
ಬಿ.ನಾಗರಾಜ ಕೂಡ್ಲಿಗಿ.
ಕೂಡ್ಲಿಗಿ.ಏ.8 :- ಬಿಜೆಪಿಯ ಟಿಕೇಟ್ ಹಂಚಿಕೆಗೂ ಮೊದಲೇ ಕೂಡ್ಲಿಗಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತದ ಬಿಸಿಗಾಳಿ ಬೀಸುತ್ತಿದ್ದು ಸ್ಥಳೀಯರಿಗೆ ಟಿಕೇಟ್ ಕೊಡುವ ವಿಚಾರದಲ್ಲಿ ವರಿಷ್ಠರ ಗಮನ ಸೆಳೆಯಲಾಗಿದ್ದು ಸ್ಥಳೀಯವಾಗಿ ಕಾಂಗ್ರೇಸ್ ಪ್ರತಿಸ್ಪರ್ದಿಯಾಗಿ ಯಾರಿಗೆ ಟಿಕೆಟ್ ನೀಡಿದರೆ ಬಿಜೆಪಿಗೆ ಜಯಮಾಲೆ ಎಂಬ ಲೆಕ್ಕಾಚಾರದ ತಾಳೆ ಹಾಕುತ್ತಿದ್ದು ಯಾರಿಗೆ ಬಿಜೆಪಿ ಟಿಕೇಟ್ ಸಿಗಬಹುದು ಎಂಬುದು ಮಾತ್ರ ಕುತೂಹಲವಾಗಿದೆ.
ಬಿಜೆಪಿಯಲ್ಲಿ ಪ್ರಮುಖರಾಗಿ ಬಂಗಾರು ಹನುಮಂತು ಹಾಗೂ ಕೋಡಿಹಳ್ಳಿ ಭೀಮಣ್ಣ ಸೇರಿದಂತೆ ರಾಮದುರ್ಗ ಸೂರ್ಯಪಾಪಣ್ಣ, ಎಸ್ ಪಿ ಪ್ರಕಾಶ ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದ್ದವು ಹಾಗೂ ಕೂಡ್ಲಿಗಿ ಕ್ಷೇತ್ರಕ್ಕೆ ಶ್ರೀರಾಮುಲು ಅಥಾವ ಸಹೋದರಿ ಮಾಜಿ ಸಂಸದೆ ಜೆ ಶಾಂತ ಹಾಗೂ ಹಾಲಿ ಸಂಸದ ದೇವೇಂದ್ರಪ್ಪ ಪುತ್ರ ಅಣ್ಣಪ್ಪ ಅವರ ಆಗಮನದ ಸುದ್ದಿಯ ಬಿಸಿಗಾಳಿ ಬೀಸುತ್ತಿರುವಾಗ್ಗೆ ಇತ್ತೀಚಿನ ಬೆಳವಣಿಗೆಯಂತೆ ಕಾಂಗ್ರೆಸ್ ಟಿಕೇಟ್ ವಂಚಿತ ಲೋಕೇಶ್ ವಿ ನಾಯಕ, ಸಚಿವ ಶ್ರೀರಾಮುಲು ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ನಂತರ ಕೂಡ್ಲಿಗಿ ಕ್ಷೇತ್ರದ ರಾಜಕೀಯದ ಬಿಸಿಗಾಳಿಯ ರಣಕಣ ದಿನೇದಿನೇ ರಂಗೇರುತ್ತಿದ್ದು, ಲೋಕೇಶ ನಾಯಕರಿಗೆ ಟಿಕೆಟ್ ಕೊಡಬಹುದು ಎನ್ನುವ ಗಾಳಿ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರಿಗೆ ಟಿಕೇಟ್ ನೀಡುವ ಕೂಗು ಜೋರಾಗುವ ಜೊತೆಗೆ ಲೋಕೇಶ್ ನಾಯಕ ಜಾತಿ ನಕಲು ನೀಡಿ ಚುನಾವಣೆಯಲ್ಲಿ ಸ್ಪರ್ದಿಸಲು ಮುಂದಾಗಿದ್ದಾರೆ ಅವರು ನಾಯಕ ಸಮುದಾಯದವರೇ ಅಲ್ಲಾ ಎಂದು ದೂರು ಸಹ ನೀಡಲಾಗಿದೆ ಎನ್ನುತ್ತಾರೆ ಕೆಲ ಆಕಾಂಕ್ಷಿಗಳ ಬೆಂಬಲಿಗ ಕಾರ್ಯಕರ್ತರು ಆದರೆ ಇದ್ಯಾವುದನ್ನು ತಲೆಕೆಡಿಸಿಕೊಳ್ಳದೆ ಲೋಕೇಶ್ ನಾಯಕ ಕೂಡ್ಲಿಗಿ ಕ್ಷೇತ್ರದಲ್ಲಿ ತಮ್ಮ ಹಳೇ ಬೆಂಬಲಿಗರ ಮನೆಮನೆಗೆ ಭೇಟಿ ನೀಡಲು ಮುಂದಾಗಿದ್ದಾರೆ. ಅತ್ತ ಕೆಲವರು ಟಿಕೇಟ್ ಗಾಗಿ ಬೆಂಗಳೂರಿನಲ್ಲಿ ಠಿಕಾಣಿ ಹೂಡಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈಗ ಕೂಡ್ಲಿಗಿ ಕ್ಷೇತ್ರದಲ್ಲಿ ಸ್ಥಳೀಯರ ಬಿಜೆಪಿಯ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು ವರಿಷ್ಠರ ತೀರ್ಮಾನದಂತೆ ಟಿಕೇಟ್ ಯಾರಿಗೆ ನೀಡುತ್ತಾರೆ ಎನ್ನುವುದರ ಮೇಲೆ ಪಕ್ಷಾಂತರ ಪರ್ವ ಬಂಡಾಯದ ಬಿಸಿ ಬೇಸಿಗೆಯ ಉರಿ ಬಿಸಿಲಿಗಿಂತಲೂ ಜೋರಾಗಲಿದೆ ಟಿಕೆಟ್ ವಂಚಿತರನ್ನು ಮಣೆ ಹಾಕುವಲ್ಲಿ ಜೆಡಿಎಸ್ ಹಾಗೂ ಕೆ ಆರ್ ಪಿಪಿ ಪಕ್ಷಗಳು ಬಲೆ ಹಿಡಿದುಕೊಂಡು ನಿಂತಿದ್ದು ಬಿಜೆಪಿ ಟಿಕೆಟ್ ವಂಚಿತರು ಪಕ್ಷಾಂತರ ಪರ್ವದಲ್ಲಿ ಬಲೆಗೂ ಬಿದ್ದರೂ ಬೀಳಬಹುದು ಎನ್ನಬಹುದಾಗಿದೆ ಆದರೆ ಈ ಬಾರಿ ಕೂಡ್ಲಿಗಿ ಕ್ಷೇತ್ರ ಪ್ರತಿಷ್ಠೆಯ ಕಣದಲ್ಲಿ ಒಂದು ಎಂದು ಹೇಳಬಹುದಾಗಿದೆ
ಕಾಂಗ್ರೇಸ್ ಟಿಕೇಟ್ ಸ್ಥಳೀಯ ನರಸಿಂಹಗಿರಿಯ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರ ಪುತ್ರ ಡಾ.ಎನ್.ಟಿ.ಶ್ರೀನಿವಾಸ್ ಅವರಿಗೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿಯಲ್ಲೀಗ ರಾಜಕೀಯ ಚಟುವಟಿಕೆ ಬಿರುಸು ಪಡೆದಿದೆ. ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಕೋಡಿಹಳ್ಳಿ ಭೀಮಣ್ಣ, ಬಂಗಾರು ಹನುಮಂತು, ಸೂರ್ಯಪಾಪಣ್ಣ, ಎಸ್.ಪಿ.ಪ್ರಕಾಶ್ ಅವರು ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ. ಅಲ್ಲದೆ, ಕಾಂಗ್ರೆಸ್ ನಿಂದ ಮುನಿಸಿಕೊಂಡು ಬಿಜೆಪಿ ಸೇರಿರುವ ಲೋಕೇಶ್ ವಿ.ನಾಯಕ ಅವರೂ ಸಹ ಬಿಜೆಪಿ ಟಿಕೆಟ್ ಸಿಗುವುದೆಂಬ ಭರವಸೆ ಇಟ್ಟುಕೊಂಡಿದ್ದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ತಳಮಳ / ಚರ್ಚೆ ಮಾತ್ರ ಜೋರಾಗಿ ನಡೆಯುತ್ತಿದೆ ಈ ಬೆಳವಣಿಗೆಯನ್ನು ಪ್ರಜಾಪ್ರಭುತ್ವದ ಪ್ರಭು ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮೇ10ರಂದು ನಾ ನೀಡುವ ಭವಿಷ್ಯ ಅಂತಿಮ ಎಂದು ಮಾತ್ರ ಮುಗುಳು ನಗೆ ಬೀರುತ್ತಿದ್ದಾನೆ
ಟಿಕೇಟ್ ಹಂಚಿಕೆ ಬಿಜೆಪಿ ವರಿಷ್ಠರಿಗೆ ತಲೆ ಬಿಸಿ : ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಕೂಡ್ಲಿಗಿ ಕ್ಷೇತ್ರದ ಟಿಕೇಟ್ ಹಂಚಿಕೆ ವರಷ್ಠರಿಗೆ ತಲೆಬಿಸಿಯಾಗಿದೆ. ಟಿಕೆಟ್ ಆಕಾಂಕ್ಷಿಗಳಲ್ಲೇ ಸ್ಥಳೀಯರು ಮತ್ತು ಹೊರಗಿನವರು ಎಂಬ ಗದ್ದಲವೂ ಎದ್ದಿದೆ. ಅಲ್ಲದೆ, ಕಾಂಗ್ರೆಸ್ ನಲ್ಲಿದ್ದ ಲೋಕೇಶ್ ನಾಯಕ ಅವರನ್ನು ಇತ್ತೀಚಿಗೆ ಬಿಜೆಪಿಗೆ ಸೇರಿಸಿಕೊಂಡಿರುವ ಹಿಂದೆ ಟಿಕೆಟ್ ನೀಡುವ ಖಾತ್ರಿಯಾಗಿದೆಯಾ? ಎಂಬ ಕುತೂಹಲವು ಕೂಡ್ಲಿಗಿಯ ಕಮಲ ನಾಯಕರು ಹಾಗೂ ಆಕಾಂಕ್ಷಿಗಳಲ್ಲಿ ತಳಮಳ ಸೃಷ್ಟಿಸಿರುವುದಂತೂ ಸತ್ಯವಾಗಿದೆ ಸದ್ಯದಲ್ಲೇ ಬಿಜೆಪಿ ಪಟ್ಟಿ ಹೊರಬೀಳಲಿದ್ದು ಕ್ಷೇತ್ರದಲ್ಲಿ ಕಮಲ ಹಿಡಿಯುವ ನಾಯಕ ಯಾರು ಎನ್ನುವ ಗೊಂದಲಕ್ಕೆ ತೆರೆಬೀಳಲಿದ್ದು ಬಿಜೆಪಿಯಲ್ಲೂ ಬಂಡಾಯದ ಬಿಸಿ ಬೀಸುವ ಲಕ್ಷಣಗಳು ಕಾಣುತ್ತಿವೆ ಎನ್ನುತ್ತಾರೆ ಗ್ರಾಮೀಣ ಭಾಗದ ರಾಜಕೀಯ ಹಳ್ಳಿಕಟ್ಟೆಯ ತಜ್ಞರ ಅಭಿಪ್ರಾಯವಾಗಿದೆ.