ಬಿಜೆಪಿ ಟಿಕೆಟ್ ಮಿಸ್‍ಆಗಿದ್ದಕ್ಕೆಕೋಟೆ ಶಿವಣ್ಣ ಅಸಮಾಧಾನ: ಮುಖಂಡರಿಂದ ಪಕ್ಷೇತರರಾಗಿ ನಿಲ್ಲುವಂತೆ ಒತ್ತಾಯ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಮಾ.24-ಬಿಜೆಪಿ ಟಿಕೆಟ್‍ಘೋಷಣೆಯಾದ ಬಳಿಕ ಕೋಟೆ ಶಿವಣ್ಣ ಅವರಅಸಮಾಧಾನ ಸ್ಫೋಟವಾಗಿದ್ದುಇಂದುಚಾಮರಾಜನಗರದ ಖಾಸಗಿ ಹೋಟೆಲ್ ನಲ್ಲಿ ಬೆಂಬಲಿಗರ ಸಭೆ ನಡೆಸಿದ್ದು ಬೆಂಬಲಿಗರು ಬಿಜೆಪಿ ವಿರುದ್ಧಆಕ್ರೋಶ ಹೊರಹಾಕಿದ್ದಾರೆ.
ಸಭೆ ಬಳಿಕ ಕೋಟೆ ಶಿವಣ್ಣ ಮಾಧ್ಯಮವರೊಂದಿಗೆ ಮಾತನಾಡಿ, ಬಿಜೆಪಿಯುದಲಿತಎಡಗೈ ಸಮುದಾಯಕ್ಕೆ ಪದೇಪದೇಅನ್ಯಾಯ ಮಾಡುತ್ತಿದೆ, ಅನ್ಯಾಯವನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಕಳೆದ ವಿಧಾನಸಭಾಚುನಾವಣೆಯಲ್ಲಿ ಈ ಭಾಗದಲ್ಲಿಎಡಗೈ ಸಮುದಾಯಕ್ಕೆಟಿಕೆಟ್‍ಕೊಡಲಿಲ್ಲ. ಈ ಬಾರಿ ಲೋಕಸಭಾಚುನಾವಣೆಯಲ್ಲಿತಮಗೆಟಿಕೆಟ್‍ಕೊಡಲಿಲ್ಲ, ತಾವು ಬಂಡಾಯವಾಗಿ ಸ್ಪರ್ಧೆ ಮಾಡುವಂತೆ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ ಎಂದು ಹೇಳಿದರು.
ಸಮುದಾಯದಎಲ್ಲಾ ಮುಖಂಡರಅಭಿಪ್ರಾಯ ಪಡೆದುಎರಡು ದಿನಗೊಳಗೆ ನನ್ನ ನಿರ್ಧಾರ ತಿಳಿಸುತ್ತೇನೆ, ಮಾದಿಗ ಸಮುದಾಯ ಪ್ರತಿ ಸಾರಿ ಬಿಜೆಪಿಗೆ ಮತ ಹಾಕುತ್ತಾ ಬಂದರುಕೂಡ ಸಮುದಾಯವನ್ನುಕಡೆಗಣಿಸುತ್ತಿರುವುದು ಸಮುದಾಯಕ್ಕೆ ಬಹಳ ನೋವು ಉಂಟು ಮಾಡಿದೆ, ಯಾವ ಸಮುದಾಯಕ್ಕೆ ಮಾನ್ಯತೆಕೊಡಬೇಕಿತುಅಂತಹ ಸಮುದಾಯಕ್ಕೆ ಮಾನ್ಯತೆಕೊಡುತ್ತಿಲ್ಲ, ಮತಕೊಡದ ಸಮುದಾಯಕ್ಕೆ ಮಣೆ ಹಾಕಲಾಗುತ್ತಿದೆಎಂದುದೂರಿದರು.
ಬಿಜೆಪಿ ಮುಖಂಡ ಬಸವನಪುರರಾಜಶೇಖರ ಮಾತನಾಡಿ, ಮಾದಿಗ ಸಮುದಾಯ ಪ್ರತಿಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಿನ ಮತ ಹಾಕುವ ಮೂಲಕ ಬೆಂಬಲಿಸಿಕೊಂಡು ಬಂದಿದ್ದೇವೆ.
ಚಾಮರಾಜನಗರ ಲೋಕಸಭಾಕ್ಷೇತ್ರದಲ್ಲಿ ಮಾದಿಗ ಸಮುದಾಯ 1.45 ಲಕ್ಷ ಮತಗಳಿದ್ದರು ಕೂಡ ಬಿಜೆಪಿ ಸಮುದಾಯವನ್ನು ಕಡೆಗಣಿಸಿದ್ದು ಅಲ್ಲದೆ ಸಮುದಾಯದ ಮಾಜಿ ಸಚಿವರಾದಕೋಟೆಎಂ.ಶಿವಣ್ಣ ಅವರಿಗೆಟಿಕೆಟ್ ನೀಡದೆ ಕಡೆಗಣಿಸಿದೆ.
ಈ ಚುನಾವಣೆಯಲ್ಲಿಅವರಿಗೆಒಂದುಉತ್ತಮ ಸ್ಥಾನಮಾನ ನೀಡಿಗೌರಯುತವಾಗಿ ನಡೆಸಿಕೊಳ್ಳಬೇಕು, ಇಲ್ಲದಿದ್ದರೆಅವರನ್ನು ಬಂಡಾಯಅಭ್ಯರ್ಥಿಯಾಗಿ ಕಣಕ್ಕಿಳಿಸಲು ಸಮುದಾಯ ಮುಖಂಡರುತೀರ್ಮಾನಕೈಗೊಳ್ಳುವುದಾಗಿ ಹೇಳಿದರು.