ಬಿಜೆಪಿ ತಾಲೂಕ ಘಟಕ: ದೀನದಯಾಳ ಜಯಂತಿ ಆಚರಣೆ

ಸಿರವಾರ.ಸೆ೨೬- ಜನಸಂಘದ ಸಂಸ್ಥಾಪಕರಾದ ಪಂಡಿತ ದೀನದಯಾಳ ಉಪಾದ್ಯಾಯರ ಜಯಂತಿಯನ್ನು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ಸಿರವಾರ ತಾಲೂಕ ಘಟಕದಿಂದ ಪಟ್ಟಣದ ಈಶ್ವರದೇವಸ್ಥಾನದ ಅವರಣದಲ್ಲಿ ಆಚರಣೆ ಮಾಡಲಾಯಿತು.
ಪಟ್ಟಣದ ಈಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಪಕ್ಷದ ಚಿನ್ಹೆಯಾದ ಕಮಲದ ಚಿತ್ರ ಬಿಡಿಸಿ, ಅದಕ್ಕೆ ದೀಪಗಳನ್ನು ಹಚ್ಚುವ ಮೂಲಕ ಚಾಲನೆ ನೀಡಲಾಯಿತು. ವಿವಧ ಮೋರ್ಚ, ಬೂತ ಮಟ್ಟಕ್ಕೆ ಆಯ್ಕೆಯಾದ ಪದಾಧಿಕಾರಿಗಳ ಮನೆಗಳಿಗೆ ತೆರಳಿ ನಾಮಪಲಕ ಅಳವಡಿಸಿ ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಕುರಿತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾವ ಕುಕರ್ಣಿ, ಮಾನ್ವಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಪ.ಪಂ ನಾಮನಿಧೇರ್ಶಕ ನಾಗಪ್ಪ ಎಲ್.ಐ.ಸಿ, ಕಾರ್ಯದರ್ಶಿ ರಮೇಶ ಶೇಟ್ಟಿ, ಪ್ರಹ್ಲಾದ್‌ಜೋಷಿ ಮಾತನಾಡಿದರು.
ದೇವರಾಜಹಿರೇಮಠ, ರಮೇಶ ಚಿಂಚರಕಿ, ಗುರುನಾಥರೇಡ್ಡಿ, ಪ.ಪಂ ನಾಮನಿರ್ಧೇಶಕ ಅಜೀತ ಹೊನ್ನಟಗಿ, ಎಪಿಎಂಸಿ ಸದಸ್ಯ ಮೌಲಾಸಾಬ ಗಣದಿನ್ನಿ, ಮಾಜಿ ಸದಸ್ಯ ಸಂದೀಪ್ ಪಾಟೀಲ್, ಕೃಷ್ಣನಾಯಕ, ಶ್ರೀಕಾಂತ, ಮಲ್ಲಪ್ಪಖಜ್ಜಿ, ರಾಮಯ್ಯ ಬೈನೇರ್, ಹೆಚ್.ಕೆ.ಅಮರೇಶ, ವಿಜಯಕುಮಾರ ಗುಡ್ಡದಮನೆ, ರಾಜು, ವಾಹೀದ್, ಇಬ್ರಾಹಿಂ, ರಾಚೋಟಿ. ಮಾನೇಶ ವಿಶ್ವಕರ್ಮ, ಉಮೇಶ ಜೇಗರಕಲ್, ಸಂತೋಷ ಸ್ವಾಮಿ, ಡಾ.ನಾಗರಾಜಗೌಡ ಸೇರಿದಂತೆ ಇನ್ನಿತರರು ಇದ್ದರು.