ಬಿಜೆಪಿ ಗೆಲುವು ವಿಜಯೋತ್ಸವ

ಇಂಡಿ :ನ.3: ಸಿಂದಗಿ ಮತಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಬರ್ಜರಿ ಗೆಲುವು ಸಾ„ಸಿದಕ್ಕೆ ಇಲ್ಲಿನ ಬಿಜೆಪಿ ಮುಖಂಡರು,ಕಾರ್ಯಕರ್ತರು ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ,ಗುಲಾಲು ಎರಚಿ ಸಂಭ್ರಮಿಸಿ ವಿಜಯೋತ್ಸವ ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಮುಖಂಡರಾದ ಅನೀಲ ಜಮಾದಾರ, ದೇವೆಂದ್ರ ಕುಂಬಾರ,ಸಿಂದಗಿ ಉಪ ಚುನಾವಣೆಯಲ್ಲಿ ಮತಗಳ ಹೊಳೆಯನ್ನೇ ಹರಿಸಿ ಬಿಜೆಪಿಗೆ ಗೆಲುವು ತಂದುಕೊಟ್ಟ ಸಿಂದಗಿ ಮತಕ್ಷೇತ್ರದ ಮತದಾರರಿಗೆ ಪಕ್ಷದ ವತಿಯಿಂದ ಅಭಿನಂದನೆಗಳು.ರಾಜ್ಯ,ದೇಶದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರಗಳು ಜನಪರ ಆಡಳಿತ ನಡೆಸುತ್ತಿರುವುದರಿಂದ ಇಂದು ಮತದಾರರು ನಮ್ಮ ಪರವಾಗಿ ಮತಗಳನ್ನು ನೀಡಿ ಬೆಂಬಲಿಸಿದ್ದಾರೆ.ರಾಜ್ಯದಲ್ಲಿ ಆಡಳಿತ ಮಾಡಿದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಇಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಯೋಜನೆಗಳು ,ರಮೇಶ ಭೂಸನೂರ ಅವರು ಕಳೆದ ಎರಡು ಅವ„ಯಲ್ಲಿ ಮತಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ದಿಪರ ಯೋಜನೆಗಳು ಮನೆ ಮಾತಾಗಿರುವುದರಿಂದ ಸಿಂದಗಿಯಲ್ಲಿ ಬಿಜೆಪಿ ಗೆಲುವು ಸಾ„ಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್,ಜೆಡಿಎಸ್ ಪಕ್ಷದವರು ಎಷ್ಟೆ ವಿರೋಧ ಹೇಳಿಕೆಗಳನ್ನು ನೀಡಿದರು ಸಹ ಪ್ರಜ್ಞಾವಂತ ಮತದಾರರು ಎಲ್ಲವನ್ನು ತೂಗಿ,ಅಳೆದು ಬಿಜೆಪಿ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು ಸಾ„ಸಿ ಸ್ಪಷ್ಟ ಬಹುಮತ ಸಾ„ಸಿ ಅ„ಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಎಸ್ಸಿ ಮೊರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಂದಗಲ್ಲ, ಪ್ರವೀಣ ಮಠ, ಮಲ್ಲು ವಾಲಿಕಾರ, ರವಿ ವಗ್ಗೆ, ಅನೀಲಗೌಡ ಬಿರಾದಾರ, ಯಲ್ಲಪ್ಪ ಹದರಿ,ವಿಜು ಮೂರಮನ, ಜಯರಾಮ ರಾಠೋಡ,ಅಶೋಕ ಅಕಲಾದಿ,ಅಮೋಘಸಿದ್ದ ಕಂಬಾರ, ಪ್ರಶಾಂತ ಗವಳಿ,ಬತ್ತುಸಾಹುಕಾರ ಹವಳಗಿ,ಧರ್ಮರಾಜ ಮದರಖಂಡಿ ಮೊದಲಾದವರು ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು.