ಬಿಜೆಪಿ ಗೆಲ್ಲಿಸಲು ತ್ರಿಮೂರ್ತಿಗಳ ಪಣ

ಬೆಂಗಳೂರು, ಮಾ. ೮- ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು ಶತಾಯಗತಾಯ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಒಕ್ಕೂರಲಿನಿಂದ ಪಣತೊಟ್ಟಿ ನಿಂತಿದ್ದಾರೆ.
ಈ ಹಿಂದೆ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಎ.ರವಿ,ತಮ್ಮೇಶ್ ಗೌಡ,ಮುನೀಂದ್ರಕುಮಾರ್ ಪ್ರಬಲ ಆಕಾಂಕ್ಷಿಗಳಾಗಿ ಪಕ್ಷಸಂಘಟನೆಯಲ್ಲಿ ತೊಡಗಿದ್ದರು. ಈ ಕ್ಷೇತ್ರದಲ್ಲಿ ಮನೆಯೊಂದು ಮೂರು ಬಾಗಿಲು ಎಂಬ ಕಥೆಯಾಗಿತ್ತು. ಯಾವೆಲ್ಲ ಹಿರಿಯ ನಾಯಕರು ಮೂವರನ್ನು ಒಗ್ಗೂಡಿಸಲು ಪ್ರಯತ್ನಿಸಿ ವಿಫಲರಾಗಿದ್ದರು. ಆದರೆ, ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಸಭೆನಡೆಸಿ ತ್ರಿಮೂರ್ತಿಗಳ ಸಂಗಮ ಮಾಡಿಸಿ, ಒಗ್ಗೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ, ನಾಳೆ ಬ್ಯಾಟರಾಯನಪುರ ಕ್ಷೇತ್ರಕ್ಕ ವಿಜಯ ಸಂಕಲ್ಪ ಯಾತ್ರೆ ತಲುಪುತ್ತಿದ್ದು, ಈ ಸಂಬಂಧ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶನ ಮಾಡಿದರು.
ಈ ವೇಳೆ ಲೋಕಸಭಾ ಸದಸ್ಯ,ಮಾಜಿ ಮುಖ್ಯಮಂತ್ರಿ ಸದಾನಂದಗೌಡ ಮಾತನಾಡಿ, ಬ್ಯಾಟರಾಯನಪುರದಲ್ಲಿ ಆಕಾಂಕ್ಷಿಗಳೆಲ್ಲರೂ ತಮ್ಮದೇ ದಾಟಿಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಆದರೆ, ಪಕ್ಷದ ವರಿಷ್ಠರ ತೀರ್ಮಾನವೆ ಅಂತಿಮ. ಈಗಾಗಲೇ ಎರಡು ಹಂತದ ಸರ್ವೆ ಕಾರ್ಯ ಮುಗಿದ್ದು, ಆ ಪಟ್ಟಿಯಲ್ಲಿರುವವರಿಗೆ ಟಿಕೆಟ್ ನೀಡಲಾಗುವುದು ಎಂದರು.
ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಇಲ್ಲಿ ೪ ಜನರು ಆಕಾಂಕ್ಷಿಗಳು ಇದ್ದಾರೆ. ಎಲ್ಲರೂ ಕೂಡಾ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಎಲ್ಲರೂ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಇವರ ಸಂಗಮವಾಗದೇ ಗೆಲುವು ಸುಗಮವಾಗುತ್ತದೆ. ಗೆಲ್ಲುವ ಕ್ಷೇತ್ರ ಕಳೆದುಕೊಳ್ಳಬಾರದು,ಕಾರ್ಯಕರ್ತರ ಶ್ರಮ ವ್ಯರ್ಥವಾಗಬಾರದೆಂಬ ನಿಟ್ಟಿನಲ್ಲಿ ಎಲ್ಲರನ್ನು ಒಂದೆಡೆ ಸೇರಿಸಲಾಗಿದೆ. ಈ ಬಾರಿ ಬ್ಯಾಟರಾಯನಪುರದಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಖಚಿತ ಎಂದು ಭವಿಷ್ಯ ನುಡಿದರು.
ಈ ವೇಳೆ ಟಿಕೇಟ್ ಆಕಾಂಕ್ಷಿಗಳೆಲ್ಲರೂ ಒಕ್ಕೂರಲಿನಿಂದ ಬ್ಯಾಟರಾಯನಪುರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಹೇಳಿದರು. ಅಂದಹಾಗೆ ನಾಳೆ ಮಧ್ಯಾನ್ಹ ೩ಗಂಟೆಗೆ ಬಿಜೆಪಿ ವಿಜಯರಥ ಬ್ಯಾಟರಾಯನಪುರಕ್ಕೆ ತಲುಪಲಿದೆ.