ಮಹಿಳಾ ನೌಕರರ ಮೇಲೆ ಹಲ್ಲೆಗೆ ಯತ್ನ: ಮಾನಸಿಕವಾಗಿ ಕುಗ್ಗಿದ ಮಹಿಳಾ ನೌಕರರು
ಲಿಂಗಸುಗೂರು,ಮಾ.೨೫- ತಾಲೂಕಿನ ಮೀಸಲು ಕ್ಷೇತ್ರದಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ವೀರನಗೌಡ ಪಾಟೀಲ್ ಲೇಕ್ಕಿಹಾಳ ಇವರು ಕರ್ತವ್ಯ ನಿರತ ಸರ್ಕಾರಿ ನೌಕರರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ತಹಶೀಲ್ದಾರ್ ಕಚೇರಿಯ ಮಹಿಳಾ ನೌಕರರಿಗೆ ಮಾನಸಿಕ ಕಿರುಕುಳ ನೀಡಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳಾ ನೌಕರರು ಪೋಲೀಸ್ ಅಧಿಕಾರಿಳಿಗೆ ಬರದು ದೂರ ಕೊಟ್ಟಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ಸರ್ಕಾರಿ ನೌಕರರಿಗೆ ರಕ್ಷಣೆ ನೀಡಬೇಕು ಇಲ್ಲದಿದ್ದರೆ, ಮುಂದಿನ ದಿನಗಳಲ್ಲಿ ಕರ್ತವ್ಯ ಮಾಡುವುದು ಕಷ್ಟವಾಗುತ್ತದೆ ಇಂತಹ ರಾಜಕೀಯ ನಾಯಕರಿಗೆ ಬುದ್ದಿ ಕಲಿಸಲು ಅಧಿಕಾರಿಗಳು ಕಠಿಣ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ನೌಕರರು ಆಗ್ರಹಿಸಿದ್ದಾರೆ.
ವೀರನಗೌಡ ಪಾಟೀಲ್ ಲೇಕ್ಕಿಹಾಳ ಇವರ ವಿರುದ್ಧ ಕ್ರಮಕೈಗೊಳ್ಳಲು ತಾಲ್ಲೂಕಿನ ಹಿರಿಯ ಅಧಿಕಾರಿಗಳು ಮುಂದಾಗಬೇಕು ಎಂಬುದು ನೌಕರರು ಹೇಳಿದರು.
ಬಿಜೆಪಿ ಅಧ್ಯಕ್ಷ ಇವರು ಅಕ್ರಮ ಕೂಟ ಕಟ್ಟಿಕೊಂಡು ಮಹಿಳಾ ನೌಕರರಿಗೆ ಮಾನಸಿಕ ಹಿಂಸೆ ಮಾಡಿದ್ದಾರೆ. ಮಾಜಿ ಶಾಸಕ ಮಾನಪ್ಪ ವಜ್ಜಲ್ ಇವರ ಕುಮ್ಮಕ್ಕಿನಿಂದ ಈ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಲಿಂಗಸುಗೂರು ತಹಶೀಲ್ದಾರ್ ಕಚೇರಿಯ ಮಹಿಳಾ ನೌಕರರಿಗೆ ರಕ್ಷಣೆ ಇಲ್ಲದಂತಾಗಿದೆ ಕೂಡಲೇ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ತಾಲೂಕಿನ ಯಾವುದೇ ಇಲಾಖೆಯ ಸರ್ಕಾರಿ ನೌಕರರಿಗೆ ರಕ್ಷಣೆ ನೀಡಬೇಕು ಎಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಭೀಮಣ್ಣ ನಾಯಕ ಇವರು ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಸಾಹಾಯಕ ಆಯುಕ್ತರ ಮುಖಾಂತರ ಮನವಿ ಪತ್ರ ಸಲ್ಲಿಸಿ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.
ಸುಜಾತ ಹೆಚ್ ಶಿರಸ್ತೇದಾರ, ತಹಶೀಲ್ ಕಛೇರಿ ಲಿಂಗಸುಗೂರು ದಿ.೨೩-೦೩-೨೦೨೩ ರಂದು ಸಮಯ ೩.೩೦ ಗಂಟೆಗೆ ಕಛೇರಿಯಲ್ಲಿ ನಡೆದ ಘಟನೆ ನಾನು ಜಾತಿಯಿಂದ ಮಾದಿಗ ಜಾತಿಯವಳಾಗಿದ್ದು, ನನ್ನ ವಯಸ್ಸು :೩೨ ಇದ್ದು, ಇಡಬ್ಲ್ಯೂಎಸ್ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ದಿನಾಂಕ:೨೩-೦೩-೨೦೨೩ ರಂದು ಕಛೇರಿ ಟಿಪ್ಪಣಿಯಲ್ಲಿ ಬರೆದಿರುವಂತೆ ಸದರಿ ಪ್ರಮಾಣ ಪತ್ರ ನೀಡಲು ಅವಶ್ಯವಿರುವ ಪಾನ್ ಕಾರ್ಡ್, ಅರ್ಜಿದಾರರ ಕುಟುಂಬದಲ್ಲಿ ಸರ್ಕಾರಿ ನೌಕರರು ಇಲ್ಲದಿರುವ ಬಗ್ಗೆ, ಆದಾಯದ ಕುರಿತು ಪಂಚನಾಮೆ ಇಲ್ಲದಿರುವ ಬಗ್ಗೆ, ಸದರಿ ದಾಖಲೆಗಳು ಸಲ್ಲಿಸದೇ ಇರುವ ಕಾರಣ ನನ್ನ ಷರಾ ಬರೆದು ಮಾನ್ಯ ತಹಶೀಲ್ದಾರರಿಗೆ ರವಾನಿಸಿರುತ್ತೆನೆ. ಆದರೆ ಸದರಿ ದಾಖಲೆಗಳು ಇಲ್ಲದ್ದಿದರೂ ಸಹ ಸದರಿ ಪ್ರಮಾಣ ಪತ್ರವನ್ನು ಮಂಜೂರು ಮಾಡಲು ಒತ್ತಾಯಿಸುತ್ತಿದ್ದರು.
ದಿ.೨೩-೦೩-೨೦೨೩ ರಂದು ಸುಮಾರು ಮದ್ಯಾಹ್ನ ೩.೩೦ ಗಂಟೆಗೆ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಹಾಗೂ ಶಿರಸ್ತೇದಾರರು ಇರುವ ಕೊಠಡಿ ಸಂಖ್ಯೆ ೧೦ ಕ್ಕೆ ಏಕಾಏಕಿ ೮ ಜನರ ಗುಂಪಿನೊಂದಿಗೆ ವೀರನಗೌಡ ಲೆಕ್ಕಿಹಾಳ ಇವರು ನನಗೆ ಏ ನೀನು ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡುತ್ತಿಯಾ, ನೀನು ಯಾವಕಿ ನಿಂದೇನು ಅಂತಾ ಇಡಿ ತಾಲೂಕಿಗೆ ಗೊತ್ತು, ನೀನೇನು ಸುಪ್ರೀಂ ಜಡ್ಜ್, ಎಂದು ನಿಂದನೆ ಮಾಡಿ ಮಾತನಾಡುವ ಮುಖಾಂತರ ನೌಕರರ ಆತ್ಮಸ್ಥೈರ್ಯ ಕುಗ್ಗಿಸುವ ಮೂಲಕ ತಮ್ಮ ಅಟ್ಟಹಾಸ ಮೆರೆದಿದ್ದಾರೆ.
ಅವ್ಯಾಚ್ಚ ಶಬ್ದಗಳಿಂದ ಹಾಗೂ ಏಕ ವಚನದಿಂದ ಮಾದಿಗ ಜಾತಿನಿಂದನೆ ಮಾಡುವ ಮಾತುಗಳನ್ನು ಆಡುತ್ತಾ, ನನ್ನ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಕಛೇರಿಯಲ್ಲಿ ಹಾಜರಿದ್ದ ಮಹಿಳಾ ಸಿಬ್ಬಂದಿಗಳು ಸಮಜಾಯಿಸಿ ಹೇಳಲು ಮುಂದಾದಾಗ ಅವರಿಗೂ ಸಹ ತಹಶೀಲ್ ಕಛೇರಿಯವರು ನಿವೇನು ಸತ್ಯ ಹರಿಚ್ಚಂದ್ರನ ಮೊಮ್ಮಕಳಾ, ವಂಶಸ್ಥರಾ, ನಿಮ್ಮದೇಲ್ಲಾ ಗೋತ್ತು ನೀವು ೫, ಸಾವರ ಮತ್ತು ೧೦, ಸಾವಿರ ದುಡ್ಡು ಕೊಟ್ಟರೆ ಎಲ್ಲವನ್ನೂ ಮಾಡುತ್ತಿರಿ ಎಂದು ಮಹಿಳಾ ಸಿಬ್ಬಂದಿಗಳಿಗೆ ಅತೀ ಕೇವಲವಾಗಿ ಮಾತನಾಡಿರುತ್ತಾರೆ.
ಇದರಿಂದ ಕಛೇರಿಯ ಎಲ್ಲಾ ಮಹಿಳಾ ಸಿಬ್ಬಂದಿಗಳು ಕಛೇರಿಗೆ ಬಂದು ಕಾರ್ಯನಿರ್ವಹಿಸಲು ಭಯಬಿದ್ದು, ಕರ್ತವ್ಯಕ್ಕೆ ಬರುವುದಿಲ್ಲ ಎಂದು ತಮ್ಮ ವೇದನೆಯನ್ನು ಹಾಗೂ ಅಳಲನ್ನು ಕಣ್ಣಿರು ಹಾಕುತ್ತಾ ಹೇಳಿಕೊಂಡಿರುತ್ತಾರೆ. ಈ ಘಟನೆಯಿಂದ ನಾನು ಮಾನಸಿಕವಾಗಿ ಜರ್ಜರಿತಳಾಗಿರುತ್ತನೆ. ವೀರನಗೌಡ ಲೆಕ್ಕಹಾಳ ಇವರು ನನಗೆ ಜೀವ ಬೇದರಿಕೆ ಕೂಡಾ ಹಾಕಿರುತ್ತಾರೆ.
ನನಗೆ ಕರ್ತವ್ಯ ನಿರ್ವಹಿಸಲು ಭಯವಾಗುತ್ತಿದ್ದು, ಪೊಲೀಸ್ ರಕ್ಷಣೆ ನೀಡಬೇಕು ವೀರನಗೌಡ ಲೆಕ್ಕಿಹಾಳ ಹಾಗೂ ೮ ಜನ ಸಹಚರರ ವಿರುದ್ಧ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ, ಜಾತಿ ನಿಂದನೆ ಮಾಡಿರುವ ಆರೋಪ ಮತ್ತು ಮಹಿಳಾ ನೌಕರರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ಕುರಿತು ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳ ಬೇಕು ತಪ್ಪಿದಲ್ಲಿ ತಾಲೂಕಾ ಮಟ್ಟದ ಹಾಗೂ ಜಿಲ್ಲಾ ಮಟ್ಟದ ಎಲ್ಲಾ ಸರಕಾರಿ ನೌಕರರ ಸಂಘದಿಂದ ಅನಿರ್ದಿಷ್ಟಾವಧಿ ಹೋರಾಟವನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.
ಸಹಾಯಕ ಆಯುಕ್ತರು ಲಿಂಗಸುಗೂರು ಹಾಗೂ ತಹಶೀಲ್ದಾರರು ಲಿಂಗಸುಗೂರು ಇವರಿಗೆ ಮನವಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ತಹಶೀಲ್ದಾರ್ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.