ಬಿಜೆಪಿ ಟಿಕೆಟ್ ಯಾರ ಪಾಲಿಗೆ

ರಾಯಚೂರು,ಏ.೦೩- ನಿನ್ನೆ ನಡೆದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ನಡೆದ ಚರ್ಚೆಗಳ ನಂತರ ಹಲವಾರು ಬೆಳವಣಿಗೆಗಳು ನಡೆದಿವೆ ಎನ್ನಲಾಗಿದೆ.
ಜಿಲ್ಲೆಯಲ್ಲಿ ದೇವದುರ್ಗ, ಶಿವನಗೌಡ ನಾಯಕ್,ಮಸ್ಕಿ ಕ್ಷೇತ್ರಕ್ಕೆ ಪ್ರತಾಪಗೌಡ, ಸಿಂಧನೂರು ಕ್ಷೇತ್ರಕ್ಕೆ ಕೆ. ಕರಿಯಪ್ಪ, ಗ್ರಾಮೀಣ ಕ್ಷೇತ್ರಕ್ಕೆ ತಿಪ್ಪರಾಜ್ ಹವಾಲ್ದಾರ್, ಬಹುತೇಕ ಟಿಕೆಟ್ ಖಚಿತವಾಗಿದ್ದು ಅಧಿಕೃತ ಘೋಷಣೆ ಮಾತ್ರ ಬಾಕಿಯಿದೆ.
ಮಾನ್ವಿ, ಲಿಂಗಸೂಗೂರು, ರಾಯಚೂರು ನಗರ ಕ್ಷೇತ್ರದ ಟಿಕೆಟ್ ನೀಡುವುದರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ತಿಳಿದುಬಂದಿದೆ.