ಬಿಜೆಪಿ ಟಿಕೆಟ್ ನೀಡುವಂತೆ ರಾಜ್ಯಾಧ್ಯಕ್ಷರಿಗೆ ಮನವಿ

ರಾಯಚೂರು,ಮಾ.೨೯- ಲಿಂಗಸುಗೂರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನ್ನು ಛಲವಾದಿ ಮಹಾಸಭಾದ ರಾಯಚೂರು ಜಿಲ್ಲೆಯ ಜಿಲ್ಲಾಧ್ಯಕ್ಷರಾಗಿರುವ ಕೆ.ನಾಗಲಿಂಗಸ್ವಾಮಿರವರಿಗೆ ನೀಡುವಂತೆ ಛಲವಾದಿ ಸಮಾಜದ ಮುಖಂಡರು ನಿನ್ನೆ ಬೆಂಗಳೂರಿನಲ್ಲಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುಮಾರ ಕಟೀಲ್ ಗೆ ಮನವಿ ಮಾಡಿದರು.
ಎಸ್ಸಿ ಮೀಸಲು ಕ್ಷೇತ್ರವಾದ ಲಿಂಗಸುಗೂರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟನ್ನು ಮೂಲ ಅಶ್ಪೃಷ್ಯ ಸಮಾಜವಾದ ಛಲವಾದಿಗೆ ನೀಡುವಂತೆ ಮತ್ತು ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರಾದ ಕೆ.ನಾಗಲಿಂಗಸ್ವಾಮಿಗೆ ನೀಡುವಂತೆ ಇಂದು ಛಲವಾದಿ ಸಮಾಜದ ಹಿರಿಯರಾದ ರವೀಂದ್ರನಾಥ ಪಟ್ಟಿಯವರ ನೇತೃತ್ವದ ನಿಯೋಗವು ಬಿಜೆಪಿಯ ಹಿರಿಯ ಮುಖಂಡರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಇದೆ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆರವರಿಗೂ ಮತ್ತು ಬಿಜೆಪಿಯ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ ಸುರಾನ ರವರಿಗೂ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಹಾಗೂ ಬಿಜೆಪಿ ಎಸ್ಸಿ ಮೋರ್ಚಾದ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಜಿಲ್ಲೆಯ ಎಲ್ಲ ಕ್ಷೇತ್ರದಲ್ಲಿಯೂ ಬಹುಸಂಖ್ಯಾತ ಮತದಾರರು ಇರುವ ಛಲವಾದಿ ಸಮಾಜಕ್ಕೆ ಲಿಂಗಸುಗೂರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೇಟ್ ನೀಡುವಂತೆ ಕೋರಲಾಯಿತು.
ಈ ಸಂದರ್ಭದಲ್ಲಿ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷರು ಮತ್ತು ಬಿಜೆಪಿ ಆಕಾಂಕ್ಷಿಯಾದ ಕೆ.ನಾಗಲಿಂಗಸ್ವಾಮಿ, ಜಿಲ್ಲಾ ಉಪಾಧ್ಯಕ್ಷರಾದ ಹನುಮಂತಪ್ಪ ಗೋಮರ್ಸಿ, ನರಸಪ್ಪ ಕಟ್ಟಿಮನಿ, ನರಸಿಂಹಲು ನೆಲಹಾಳ್, ಹುಚ್ಚಾರೆಡ್ಡಿ ಹಿರೆದಿನ್ನಿ, ಸಂತೋಷ ರಾಯಚೂರು, ವೀರೇಶ, ರಂಗಯ್ಯ, ಗುರಪ್ಪ, ಸಿದ್ದು ಸೇರಿದಂತೆ ಅನೇಕರು ಇದ್ದರು.