(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.31: ಬಿಜೆಪಿ ಅಭ್ಯರ್ಥಿ ಆಯ್ಕೆಗೆ ‘ಚೀಟಿ’ ಮೂಲಕ ಅಭಿಪ್ರಾಯ ಸಂಗ್ರಹ ಕಾರ್ಯ ಇಂದು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆಯಿತು.
ಸಂಡೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆಗೆ. ಬಿಜೆಪಿ ರಾಜಾಧ್ಯಕ್ಷ ನಳೀನಕುಮಾರ್ ಕಟೀಲ್. ಲೇಹರ್ ಸಿಂಗ್. ಎಂಎಲ್ ಸಿ ಹೇಮಲತಾ ನಾಯ್ಕ್ ರಿಂದ ಚೀಟಿ ಮೂಲಕ ಅಭಿಪ್ರಾಯ ಸಂಗ್ರಹಿಸಿದರು.
ಶಕ್ತಿ ಕೇಂದ್ರದ ಪ್ರಮುಖರು. ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು. ಪ್ರಧಾನ ಕಾರ್ಯದರ್ಶಿಗಳು, ಮಂಡಲ ಕೋರ್ ಸಮಿತಿ ಸದಸ್ಯರು. ಮಂಡಲ ಪದಾಧಿಕಾರಿಗಳು,ಮಂಡಲ ಮೋರ್ಚಾ ಅಧ್ಯಕ್ಷರು, ಪುರಸಭೆ ಪಟ್ಟಣ ಪಂಚಾಯತಿ ಸದಸ್ಯರಿಂದ ಅಭಿಪ್ರಾಯ ಸಂಗ್ರಹ ಮಾಡಿದರು.
ಸಂಡೂರು ಕ್ಷೇತ್ರದ ಟಿಕೆಟ್ ಆಕ್ಷಾಂಕಿಗಳ ಪರವಾಗಿ ಪಕ್ಷದ ಪ್ರಮುಖರಿಂದ ಅಭಿಪ್ರಾಯ ಸಂಗ್ರಹ. ಟಿಕೇಟ್ ಆಕ್ಷಾಂಕಿಗಳ ಪರವಾಗಿ ಚೀಟಿ ಮೂಲಕ ಅಭಿಪ್ರಾಯ ಪ್ರಮುಖರು ತಿಳಿಸಿದರು.
ಸಚಿವ ಬಿ ಶ್ರೀರಾಮುಲು. ಸಂಸದ ವೈ. ದೇವೇಂದ್ರಪ್ಪ ಪುತ್ರ ವೈ. ಡಿ ಅಣ್ಣಪ್ಪ. ಪರಾಜಿತ ಅಭ್ಯರ್ಥಿ ದಿವಂಗತ ರಾಘವೇಂದ್ರ ಪತ್ನಿ ಶಿಲ್ಪಾ. ಬಿಜೆಪಿ ಮುಖಂಡ
ಕೆ.ಎಸ್ ದಿವಾಕರ ಪರವಾಗಿ ಅಭಿಪ್ರಾಯವನ್ನು ಮುಖಂಡರು ತಿಳಿಸಿದರು.