ಬಿಜೆಪಿ ಟಿಕೆಟ್ ನೀಡುತ್ತಾರೆ: ಕೇಂದ್ರ ಮಂತ್ರಿ ಭರವಸೆ

ಅಬ್ಬರದ ಪ್ರಚಾರದಲ್ಲಿ ತೊಡಗಿರುವ ಡಾ. ಸುದರ್ಶನ್ ಸಜ್ಜನ್
ಸಂಜೆವಾಣಿ
ಲಿಂಗಸೂಗೂರು,ಮಾ.೨೯- ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದಂತೆ ಎಲ್ಲಾ ಪಕ್ಷದವರು ಮೈಗೋಡವಿ ಮತದಾರ ಪ್ರಭುಗಳನ್ನ ಸೆಳೆಯಲು ಪ್ರಚಾರಕ್ಕೆ ಇಳಿದಿದ್ದಾರೆ.
ಬಿಜೆಪಿ ಪಕ್ಷ ಗೊಂದಲದ ಗೂಡಗಿದೆ ಯಾರಿಗೆ ಟಿಕೆಟ್ ಸಿಗುತ್ತದೆ ಎನ್ನುವ ಗೊಂದಲ ಜನರಲ್ಲಿ ಮೂಡಿದೆ. ಇತ್ತಾ ಕ್ಷೇತ್ರದಲ್ಲಿ ಬಿಜೆಪಿ ಪರ ಡಾ.ಸುದರ್ಶನ್ ಸಜ್ಜನ್ ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ಸಿಗುವ ಭರವಸೆ ಕಮ್ಮಿ ಇದೆ. ಹೆಚ್.ಬಿ. ಮುರಾರಿಯವರು ಟಿಕೆಟ್‌ಗಾಗಿ ಬಾರಿ ಕಸರತ್ತು ಮಾಡ್ತಿದ್ದಾರೆ. ಇನ್ನೊಂದು ಕಡೆಗೆ ರುದ್ರಯ್ಯ ಅವರು ಕ್ಷೇತ್ರದಲ್ಲಿ ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈಗಗಾಲೇ ಜೆಡಿಎಸ್ ಅಭ್ಯರ್ಥಿ ಘೋಷಣೆಯಾಗಿದೆ. ಸಿದ್ದು ಬಂಡಿಯವರು ತಮ್ಮ ಪಾಡಿಗೆ ತಾವು ಕ್ಷೇತ್ರದ ಜನರನ್ನು ಭೇಟಿಯಾಗಿ ಮತಯಾಚನೆ ಮಾಡ್ತಿದ್ದಾರೆ.
ಲಿಂಗಸೂಗೂರು ಕ್ಷೇತ್ರದ ಬಿಜೆಪಿ ಪಕ್ಷದಲ್ಲಿ ಕೊನೆಯವರಿಗೆ ಯಾರಿಗೆ ಟಿಕೆಟ್ ಸಿಗುತ್ತದೆ? ಯಾರಿಗೆ ಸಿಹಿ, ಯಾರಿಗೆ ಕಹಿ ಎನ್ನುವಂತಾಗಿದೆ. ಮಾಜಿ ಶಾಸಕರಾದ ಮಾನಪ್ಪ ವಜ್ಜಲ್ ಅವರು ಟಿಕೆಟ್ ಪಡೆಯಲು ಪಟ್ಟು ಹಿಡಿದು ಕುಂತ್ತಿದ್ದಾರೆ. ಆರ್‌ಎಸ್‌ಎಸ್ ನಂಟು ಹೊಂದಿರುವ ವೈದ್ಯರಾದ ಡಾ.ಸುದರ್ಶನ್ ಸಜ್ಜನ್ ಪ್ರಭಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಮೂಲತ ಹಟ್ಟಿಯವರಾದ ಇವರು ಮೂಲ ಅಸ್ಪೃಶರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದ್ದು ಕ್ಷೇತ್ರದ ಜನರನ್ನು ಭೇಟಿಯಾಗುತ್ತಿದ್ದಾರೆ.
ಹೈ ಕೋರ್ಟ್ ವಕೀಲರಾದ ಲಿಂಗರಾಜ ಕೋಟೆ ಯವರು ಕ್ಷೇತ್ರದಲ್ಲಿದ್ದು ತಮ್ಮದೇ ಆದ ಪಡೆ ಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಇನ್ನೊಂದಡೆ ಯುವ ರಾಜಕಾರಣಿ ಸುರೇಶ್ ಕೋರಿಯವರು ಯುವಕರನ್ನು ತಯಾರಿ ಮಾಡಿ ಕ್ಷೇತ್ರದಲ್ಲಿ ಜನರ ಬಳಿ ತೆರಳುತ್ತಿದ್ದಾರೆ. ಛಲವಾದಿ ಮಹಾ ಸಭಾದ ಜಿಲ್ಲಾಧ್ಯಕ್ಷರಾಗಿರುವ ನಾರಾಯಣಸ್ವಾಮಿಯವರು ತಮ್ಮ ಸಮುದಾಯದವರ ಹೆಚ್ಚಾಗಿ ಕ್ಷೇತ್ರದಲ್ಲಿ ಇರುವುದರಿಂದ ಟಿಕೆಟ್ ನೀಡಬೇಕು ಎಂದು ರಾಜ್ಯ ಹಾಗೂ ಕೇಂದ್ರ ಮಂತ್ರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಒಟ್ಟಿನಲ್ಲಿ ಬಿಜೆಪಿ ಪಕ್ಷದ ಟಿಕೆಟ್ ಬೇಡಿಕೆ ಕ್ಷೇತ್ರದಲ್ಲಿ ದುಳ್ಳು ಎಬ್ಬಿಸುತ್ತಿರುವುದು ಇವೆಲ್ಲವನ್ನು ನೋಡಿದ್ರೆ ಟಿಕೆಟ್ ಸಿಕ್ಕವರಿಗೆ ಗೆಲುವ ನಿರೀಕ್ಷೆ ಇದೆ ಎಂದು ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ.

ಬಾಕ್ಸ್
ಡಾ. ಸುದರ್ಶನ್ ಸಜ್ಜನ್ ಅವರಿಗೆ ಟಿಕೆಟ್ ನೀಡುವ ಭರವಸೆ:
ಬೆಂಗಳೂರಿನಲ್ಲಿ ಪ್ರಭಾವಿ ಕೇಂದ್ರ ಮಂತ್ರಿಗಳನ್ನು ಭೇಟಿಮಾಡಿದಾಗ ದೆಹಲಿಗೆ ಬುಲಾವ್ ಬಂದಿತ್ತು ನಂತರ ನಿನ್ನೆ ದೆಹಲಿಯಲ್ಲಿ ಅವರನ್ನ ಭೇಟಿಯಾಗಿ ಕ್ಷೇತ್ರದ ಬಗ್ಗೆ ವಿವರಣೆ ನೀಡಿ ಎಲ್ಲವನ್ನು ಚರ್ಚಿಸಿದಾಗ ನಿಮ್ಮ ಕಾರ್ಯ ನೀವೂ ಮಾಡಿ ಟಿಕೆಟ್ ನೀಡುವುದು ನೀಡುತ್ತೇವೆ.
ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕಾರ್ಯ ಮಾಡಿ ಎರಡನೇ ಹಂತದಲ್ಲಿ ಲಿಂಗಸೂಗೂರು ಕ್ಷೇತ್ರದ ಟಿಕೆಟ್ ಘೋಷಣೆಯಾಗಬಹುದು ಟಿಕೆಟ್ ಬಗ್ಗೆ ಚಿಂತೆ ಬೇಡ ಮೊದಲು ನೀವೂ ಕೆಲಸ ಮಾಡಿ ಟಿಕೆಟ್ ಘೋಷಣೆ ನಾವು ಮಾಡುತ್ತೇವೆ ಎಂದು ಕೇಂದ್ರ ಮಂತ್ರಿಗಳು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಡಾ.ಸುದರ್ಶನ್ ಸಜ್ಜನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಆದರೆ ಆ ಮಂತ್ರಿ ಯಾರು ಎಂದು ಕೇಳಿದರೆ ಸ್ವಲ್ಪ ದಿನದಲ್ಲಿ ಎಲ್ಲವೂ ಹೊರಗಡೆ ಬರುತ್ತದೆ. ನನಗೆ ಟಿಕೆಟ್ ಸಿಗುವ ಭರವಸೆ ಇದೆ, ಅದರಲ್ಲಿ ಅನುಮಾನ ಬೇಡವೆಂದು ತಿಳಿಸಿದರು.

ಬಾಕ್ಸ್
ಟಿಕೆಟ್ ಸಿಕ್ಕರೆ ಗೆಲುವು ಖಚಿತ:
ಸುದರ್ಶನ್ ಸಜ್ಜನ್‌ರವರಿಗೆ ಕ್ಷೇತ್ರದ ಜನತೆ ಸ್ಪಂದನೆ ಮಾಡುತ್ತಿದ್ದಾರೆ. ಅವರು ಹೋದ ಕಡೆಗೆ ಎಲ್ಲಾ ಜನ ಮುಗಿಬಿಳುತ್ತಿದ್ದಾರೆ ಇವರು ನಮ್ಮ ಹಟ್ಟಿಯವರು, ರಾಜಕೀಯ ಅನುಭವ ಉಳ್ಳವರು ಹಾಗೂ ವಿದ್ಯಾವಂತರಾಗಿರುವ ಕ್ಲಿನ್ ಚಿಟ್ ಡಾ.ಸುದರ್ಶನ ಸಜ್ಜನ್ ಅವರಿಗೆ ಟಿಕೆಟ್ ನೀಡಿದರೆ, ಖಚಿತವಾಗಿ ಗೆಲುವು ಕಾಣುತ್ತಾರೆ.
ಕ್ಷೇತ್ರದ ಹಲವಾರು ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಎಲ್ಲಾ ದೋಚವರೇ ಗೆದ್ದರೆ ಕ್ಷೇತ್ರ ಉದ್ದಾರವಾಗುವುದಿಲ್ಲ,ಅವರು ಉದ್ದಾರವಾಗುವುದರಲ್ಲಿ ಸರಿಯಾಗುತ್ತದೆ.
ಹಾಗಾಗಿ ಸುದರ್ಶನ್ ಅವರು ಯಾವುದೇ ಕಪ್ಪು ಚುಕ್ಕಿ ಇಲ್ಲದವರು ಇಂತಹ ಒಳ್ಳೆಯವರನ್ನು ಗೆಲ್ಲಿಸಿದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಕಾಣಬಹುದು. ಇವರಿಗೆ ಟಿಕೆಟ್ ಸಿಕ್ಕರೆ ಬಿಜೆಪಿ ಗೆಲ್ಲುವುದರಲ್ಲಿ ಅನುಮಾನವಿಲ್ಲಾ ಎಂದು ಸಾಮಾಜಿಕ ಹೋರಾಟಗಾರ ಅಮರೇಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.