ಬಿಜೆಪಿ ಜೆಡಿಎಸ್ ಲಂಚಾವತರ ಬಗ್ಗೆ ತಿಳಿಸಿ

ಸಿರವಾರ,ಏ.೧೮- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆ, ನಾನು ಶಾಸಕರಾಗಿದ್ದಾಗ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳನು, ಈಗಿನ ಬಿಜೆಪಿ ಸರ್ಕಾರದ ಹಾಗೂ ಕ್ಷೇತ್ರದ ಜೆಡಿಎಸ್ ಶಾಸಕರ ಲಂಚಾವತರದ ಬಗ್ಗೆ ಮತದಾರರಿಗೆ ತಿಳಿಸಿ ಮತ ನೀಡುವಂತೆ ಎಲ್ಲಾ ಕಾರ್ಯಕರ್ತರು ಶ್ರಮಿಸಬೇಕು ಎಂದು ಮಾಜಿ ಶಾಸಕ ಜಿ.ಹಂಪಯ್ಯನಾಯಕ ಹೇಳಿದರು.
ತಾಲೂಕಿನ ಬಲ್ಲಟಗಿ ಗ್ರಾಮದಲ್ಲಿ ಇಂದು ಬೆಳಗ್ಗೆ ಕರಡಿಗುಡ್ಡ ಹಾಗೂ ಸಂಗಾಪೂರು ಗ್ರಾಮದ ಗೋಪಾಲ ನಾಯಕ ನೇತೃತ್ಚದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಶಾಲು ಹಾಕಿ ಬರ ಮಾಡಿಕೊಂಡು ಮಾತನಾಡಿದ ಅವರು ಹಿಂದಿನ ಕಾಂಗ್ರೆಸ್ ಸರ್ಕಾರ ನೀಡಿದ ಭರವಸೆಯಲ್ಲಿ ೯೯ % ಈಡೆರಿಸಿದೆ, ನುಡಿದಂತೆ ನಡೆದ ಪಕ್ಷ ಕಾಂಗ್ರೇಸ್. ಆದರೆ ಬಿಜೆಪಿ ಸರ್ಕಾರ ಅಕ್ರಮವಾಗಿ ರಚನೆಯಾಗಿದೆ. ಲಂಚಾವತರ ತಾಂಡವ ಆಡುತ್ತಿದೆ. ನೇಮಕಾತಿಯಲೂ ಹಗರಣ ಮಾಡಿದೆ, ಪ್ರಸ್ತುತ ಶಾಸಕರು ಎಲ್ಲಾ ನಾನೆ ಮಾಡಿರುವೆ ಎಂದು ಹೇಳುತ್ತಿದ್ದಾರೆ.
ಹಿಂದೆ ನಮ್ಮ ಸರ್ಕಾರದಲ್ಲಿ ಮಂಜೂರು ಆಗಿರುವ ಯೋಜನೆಗಳು, ಕಾಮಗಾರಿಗಳು ಮಾಡಿದ್ದಾರೆ. ಹೊಸ ಕಾಮಗಾರಿ ಮಂಜೂರು ಮಾಡಿಸಿಲ. ೨ ದಶಕಗಳಿಂದ ಏನು ಅಭಿವೃದ್ದಿ ಮಾಡಿಲ ಎಂದು ಹೆಳುತ್ತಿದ್ದಾರೆ. ನಮ್ಮ ಅವಧಿಯಲ್ಲಿ ಏನು ಕಾಮಗಾರಿಯಾಗಿವೆ ಎಂದು ಹೇಳಬೇಕು. ಕ್ಷೇತ್ರದ ಪ್ರತಿಯೊಂದು ಜಾತ್ರೆ, ಸಾರ್ವಜನಿಕರ ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ತಪ್ಪದೆ ಭಾಗವಹಿಸುವ ಮೂಲಕ ನಿಮ್ಮೊಂದಿಗೆ ಸದಾ ಇರುವೆ. ಇದೊಂದು ಬಾರಿ ಆಶಿರ್ವಾದ ಮಾಡಿ ಎಂದರು.
ಚನ್ನಬಸಪ್ಪ ಗೌಡ ಬೆಟ್ಟದೂರು ಸೇರಿದಂತೆ ಇನ್ನಿತರರು ಇದ್ದರು.