ಬಿಜೆಪಿ-ಜೆಡಿಎಸ್‌ನಿಂದ ವಿಜಯೋತ್ಸವ

ಕೋಲಾರ,ಜೂ,೧೦- ನರೇಂದ್ರ ಮೋದಿಯವರು ಮೂರನೇ ಬಾರಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಬಂಗಾರಪೇಟೆ ಕುವೆಂಪು ವೃತ್ತದಲ್ಲಿ ಬಿಜೆಪಿ ಮತ್ತು ಜೆ.ಡಿ.ಎಸ್. ಕಾರ್ಯಕರ್ತರು ಜಂಟಿಯಾಗಿ ಸಂಘಟಿತರಾಗಿ ಪಟಾಕಿಗಳನ್ನು ಸಿಡಿಸಿ ಜಯಕಾರದ ಘೋಷಣೆಗಳೊಂದಿಗೆ ಸಿಹಿ ಹಂಚಿ ವಿಜಯೋತ್ಸವನ್ನು ಆಚರಿಸುವ ಮೂಲಕ ಸಂಭ್ರಮಿಸಿದರು.
ಭಾರತದ ಪ್ರಧಾನ ಮಂತ್ರಿಯಾಗಿ ಹ್ಯಾಟ್ರಿಕ್ ಸಾಧನೆ ಮಾಡಿದ ಬಿಜೆಪಿ ಪಕ್ಷ ಎನ.ಡಿ.ಎ. ಮೈತ್ರಿ ಕೊಟದ ಅಭ್ಯರ್ಥಿಯಾಗಿ ನರೇಂದ್ರ ಮೋದಿಯವರು ಭಾನುವಾರ ಸಂಜೆ ಪ್ರಮಾಣ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಹಾಗೂ ಜೆ.ಡಿ.ಎಸ್. ಕಾರ್ಯಕರ್ತರು ಮುಖಂಡರು ಜಂಟಿಯಾಗಿ ಸಂಘಟಿತರಾಗಿ ವಿಜಯೋತ್ಸವ ಆಚರಿಸಿದರು,
ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ನಗರಸಭೆ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ ಬಿಜೆಪಿ ಮತ್ತು ಜೆ.ಡಿ.ಎಸ್. ಪಕ್ಷವು ಎರಡು ಮೈತ್ರಿಯಾದಲ್ಲಿ ಮುಂದಿನ ದಿನಗಳಲ್ಲಿ ಯಾವೂದೇ ಚುನಾವಣೆಗಳಲ್ಲಿ ಎದುರಾಳಿಗಳಿಗೆ ಠೇವಣಿ ಸಿಗುವುದಿಲ್ಲ ಎಂಬುವುದನ್ನು ಲೋಕಸಭೆ ಚುನಾವಣೆಯಲ್ಲಿ ಸಾಭೀತಾಗಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಬಿ.ವಿ.ಮಹೇಶ್ ಮಾತನಾಡಿ ಕ್ಷೇತ್ರದಲ್ಲಿ ಎರಡು ಪಕ್ಷಗಳು ಒಂದಾಗಿ ಲೋಕ ಸಮರವನ್ನು ಎದುರಿಸಿದ ಹಿನ್ನಲೆಯಲ್ಲಿ ಕೋಲಾರ ಲೋಕ ಸಭಾ ಮೀಸಲು ಕ್ಷೇತ್ರದಲ್ಲಿ ಎನ್.ಡಿ.ಎ. ಅಭ್ಯರ್ಥಿಯಾದ ಮಲ್ಲೇಶ್ ಬಾಬು ಅವರು ಸುಮಾರು ೮೧ ಸಾವಿರ ಅಧಿಕ ಮತಗಳ ಅಂತರದಲ್ಲಿ ತಮ್ಮ ಎದುರಾಳಿ ಕಾಂಗ್ರೇಸ್ ಅಭ್ಯರ್ಥಿಯನ್ನು ಸೋಲಿಸಲು ಸಾಧ್ಯವಾಯಿತು ಎಂದರು.
ಎನ್.ಡಿ.ಎ. ಮೈತ್ರಿಯು ಮುಂಬರಲಿರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಮುಂದುವರೆಸುತ್ತೇವೆ, ಇದು ಮುಂದಿನ ಪಂಚಾಯತ್ ಚುನಾವಣೆಗಳ ದಿಕ್ಸೂಚಿಯಾಗಿದೆ ಎಂದು ಕಾಂಗ್ರೇಸ್ ಪಕ್ಷಕ್ಕೆ ಎಚ್ಚರಿಕೆಯ ಗಂಟೆಯಾಗಿದ್ದು ಮುಂದೆ ಕೋಲಾರ ಜಿಲ್ಲೆಯು ಕಾಂಗ್ರೇಸ್ ಮುಕ್ತವಾಗುವ ಸಂಕೇತವಾಗಿದೆ ಎಂಬುವುದರಲ್ಲಿ ಯಾವೂದೇ ಸಂಶಯವಿಲ್ಲ ಎಂದು ಅಭಿಪ್ರಾಯ ಪಟ್ಟರು,
ವಿಜಯೋತ್ಸವದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಬಿ.ಪಿ.ಮುನಿವೆಂಕಟಪ್ಪ, ನಿವೃತ್ತ ಡಿ.ವೈ.ಎಸ್.ಪಿ. ಶಿವಕುಮಾರ್. ಡಾ.ಪಲ್ಲವಿ ಮಣಿ ಬಿಜೆಪಿ ಮಂಡಲ ಅಧ್ಯಕ್ಷ ಸಂಪಂಗಿರೆಡ್ಡಿ, ಜೆ.ಡಿ.ಎಸ್. ತಾಲ್ಲೂಕು ಅಧ್ಯಕ್ಷ ಮುನಿರಾಜು, ಮುಖಂಡರಾದ ಮಾರ್ಕೆಂಡಪ್ಪ, ಎ.ಹನುಮಪ್ಪ, ನಾಗೇಶ್, ಹುಣಸನಹಳ್ಳಿ ಶ್ರೀನಿವಾಸ್, ದೇಶಿಹಳ್ಲಿ ರಾಮಚಂದ್ರಪ್ಪ, ಮುಂತಾದವರು ಇದ್ದರು,