ಕಲಬುರಗಿ,ಏ 24: ನಗರದ ಸಂಗಮ್ ಕಾಂಪ್ಲೆಕ್ಸ್ ನಲ್ಲಿನ ಬಿಜೆಪಿ ಕಾಲ್‍ಸೆಂಟರ್ ಮೇಲೆ ಚುನಾವಣಾಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ.
ಪರವಾನಗಿ ಇಲ್ಲದೇ ಕಾಲ ಸೆಂಟರ್ ನಡೆಸಲಾಗುತ್ತಿದೆ. ಉತ್ತರ ಮತ ಕ್ಷೇತ್ರದ ಮತದಾರರಿಗೆ ಮತಯಾಚನೆ ಮಾಡುವಂತೆ ಅಕ್ರಮಮಾರ್ಗ ಅನುಸರಿಸಲಾಗುತ್ತಿದೆ ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಯು ಅಭ್ಯರ್ಥಿ ಶರಣು ಐಟಿ ಎಂಬುವವರು ಸಿವಿಸಿಲ್ ನಲ್ಲಿ ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆದಿದ್ದು,ದಾಳಿ ಮಾಡಿದ ಸಂದರ್ಭದಲ್ಲಿ ಯಾವುದೇ ಉದ್ಯೋಗಿಗಳು ಇರಲಿಲ್ಲ.ಕಾಲ್ ಸೆಂಟರ್ ನಲ್ಲಿ 70 ಕ್ಕೂ ಅಧಿಕ ಉದ್ಯೋಗಿಗಳು ಕಾರ್ಯ ನಿರ್ವಹಣೆ ಮಾಡುತ್ತಿದ್ದು,ಇಲ್ಲಿ 40 ಕ್ಕೂ ಅಧಿಕ ಕಂಪ್ಯೂಟರ್‍ಗಳು ಪತ್ತೆಯಾಗಿವೆ.
ಚೌಕ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು,ಈ ಕುರಿತು ಇನ್ನೂ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ.ತನಿಖೆ ನಡೆಯುತ್ತಿದೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.ಅಕ್ರಮದ ವಿರುದ್ಧ ತನಿಖೆ ನಡೆಸಲು ಶರಣು ಐಟಿ ಆಗ್ರಹಿಸಿದ್ದಾರೆ.