ಬಿಜೆಪಿ ಟಿಕೆಟ್ ವಂಚಿತರೆಲ್ಲ ಒಂದೆಡೆ ಸಭೆ.   ವರಿಷ್ಠರ ನಡೆಗೆ,ಕೂಡ್ಲಿಗಿಯಲ್ಲಿ ಬಂಡಾಯದ  ಕೂಗು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.14 :-  ಟಿಕೇಟ್ ಹಂಚಿಕೆಗೂ ಮೊದಲು ತಾ ಮುಂದು ನಾ ಮುಂದು ಎಂಬಂತೆ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಮುಸುಗಿನ ಗುದ್ದಾಟ ನಡೆಸುತ್ತಿದ್ದ ಆಕಾಂಕ್ಷಿಗಳು ಟಿಕೇಟ್ ಹಂಚಿಕೆಯಾಗುತ್ತಿದ್ದಂತೆ ಬಂಡಾಯದ ಕಹಳೆ ಮೊಳಗಿಸಿದ ಟಿಕೇಟ್  ವಂಚಿತ ಆಕಾಂಕ್ಷಿಗಳು ಮೊದಲು ಬೇರೆಬೇರೆಯಾಗಿ ಸಭೆ ನಡೆಸಿ ನಂತರ ಗುರುವಾರ ಬಿಜೆಪಿ ಕೂಡ್ಲಿಗಿ ಟಿಕೆಟ್ ವಂಚಿತ ಆಕಾಂಕ್ಷಿಗಳು ಒಂದೆಡೆ ಸೇರಿ  ಹಾಗೂ ಅವರ ಬೆಂಬಲಿಗರ ಸಭೆಕರೆದು ಪಕ್ಷದ ವರಿಷ್ಠರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಸಕಲಾಪುರಹಟ್ಟಿ ಗ್ರಾಮದ ಹೊರವಲಯದಲ್ಲಿ ಗುರುವಾರ ಪಕ್ಷದ ವರಿಷ್ಠರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತ ಪಕ್ಷದ ಕಟ್ಟಾ ಬೆಂಬಲಿಗರಾಗಿ ಪಕ್ಷದ  ಸಂಘಟನೆಗಾಗಿ ಅನೇಕ ವರ್ಷಗಳಿಂದ ಶ್ರಮಿಸಿದವರನ್ನು ವರಿಷ್ಠರು ಕಡೆಗಣಿಸಿ, ಹೊಸದಾಗಿ ಪಕ್ಷ ಸೇರಿದವರಿಗೆ ಮಣೆ ಹಾಕಿ ಅವರಿಗೆ  ಪಕ್ಷದ ಟಿಕೇಟ್ ನೀಡಿದ್ದು ಬೇಸರ ತಂದಿದೆ ಇದಕ್ಕೆ  ವರಿಷ್ಠರು ಹಾಗೂ ಸಚಿವ ಶ್ರೀರಾಮುಲು ವಿರುದ್ಧ ಟಿಕೆಟ್ ವಂಚಿತರು ಹಾಗೂ ಕಾರ್ಯಕರ್ತರು ಅಸಮಾಧಾನವನ್ನು ಈ ಸಂದರ್ಭದಲ್ಲಿ  ಹೊರಹಾಕಿದರು.
ಟಿಕೆಟ್ ವಂಚಿತರಾದ ಕೋಡಿಹಳ್ಳಿ ಭೀಮಣ್ಣ, ಬಂಗಾರು ಹನುಮಂತು, ಸೂರ್ಯಪಾಪಣ್ಣ ಹಾಗೂ ಎಸ್.ಪಿ.ಪ್ರಕಾಶ್ ಮಾತನಾಡಿ, ಬಿಜೆಪಿಯನ್ನು ಕ್ಷೇತ್ರದಲ್ಲಿ ಸಂಘಟಿಸುವಲ್ಲಿ ಸಾಕಷ್ಟು ಶ್ರಮಿಸಲಾಗಿದೆ. ಬೂತ್ ಮಟ್ಟದಲ್ಲೂ ಕಾರ್ಯಕರ್ತರನ್ನು ಒಗ್ಗೂಡಿಸಿ ಕೆಲಸ ಮಾಡಿದ್ದರೂ ಯಾವುದೇ ಕಿಮ್ಮತ್ತು ನೀಡದ ಪಕ್ಷದ ನಾಯಕರ ನಡೆ ಬೇಸರ ತರಿಸಿದೆ. ಪಕ್ಷಕ್ಕಾಗಿ ದುಡಿದಿದ್ದು ತಪ್ಪಾ? ಕಾಂಗ್ರೆಸ್‌ನಲ್ಲಿದ್ದಾಗ ಬಿಜೆಪಿ ನಾಯಕರನ್ನು ಬೈದಾಡಿದ್ದ ವ್ಯಕ್ತಿಗೆ ಟಿಕೆಟ್ ನೀಡಿರುವುದು ಎಷ್ಟು ಸರಿ. ಇಂಥವರ ಜತೆ ಮತದಾರರ ಬಳಿಗೆ ಹೋಗುವುದಾದರೂ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಈಗಲೂ ಕಾಲ ಮಿಂಚಿಲ್ಲ ನಾಲ್ವರು ಆಕಾಂಕ್ಷಿಗಳ ಪೈಕಿ ಒಬ್ಬರಿಗೆ ಬಿ ಫಾರಂ ನೀಡುವ ಮೂಲಕ ಪಕ್ಷಕ್ಕಾಗಿ ದುಡಿದವರಿಗೆ ಬಿಜೆಪಿ ವರಿಷ್ಠರು ಆದ್ಯತೆ ನೀಡಬೇಕು. ಇಲ್ಲವಾದರೆ, ಮತದಾರರ ಅಭಿಪ್ರಾಯ ಪಡೆದು ಮುಂದಿನ ನಡೆ ಬಂಡಾಯದ ಕಡೆ ಹೆಜ್ಜೆ ಇಡಲಾಗುವುದು ಎಂದು ಪಕ್ಷದ ವರಿಷ್ಠರಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಂ.ಬಿ.ಅಯ್ಯನಹಳ್ಳಿ ನಾಗಭೂಷಣ, ಬೆಳ್ಳಕಟ್ಟೆ ಕಲ್ಲೇಶ್ ಗೌಡ, ಬಣವಿಕಲ್ಲು ಕಾಮಶೆಟ್ಟಿ ನಾಗರಾಜ, ಸಕಲಾಪುರಹಟ್ಟಿ ಶ್ರೀನಿವಾಸ್, ಹುಲಿಕೆರೆ ಮಾರಪ್ಪ, ಭದ್ರಪ್ಪ, ಕೆಂಚಮಲ್ಲನಹಳ್ಳಿ ಕೆ.ಜಿ.ಬಸವರಾಜ, ಹನುಮಜ್ಜರ ನಾಗೇಶ್, ಮಂಗಾಪುರ ಸಿದ್ದೇಶ್, ಗುಡೇಕೋಟೆ ಕೃಷ್ಣ, ಶಿವಕುಮಾರ್, ಬೇಕರಿ ಸುರೇಶ್, ಜುಮ್ಮೋಬನಹಳ್ಳಿ ಶರಣಪ್ಪ, ಭದ್ರಪ್ಪ, ವೀರಭದ್ರಪ್ಪ, ಲೋಕಿಕೆರೆ ಎರಿಸ್ವಾಮಿ ಗೌಡ, ಅಮಲಾಪುರ ಅಂಜಿನಪ್ಪ, ಹುಡೇಂ ಪಾಪನಾಯಕ, ಮಂಜುನಾಥ, ಕೆ.ಎಸ್.ವಿಶ್ವನಾಥ ಸೇರಿ ಇತರರಿದ್ದರು.
: ಸತತ 15ಕ್ಕೂ ಹೆಚ್ಚು ವರ್ಷಗಳಿಂದ ಹೊರಗಿನವರಿಗೆ ಪಕ್ಷದ ಟಿಕೇಟ್ ನೀಡಿದ್ದು ಪಕ್ಷದ ಸಕ್ರಿಯ ಕಾರ್ಯಕರ್ತರುಗಳಾಗಿ ನಿಷ್ಠೆಯಿಂದ ಗೆಲ್ಲಿಸಿಕೊಂಡು ಬಂದಿದ್ದೇವೆ ಅಲ್ಲದೆ ಈ ಬಾರಿ ಸ್ಥಳೀಯರಿಗೆ ಟಿಕೇಟ್ ನೀಡಬೇಕೆಂದು ಕೂಗು ಸಹ ಹಾಕಲಾಗಿದ್ದರು ಈ ಮನವಿಗೆ ವರಿಷ್ಠರು ಸ್ಪಂದನೆ ನೀಡದೆ ಮಾತಿಗೂ ಕಿಮ್ಮತ್ತು ನೀಡದೆ ನಮಗೆಲ್ಲಾ ಆಸರೆಯಾಗಿ ಯುವಕರ ಐಕಾನ್ ನಂತೆ ಬೆಳೆಸಬೇಕಾದ ಸಚಿವ ಶ್ರೀರಾಮುಲು ಸಹ ಟಿಕೇಟ್ ಹಂಚಿಕೆ ಕೈ ತಪ್ಪುವಲ್ಲಿ ಮುಂದಾಗಿರುವುದು ಸರಿಯಲ್ಲ ಇತ್ತೀಚಿಗೆ ಪಕ್ಷಕ್ಕೆ ಸೇರಿದವರಿಗೆ ಟಿಕೇಟ್ ನೀಡಿದರೆ ಸ್ಥಳೀಯವಾಗಿ ನಮ್ಮಲ್ಲಿ  ಹಣ ಬಲ ಹಾಗೂ ಜನ ಬಲವಿಲ್ಲವೇ ಯಾವ ಕಾರಣಕ್ಕಾಗಿ ಟಿಕೇಟ್ ಹಂಚಿಕೆ ತಾರತಮ್ಯ ಮಾಡಿದ್ದರೋ ತಿಳಿಯದ್ದಾಗಿದ್ದು ಇನ್ನು ಬಿ ಫಾರಂ ಕೊಡುವ ತನಕ ಸಮಯವಿದ್ದು ವರಿಷ್ಠರು ಮನವೊಲಿದು ವಂಚಿತರಾದ ನಮ್ಮ ನಾಲ್ವರೊಳಗೆ ಯಾರಿಗಾದರೂ ಬಿ ಫಾರಂ ನೀಡಬೇಕು ಇಲ್ಲವಾದರೆ ಕಾರ್ಯಕರ್ತರ ನಿರ್ಧಾರದಂತೆ ಮುಂದಿನ ನಡೆ ಬಂಡಾಯದ ಕಡೆ ಎಂದು ನಾಲ್ವರು ಟಿಕೇಟ್ ವಂಚಿತ ಆಕಾಂಕ್ಷಿಗಳಾದ ಬಂಗಾರು ಹನುಮಂತು, ಕೋಡಿಹಳ್ಳಿ ಭೀಮಣ್ಣ, ರಾಮದುರ್ಗ ಸೂರ್ಯಪಾಪಣ್ಣ  ಹಾಗೂ ಗುಂಡುಮುಣುಗು ಎಸ್ ಪಿ ಪ್ರಕಾಶ ಅವರ ಮಾತಾಗಿದೆ.