ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ
ದಮ್ಮೂರು ಶೇಖರ್ ನೇಮಕ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.15: ಭಾರತೀಯ ಜನತಾ ಪಕ್ಷದ ಜಿಲ್ಲಾ ಘಟಕಕ್ಕೆ ಉಪಾಧ್ಯಕ್ಷರನ್ನಾಗಿ ಬುಡಾ ಮಾಜಿ ಅಧ್ಯಕ್ಷ ದಮ್ಮೂರು ಶೇಖರ್ ಅವರನ್ನು  ಪಕ್ಷದ ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ ನೇಮಕ ಮಾಡಿದ್ದಾರೆ.
ಈ ಹಿಂದೆ ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿ, ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೋರಿದ ಶ್ರದ್ದೆಯನ್ನು ಪರಿಗಣಿಸಿ. ಈಗ ಜಿಲ್ಲೆಯ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಗಿದೆ.
ನೇಮಕದ ಆದೇಶದಲ್ಲಿ ನಿಮಗೆ ನೀಡಿರುವ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ನಿರ್ವಹಿಸುತ್ತ. ಪಕ್ಷದ ತಳಮಟ್ಟದಲ್ಲಿ ಸದೃಡಗೊಳಿಸುತ್ತ. ಪ್ರಾಮಾಣಿಕತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪಕ್ಷವು ಸೂಚಿಸಿದ ಆದೇಶಗಳನ್ನು ಪಾಲಿಸುತ್ತ. ಮುಂಬರುವ ಎಲ್ಲಾ ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತ. ಪಕ್ಷದ ವರ್ಚಸ್ಸನ್ನು ವೃದ್ದಿಸಲು ಸತತ ಪರಿಶ್ರಮಪಡುವಿರೆಂದು ಆಶಿಸಿದ್ದಾರೆ.

Attachments area