ಬಿಜೆಪಿ ತೆಕ್ಕೆಗೆ ಕುಂದಗೋಳ ಪಟ್ಟಣ ಪಂಚಾಯತ್

ಕುಂದಗೋಳ ಅ 6 : ಕುತೂಹಲ ಕೆರಳಿಸಿದ್ದ ಕುಂದಗೋಳ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯುವ ಮೂಲಕ ನಗೆ ಬೀರಿದೆ.
ಬಿಜೆಪಿ ಬೆಂಬಲಿತ ಅಭ್ಯರ್ಥಿಯು ಕುಂದಗೋಳ ಪಟ್ಟಣ ಪಂಚಾಯತ್ ನ ನೂತನ ಅಧ್ಯಕ್ಷರಾಗಿ ವಾಸು ಗಂಗಾಯಿ, ಉಪಾಧ್ಯಕ್ಷರಾಗಿ ( ಅ ) ವರ್ಗದಿಂದ ಭುವನೇಶ್ವರಿ ಕವಲಗೇರಿ ಆಯ್ಕೆಯಾಗಿದ್ದಾರೆ.
ಇವರಿಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದು,
ಬಹುಮತ ಇಲ್ಲದಿರುವುದರಿಂದ ಕಾಂಗ್ರೆಸ್ ನಾಮಪತ್ರ ಸಲ್ಲಿಕೆ ಮಾಡಲಿಲ್ಲ ಎಂಬುದೇ ಇಲ್ಲಿನ ಫಲಿತಾಂಶಕ್ಕೆ ಸಾಕ್ಷಿಯಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಎಂ ಆರ್ ಪಾಟೀಲ್, ಬಸವರಾಜ್ ಕುಂದಗೋಳಮಠ, ಮಾಂತೇಶ ಶಾಗೋಟಿ, ರವಿಗೌಡ ಪಾಟೀಲ್, ಪಂಕಜ ಕೋರಿ, ಭರಮಗೌಡ ದ್ಯಾಮನಗೌಡ, ಪೃಥ್ವಿರಾಜ್ ಕಾಳೆ, ಡಿ ವೈ ಲಕ್ಕನ ಗೌಡರ್, ಈಶಪ್ಪ ಗಂಗಾಯಿ, ಬಸವರಾಜ್ ಕೊಪ್ಪದ ಸೇರಿದಂತೆ ಪಟ್ಟಣ ಪಂಚಾಯತಿ ಸದಸ್ಯರು ಹಾಗೂ ಬಿಜೆಪಿಯ ಮುಖಂಡರು ಸಂಭ್ರಮಿಸಿದರು.