ಬಿಜೆಪಿ ಚುನಾವಣಾ ಸಮಿತಿಗೆ ಜಲಾದೆ ನೇಮಕ

ಬೀದರ್:ಎ.7: ಬೀದರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕರಾಗಿ ಮುಖಂಡ ರೇವಣಸಿದ್ದಪ್ಪ ಜಲಾದೆ ಅವರನ್ನು ನೇಮಕ ಮಾಡಲಾಗಿದೆ.
ಬಿಜೆಪಿ ಜಿಲ್ಲಾ ಚುನಾವಣಾ ನಿರ್ವಹಣಾ ಸಮಿತಿಯ ಸಂಚಾಲಕ ಶಿವರಾಜ ಗಂದಗೆ ಈ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಚುನಾವಣಾ ಸಮಿತಿಯು ಮಾಧ್ಯಮ, ಪ್ರಚಾರ ಸಾಮಗ್ರಿ, ಕಚೇರಿ ನಿರ್ವಹಣೆ ಸೇರಿ 11 ವಿಭಾಗಗಳನ್ನು ಒಳಗೊಂಡಿದೆ. ಚುನಾವಣಾ ಅನುಭವ ಪರಿಗಣಿಸಿ ರೇವಣಸಿದ್ದಪ್ಪ ಜಲಾದೆ ಅವರಿಗೆ ಬೀದರ್ ವಿಧಾನಸಭಾ ಕ್ಷೇತ್ರದ ಹೊಣೆ ಕೊಡಲಾಗಿದೆ.