ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಆದರೆ ಅದು ಅನೈತಿಕ ಸಂಬಂಧವಾಗುತ್ತೆ: ಸಚಿವ ಬಿ.ನಾಗೇಂದ್ರ

ಬೀದರ್:ಜು.28: ಇಲ್ಲಿದ್ದುಕೊಂಡೇ ಹೆಚ್‍ಡಿಕೆ ಏನೂ ಮಾಡಲ್ಲ, ಇನ್ನು ಸಿಂಗಾಪುರಕ್ಕೆ ಹೋಗಿ ಏನು ಮಾಡುತ್ತಾರೆ. ನಮ್ಮ ಸರ್ಕಾರದ ಸ್ಪೀಡ್ ನೋಡಿ ವಿರೋಧಿಗಳಿಗೆ ಸಹಿಸಲು ಆಗುತ್ತಿಲ್ಲ ಎಂದು ಹೆಚ್‍ಡಿಕೆ ಸಿಂಗಾಪುರ ಬಾಂಬ್‍ಗೆ ಸಚಿವ ಬಿ.ನಾಗೇಂದ್ರ ಲೇವಡಿ ಮಾಡಿದ್ದಾರೆ.

ಬೀದರ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಐದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ. ಹೀಗಾಗಿ ವಿರೋಧ ಪಕ್ಷದವರು ಠೇವಣಿ ಕಳೆದುಕೊಳ್ಳುತ್ತಾರೆ. ಅಲ್ಲದೇ ನಮ್ಮ ಅಭಿವೃದ್ಧಿಯನ್ನು ಕುಂಠಿತಗೊಳಿಸಲು ಈ ರೀತಿ ಕುತಂತ್ರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಡಿಕೆ ಶಿವಕುಮಾರ್ ಅವರು ಬೆಂಕಿ ಇಲ್ಲದೆ ಹೊಗೆ ಬರಲ್ಲಾ ಎನ್ನುವ ಅರ್ಥದಲ್ಲಿ ಹೇಳಿದ್ದಾರೆ. ಅವರಿಗೆ ಸಿಂಗಾಪುರದಲ್ಲಿ ಹೆಚ್‍ಡಿಕೆ ರಣತಂತ್ರದ ಬಗ್ಗೆ ಮಾಹಿತಿ ಇರಬಹುದು. ಅದಕ್ಕೆ ಪ್ರತಿತಂತ್ರವಾಗಿ ಏನು ಮಾಡಬೇಕು ಎಂಬ ಬಗ್ಗೆ ಡಿಕೆ ಶಿವಕುಮಾರ್ ರೆಡಿಯಾಗಿದ್ದು, ಈ ಸರ್ಕಾರವನ್ನು ಯಾರೂ ಐದು ವರ್ಷ ಅಲುಗಾಡಿಸಲು ಸಾಧ್ಯವಿಲ್ಲ ಎಂದರು.

ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಆದರೆ ಅದು ಅನೈತಿಕ ಸಂಬಂಧವಾಗುತ್ತೆ. ಯಾಕೆಂದರೆ ಕೋಮುವಾದಿಗಳ ಜೊತೆ ಹೋದರೆ ಜನರೆ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ. ಕೆಲವು ಶಾಸಕರಿಗೆ ಅಸಮಧಾನವಾಗಿರಬಹುದು ಆದರೆ ನಮ್ಮ ಪಕ್ಷದ ಚೌಕಟ್ಟಿನಲ್ಲಿ ಎಲ್ಲವನ್ನು ಬಗೆಹರಿಸುತ್ತೇವೆ. ಯಾರು ಕೂಡಾ ಪತ್ರ ಬರೆದಿಲ್ಲ. ಎಲ್ಲಾ ಶಾಸಕರು ಒಟ್ಟಾಗಿ ಇದ್ದೇವೆ ಎಂದು ಹೇಳಿದರು.