ಕೋಲಾರ,ಏ,೧೭-ಸತ್ಯವನ್ನು ಉಳಿಸಲು ಹಾಗೂ ಸತ್ಯವನ್ನು ಜನಕ್ಕೆ ತಿಳಿಸುವ ಸಲುವಾಗಿ ಜೈ ಭಾರತ್ ಯಾತ್ರೆಯನ್ನು ಕೋಲಾರದ ಮೂಲಕವೇ ಹಮ್ಮಿಕೊಳ್ಳಲಾಗಿದೆ ಎಂದು ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು
ನಗರದ ಹೊರವಲಯದ ಜಿಲ್ಲಾಧಿಕಾರಿ ಕಚೇರಿ ಬಳಿ ಭಾನುವಾರ ನಡೆದ ಜೈ ಭಾರತ್ ಯಾತ್ರೆ ಮತ್ತು ಕರ್ನಾಟಕ ವಿಧಾನಸಭೆಯ ೨೦೨೩ರ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಚುನಾವಣೆಯಲ್ಲಿ ೭ ಲಕ್ಷ ಅಂತರದಿಂದ ಗೆದ್ದಂತಹ ಸಂಸದರನ್ನ ಅನರ್ಹಗೊಳಿಸಿದ ಬಿಜೆಪಿ ಸರ್ಕಾರ ಪ್ರಜಾ ಪ್ರಭುತ್ವವನ್ನು ಕಗ್ಗೊಲೆ ಮಾಡಲು ಮುಂದಾಗಿರುವಂತ ಡಬಲ್ ಇಂಜಿನ್ ಸರ್ಕಾರಕ್ಕೆ ಮೇ.೧೦ರಂದು ನಡೆಯಲಿರುವ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವ ಮೂಲಕ ಪಾಠ ಕಲಿಸುವಂತಾಗ ಬೇಕೆಂದು ಕಾರ್ಯಕರ್ತರಿಗೆ ಕರೆ ನೀಡಿದರು
ಕೇಂದ್ರ ಸರ್ಕಾರದ ಭ್ರಷ್ಟಾಚಾರ ವಿರುದ್ದ ಸಿಡಿದೆದ್ದಿಕ್ಕೆ ಅವರಿಗೆ ಶಿಕ್ಷೆ ಮತ್ತು ಸಂಸತ್ ಸದಸ್ಯತ್ವವನ್ನು ಅನರ್ಹಗೊಳಿಸಿದ್ದಾರೆ, ಅದರ ವಿರುದ್ದ ದೇಶದ ಜನಕ್ಕೆ ತಿಳಿಸುವ ಸಲುವಾಗಿ ಎಲ್ಲಿ ಮಾತನಾಡಿ ಶಿಕ್ಷೆ ಅನುಭವಿಸಿದ್ದಾರೋ ಅದೇ ಜಾಗದಿಂದ ಮಾತನಾಡಲು ಬಂದಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರ ಭ್ರಷ್ಟಾಚಾರಗಳನ್ನು ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರು ವಿವರಿಸಿದ್ದಾರೆ ಎಂದರು
ರಾಜ್ಯದ ನೆಲೆ, ಜಲ, ರಕ್ಷಣೆ ಮಾಡುವಂತಹ ಪಕ್ಷವನ್ನು ಅಧಿಕಾರಕ್ಕೆ ತರಬೇಕು, ಪ್ರಧಾನಿ ಮೋದಿ ೯ ವರ್ಷಗಳಿಂದ ಅಧಿಕಾರ ನಡೆಸುತ್ತಿರುವುದನ್ನು ನೋಡುತ್ತಿದ್ದೀರಿ, ಡಬಲ್ ಇಂಜಿನ್ ಸರ್ಕಾರ ಬಂದ ಮೇಲೆ ಇಂತಹ ಭ್ರಷ್ಠ ಸರ್ಕಾರವನ್ನು ರಾಜ್ಯ ಈವರೆಗೂ ಕಂಡಿರಲಿಲ್ಲ, ರಾಜ್ಯದ ಗೌರವ, ಮಾನ, ಮರ್ಯಾದೆ ಎಲ್ಲವನ್ನು ಹಾಳು ಮಾಡುತ್ತಿದ್ದಾರೆ ಎಂದು ಅರೋಪಿದರು
ನಮ್ಮ ಸರ್ಕಾರದ ಅವಧಿಯಲ್ಲಿ ೨ ಲಕ್ಷ ಹುದ್ದೆ ಭರ್ತಿ ಮಾಡಲಾಗಿತ್ತು, ಈಗ ೨.೫ ಲಕ್ಷ ಹುದ್ದೆ ಖಾಲಿ ಇದೆ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ಥಗಿತವಾಗಿರುವ ಕೌಶಲ್ಯ ಇಲಖೆಯನ್ನು ಮತ್ತೆ ಪ್ರಾರಂಭಿಸಿ ಉದ್ಯೋಗ ಸೃಷ್ಠಿಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ.ಶ್ರೀನಿವಾಸ್, ಶಾಸಕ ವೆಂಕಟರಾಮಯ್ಯ, ಮಾಜಿ ಸಚಿವ ಎಂ.ಆರ್.ಸೀತಾರಾಂ, ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಮಾಜಿ ವಿಧಾನ ಪರಿಷತ್ ಸದಸ್ಯ ಎಂ. ನಾರಾಯಣಸ್ವಾಮಿ ಮಾತನಾಡಿದರು.
ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ, ಹೆಚ್.ಕೆ.ಪಾಟೀಲ್ ಇತರರು ಇದ್ದರು.