ಬಿಜೆಪಿ ಜನವಿರೋಧಿ ನೀತಿ ಖಂಡಿಸಿ ಕಾಂಗ್ರೇಸ್ ಪ್ರತಿಭಟನೆ

ಧಾರವಾಡ ನ 1 : ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ದಿವಂಗತ ಪ್ರಧಾನಿ ಇಂದಿರಾಗಾಂಧಿಯವರ 36 ನೇ ಪುಣ್ಯತಿಥಿಯನ್ನು ದೇಶದ ಪ್ರಥಮ ಗೃಹಮಂತ್ರಿ ಸರ್ದಾರ್ ವಲ್ಲಭಭಾಯಿ ಪಟೇಲರ 145 ನೇ ಜಯಂತಿಯನ್ನು ಆಚರಿಸಲಾಯಿತು. ನಂತರ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ಜನವಿರೋಧಿ ಆಡಳಿತ ನೀತಿ ಖಂಡಿಸಿ ಕಿಸಾನ್ ಅಧಿಕಾರ ದಿವಸ ಎಂಬ ಹೆಸರಿನಲ್ಲಿ ಧಾರವಾಡದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ಥಳಿಯ ಮುಂದೆ ಸಾಂಕೇತಿಕ ಧರಣಿಯನ್ನು ಹಮ್ಮಿಕೊಳ್ಳಲಾಯಿತು.
ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ ಅವರ ನೇತೃತ್ವದಲ್ಲಿ ಜನವಿರೋಧಿ ನೀತಿಗಳನ್ನು ವಿರೋಧಿಸಲಾಯಿತು.
ಕೇಂದ್ರ ಪ್ರಜಾಪ್ರಭುತ್ವದ ಮೌಲ್ಯಗಳನ್ನು ತುಳಿಯುತ್ತಿದೆ.
ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿಯುತ್ತಿದೆ. ಕೊರೊನಾ ಹಗರಣಕ್ಕೆ ಸಂಬಂಧಿಸಿದಂತೆ ಅವರು ಕಟುವಾಗಿ ಖಂಡಿಸಿದರು.
ಗಾಂಧಿಜೀಯವರನ್ನು ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆಯವರು ಆರ್.ಎಸ್.ಎಸ್ ವರಾಗಿದ್ದು, ಅಂದು ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಆರ್.ಎಸ್.ಎಸ್ ನ್ನು ಬ್ಯಾನ್ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಇಂದು ಗುಜರಾತ್ ನಲ್ಲಿ ಲಕ್ಷಾಂತರ ರೂ. ಗಳನ್ನು ಖರ್ಚು ಮಾಡಿ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದಾರೆ. ಇದು ಕೇವಲ ಬಿಜೆಪಿಗರ ದೇಶಭಕ್ತಿಯಲ್ಲ ರಾಜಕೀಯ ದುರುದ್ದೇಶ ಎಂದು ಅವರು ರಾಬರ್ಟ್ ದದ್ದಾಪುರಿ ಕಿಡಿ ಕಾರಿದರು. ಪಟೇಲರ ಸಮುದಾಯದ ಮತಗಳನ್ನು ಸಳೆಯುವ ರಣತಂತ್ರ ಹುನ್ನಾರ ಎಂದು ಅವರು ಆರೋಪಿಸಿದರು.
ಅಲ್ಲದೇ ಧಾರವಾಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಮಲಕಾರಿ ಮಾತನಾಡಿ ರಾಜ್ಯದಲ್ಲಿ ಸರಿಯಾಗಿ ಆಡಳಿತ ನಿರ್ವಹಿಸಲು ವಿಫಲರಾದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ಬಗ್ಗೆ ಖಂಡಿಸಿದರು.
ಈ ಸಂದರ್ಭದಲ್ಲಿ ಆನಂದ ಜಾಧವ, ಪ್ರಕಾಶ ಘಾಟಗೆ, ಆನಂದ ಮುಶಣ್ಣವರ, ಸುಭಾಷ್ ಶಿಂಧೆ, ಮುಸ್ತಾಕ್ ಪಟೇಲ್, ಮಂಜುನಾಥ ಭೋವಿ, ಮೆಹಬೂಬ್ ಪಠಾಣ, ಗ್ರೇಗರಿ ಜೆವಯರ್, ಆನಂದ ಸಿಂಗನಾಥ, ಗೌರಿ ನಾಡಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.