ಬಿಜೆಪಿ ಜಯಭೇರಿಗೆ ಪಕ್ಷದ ಶಿಸ್ತು, ತತ್ವಸಿದ್ಧಾಂತಗಳೇ ಕಾರಣ

ಲಿಂಗಸುಗೂರು.ನ.೧೨- ರಾಜ್ಯದ ಉಪಚುನಾವಣೆಯಲ್ಲಿ ಹಾಗೂ ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಯಭೇರಿ ಬಾರಿಸಿದೆ. ಇದಕ್ಕೆ ಪಕ್ಷದಲ್ಲಿನ ಕಾರ್ಯಕರ್ತರ ಶಿಸ್ತು ಹಾಗೂ ತತ್ವ ಸಿದ್ಧಾಂತಗಳೇ ಕಾರಣ ಎಂದು ಸಂಸದ ರಾಜಾ ಅಮರೇಶ ನಾಯಕ ಅಭಿಪ್ರಾಯ ಪಟ್ಟರು.
ಪಟ್ಟಣದ ಈಶ್ವರ ಗುಡಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತೀಯ ಜನತಾಪಾರ್ಟಿ ದೇಶ ವ್ಯಾಪಿ ಬೇರು ಮಟ್ಟದಲ್ಲಿ ಬೆಳೆಯಲು ಶಿಸ್ತು ತತ್ವ ಸಿದ್ದಾಂತ ಹಾಗೂ ದೇಶ ಪ್ರೇಮ ಪಕ್ಷ ನಡೆದು ಬಂದ ದಾರಿ, ಪಕ್ಷದ ಬಲವರ್ಧನೆಗೆ ಶ್ರಮಿಸಿದ ಮಹನೀಯರ ಸ್ಮರಣೆ, ಅವರ ಆದರ್ಶ ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ರಾಜ್ಯದ ಆರ್.ಆರ್.ನಗರ, ಶಿರಾ ಉಪಚುನಾವಣೆ, ವಿಧಾನ ಪರಿಷತ್ ಮತ್ತು ಬಿಹಾರ, ಮಧ್ಯಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಸಿಎಂ ಬಿ.ಎಸ್.ಯಡಿಯೂರಪ್ಪ, ನಳಿನ್ ಕುಮಾರ ಕಟಿಲ್ ಸೇರಿದಂತೆ ಅನೇಕ ನಾಯಕರ ಮತ್ತು ಕಾರ್ಯಕರ್ತ ಶ್ರಮದಿಂದ ಸಾಧ್ಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ ಯಾದವ್, ತಾಲೂಕು ಮಂಡಲ ಅಧ್ಯಕ್ಷ ವೀರನಗೌಡ ಲೆಕ್ಕಿಹಾಳ, ಮುಖಂಡರಾದ ನಾಗಪ್ಪ ವಜ್ಜಲ್, ಗಿರಿಮಲ್ಲನಗೌಡ ಪಾಟೀಲ್, ಶಿವಬಸಪ್ಪ ಮಾಲಿಪಾಟೀಲ್, ಜಗನ್ನಾಥ ಕುಲಕರ್ಣಿ, ಗೋವಿಂದ ನಾಯಕ, ಅನಂತದಾಸ್ ಸೇರಿದಂತೆ ಇತರರು ಇದ್ದರು.