ಬಿಜೆಪಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ

ದೇವದುರ್ಗ,ಮಾ.೦೨- ತಾಲೂಕಿನ ನಾರಾಯಣ ನಾಯಕ್ ತಾಂಡಾದ ನೂರಾರು ಕಾರ್ಯಕರ್ತರು ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ತೊರೆದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್ ನೇತೃತ್ವದಲ್ಲಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸೇರ್ಪಡೆಯಾದರು.
ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎ.ರಾಜಶೇಖರ ಮಾತನಾಡಿ, ದೇವದುರ್ಗ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಯಾರು ಏನೇ ಸುಳ್ಳು ಭರವಸೆ ನೀಡಿದರೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಮತದಾರರು ಹಾಗೂ ಕಾರ್ಯಕರ್ತರು ವಿರೋಧ ಪಕ್ಷ ಸುಳ್ಳು ಮಾತುಗಳಿಗೆ ಮರಳಾಗಬೇಡಿ. ೨೦೨೩ರಲ್ಲಿ ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾರ್ಯಕರ್ತರು ವಿಚಲಿತರಾಗದೆ ಪಕ್ಷ ಸಂಘಟನೆ ಮಾಡಲು ಮುಂದಾಗಬೇಕು.
ಮಾಸಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಕಾರ್ಯಕರ್ತರು ಎದೆಗುಂದದೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿ ಕಾಂಗ್ರೆಸ್ ಗೆಲ್ಲಿಸಲು ಮುಂದಾಗಬೇಕು. ಹಿಂದಿನ ಯುಪಿಎ ಹಾಗೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿವಿಧ ಜನಪರ ಯೋಜನೆಗಳ ಕುರಿತು ಜನರ ಮನೆಬಾಗಲಿಗೆ ಮುಟ್ಟಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ನಾರಾಯಣ ನಾಯ್ಕ್ ತಾಂಡಾದ ದೇವೇಂದ್ರಪ್ಪ ರಾಠೋಡ್, ಶಿವಪ್ಪ ರಾಠೋಡ್, ಗಂಗಪ್ಪ ರಾಠೋಡ್, ಭೀಮಣ್ಣ ಚವ್ಹಾಣ್, ಮಲ್ಲೆಶ, ಸೋಮಲಪ್ಪ, ಲಕ್ಷ್ಮಣ, ಸುನೀಲ್, ಪರಶುರಾಮ, ಮೌನೇಶ, ಧರ್ಮಣ್ಣ, ಪರಮಣ್ಣ ಹೂಗಾರ ಬಿಜೆಪಿ ಹಾಗೂ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಅಜೀಜ್, ಶಿವಕುಮಾರ ಮಾಲಿ ಪಾಟೀಲ್, ಸುಲ್ತಾನ್ ಬಾಬು ಕೊಪ್ಪರ, ಲಿಂಗಣ್ಣ ಹವಾಲ್ದಾರ್ ಇತರರಿದ್ದರು.

೦೨-ಡಿವಿಡಿ-೨