ಬಿಜೆಪಿ ಗೆಲ್ಲಿಸಿ ಅಭಿವೃದ್ಧಿ ನಿರೀಕ್ಷಸಿ ಶಂಕರಬಂಡೆಯಲ್ಲಿ ವಿಜಯೇಂದ್ರ ಪ್ರಚಾರ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ತಾಲೂಕಿನ ಶಂಕರ ಬಂಡೆ ಗ್ರಾಮದಲ್ಲಿ ನಿನ್ನೆ ಬಿಜೆಪಿ ಪಕ್ಷದ ಉಪಾಧಗಯಕ್ಷ ಬಿ.ಎಸ್.ವಿಜಯೇಂದ್ರ ಅವರು ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಶ್ರೀರಾಮುಲು ಅವರ ಪರವಾಗಿ ರೋಡ್ ಶೋ ನಡೆಸಿ ಪ್ರಚಾರ ನಡೆಸಿದರು.
ಗ್ರಾಮಕ್ಕೆ ಬಂದ ಅವರು ಮತ್ತು ಶ್ರೀರಾಮುಲು ಅವರನ್ನು ಬೃಹತ್ ಹೂ ಮಾಲೆ ಮೂಲಕ ಸ್ವಾಗತಿಸಿ ಪುಷ್ಪ ಅರ್ಪಣೆ, ಪಟಾಕಿ ಸಿಡಿಸುವ  ಮೂಲಕ ಮೆರವಣಿಗೆ ನಡೆಸಲಾಯ್ತು.
ಮುಖಂಡರುಳಾದ ಜೆ.ಶಾಂತ, ಎಸ್.ಗುರುಲಿಂಗನಗೌಡ, ಗ್ರಾಮೀಣ ಮಂಡಲ ಅಧ್ಯಕ್ಷ ಹಲಕುಂದಿಯ ಹೆಚ್.ಆರ್.ಮಲ್ಲಿಕಾರ್ಜುನಗೌಡ , ಎಪಿಎಂಸಿ ಅಧ್ಯಕ್ಷ ಬಸಲಿಂಗನಗೌಡ ಮೊದಲಾದವರು ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ ಅವರು ದೇಶದ ಸುಭದ್ರತೆ, ರಾಜ್ಯದ ಅಭಿವೃದ್ಧಿಯನ್ನು ಗಮನದಲ್ಲಿರಿಸಿಕೊಂಡು ಡಬಲ್ ಇಂಜಿನ್ ಸರ್ಕಾರಕ್ಕಾಗಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲಿಸಲು ಮನವಿ ಮಾಡಿದರು.
ಕಾಂಗ್ರೆಸ್ ನ ಸುಳ್ಳು ಗ್ಯಾರೆಂಟಿಗಳಿಗೆ ಮರುಳಾಗಬೇಡಿ. ಅವರೇ ಅಧಿಕಾರ ಹೊಂದಿರುವ ರಾಜ್ಯಗಳಲ್ಳ ಈ ರೀತಿ ಗ್ಯಾರೆಂಟಿ ಕೊಟ್ಟಿದ್ದನ್ನು ಈಡೇರಿಸದೆ ಜನರಿಗೆ ವಂಚನೆ ಮಾಡಿದ್ದಾರೆ ಈ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಪಕ್ಷದಲ್ಲಿ ಹಿರಿಯರಾಗಿ ಮತ್ತು ಅನುಭವ ಹೊಂದಿರುವ ಶ್ರೀರಾಮುಲು ಅವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.
ಕಮ್ಮರಚೇಡು ಮತ್ತಿತರ ಗ್ರಾಮಗಳಿಗೆ ತೆರಳ ಬೇಕಿತ್ತು ಆದರೆ ಸಮಯ ವಿಳಂಬ ಆಗಿದ್ದರಿಂದ ಈ ಒಂದು ಗ್ರಾಮದಲ್ಲಿ ಮಾತ್ರ ರೋಡ್ ಶೋ ನಡೆಸಿ ಹಡಗಲಿ ಕಡೆ ತೆರಳಿದರು.