
ಅರಕೇರಾ,ಏ.೧೩- ಕಾಂಗ್ರೆಸ್‌ನಿಂದ ಜನಪರ ಆಡಳಿತ ಸಾಧ್ಯ ಎಂಬ ವಿಷಯ ಅರಿವಿಗೆ ಬಂದ ಇತರ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿರುವುದು ಪಕ್ಷದ ಅಭ್ಯರ್ಥಿ ಗೆಲುವಿಗೆ ಪೂರಕ ವಾತಾವರಣ ಸೃಷ್ಟಿಸಿದೆ ಎಂದು ಎ.ರಾಜಶೇಖರ ನಾಯಕ ಹೇಳಿದರು.
ಅರಕೇರಾ ನಿವಾಸದಲ್ಲಿ ಬಿಜೆಪಿ ಜೆಡಿಎಸ್ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ಅವರು, ಕಾಂಗ್ರೆಸ್‌ನಿಂದ ಮಾತ್ರ ಸಾಮಾಜಿಕ ನ್ಯಾಯ ನೀಡಲು ಸಾಧ್ಯ ಎಂಬುದು ಮತದಾರರ ಅರಿವಿಗೆ ಬಂದಿದೆ. ಇದು ಇತರ ಪಕ್ಷದ ಕಾರ್ಯಕರ್ತರ ಗಮನಕ್ಕೂ ಬಂದಿದ್ದು, ಕಾಂಗ್ರೆಸ್ ನತ್ತ ಆಕರ್ಷಿತರಾಗುತ್ತಿದ್ದಾರೆ. ಪಕ್ಷದ ಗೆಲುವಿಗೆ ಇದು ಪೂರಕವಾಗಿದೆ ಎಂದರು.
ಕೃಷ್ಣಾನಾಯಕ ಇವರ ನೇತೃತ್ವದಲ್ಲಿ ತಿಪ್ಪಲದಿನ್ನಿ ಗ್ರಾಮಸ್ಥರಾದ ಗುಂಡಪ್ಪನಾಯಕ, ಬಸವರಾಜ ನಾಯಕ, ರಾಚಪ್ಪ ನಾಯಕ, ಬಾಬುಸಾಬ ಗುತ್ತಿಗೆದಾರರು, ಮುಸ್ತಫಾ, ರಮೇಶ್ ನಾಯಕ್, ಖಾಜಾಸಾಬಮಾಡಿಗೇರಾ, ಚನ್ನಬಸವ ಮಡಿವಾಳ, ಶಂಕ್ರಪ್ಪ ಮಡಿವಾಳ, ಬಾಬು ವಾಲಿ, ಮಹ್ಮದರಫೀ, ರಂಗಪ್ಪದಾಸಾರ, ಹುಚ್ಚಪ್ಪ,ಸಾಬ್ ಮೈಹಿಬೂಬಸೋನ್ನೀ, ಹಿಸೂಬೂ ಹೂಗಾರ, ರಾಮಪ್ಪ, ಶಿವರಾಜ ನಾಯಕ, ಹನುಮೇಗೌಡ ಅರಕೇರಾ, ಬಸವರಾಜಮಾಡಿಗೇರಿ ಸೇರಿದಂತೆ ಇತರರು ಸೇರ್ಪಡೆಯಾದರು.