ಯ ಅರಳೆಬಂಡಿ ಭುಮನಗುಂಡ ಇಬ್ಬರು ನಾಮಪತ್ರ ಸಲ್ಲಿಸಿದ್ದರು. ಒಟ್ಟು ೧೭ ಜನ ಸದಸ್ಯರು ತಲಾ ೮ ಮತಗಳು ಪಡೆದರು ಒಂದು ಮತ ಅಸಿಂಧು ಆದ ಪರಿಣಾಮ ಚುನಾವಣಾ ಅಧಿಕಾರಿ ನಿಯಮದ ಪ್ರಕಾರ ಚೀಟಿ ಎತ್ತುವ ಮೂಲಕ ಅಧ್ಯಕ್ಷರ ಪ್ರಕೀಯೆ ನಡೆಯಿತು. ಅದೃಷ್ಟ ಪರೀಕ್ಷೆಯಲ್ಲಿ ಯಂಕೋಬನಾಯಕ ಅಡಕಲಗುಡ್ಡ ಇವರಿಗೆ ಅದೃಷ್ಟ ಕುಲಾಯಿಸಿಕೊಂಡರು. ಉಪಾಧ್ಯಕ್ಷಸ್ಥಾನ ಪರಿಶಿಷ್ಟ ಜಾತಿ ಮಹಿಳಾ ಮೀಸಲು ಸ್ಥಾನಕ್ಕೆ ಒಂದು ನಾಮಪತ್ರಸಲ್ಲಿಕೆಯಾದಕಾರಣ ಶಿವಮ್ಮ ಅವಿರೋದವಾಗಿ ಆಯ್ಕೆಯಾಗಿದೆ ಎಂದು ಚುನಾವಣಾ ಅಧಿಕಾರಿ ರಾಮರಡ್ಡಿ ಪಾಟೀಲ್ ತಾ.ಪಂ. ಅಧಿಕಾರಿ ದೇವದುರ್ಗ ತಿಳಿಸಿದರು. ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ವೆಂಕಟೇಶ ಉಪಸ್ಥಿತರಿದ್ದರು.ಗ್ರಾಮ ಪಂಚಾಯತ ಸದಸ್ಯರುಗಳಾದ.ವಿಠೋಬನಾಯಕಮಲ್ಲಾಪೂರು,ಅಂಜನೇಯ್ಯದೊರೆ,ಶ್ರೀದೇವಿಅಂಜನೇಯ್ಯ,ಯಲ್ಲಣ್ಣ,ಅಡಕಲಗುಡ್ಡ,ದೇವಮ್ಮಪರಶುರಾಮು ಇದ್ದರು. ದೇವದುರ್ಗ ಗ್ರಾಮೀಣಾ ಠಾಣಾ ಸಿಪಿಐ ಎನ್ ವೈ ಗುಂಡೂರಾವ್,ಜಲಹಳ್ಳಿ ಪಿ ಎಸ್ ಐ ಸುಜಾತನಾಯಕ ಸೇರಿದಂತೆ ಪೋಲಿಸ್ ಸಿಬ್ಬಂದಿ ಬಂದೋಬಸ್ತ ಏರ್ಪಡಿಸಿದರು.