ಬಿಜೆಪಿ ಕಾರ್ಯಾಲಯ : ಕೆಕೆ ವಿಮೋಚನಾ – ಮೋದಿ ಹುಟ್ಟು ಹಬ್ಬ ಆಚರಣೆ

ರಾಯಚೂರು.ಸೆ.೧೭- ಬಿಜೆಪಿ ನಗರ ಕಾರ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಅಂಗವಾಗಿ ನಗರ ಅಧ್ಯಕ್ಷರಾದ ಬಿ.ಗೋವಿಂದ ಅವರು ಧ್ವಜಾರೋಹಣ ನೆರವೇರಿಸಿದರು ಹಾಗೂ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ರವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಕ್ಷದ ಹಿರಿಯರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪ ಅವರು ಕಲ್ಯಾಣ ಕರ್ನಾಟಕ ವಿಮೋಚನ ಬಗ್ಗೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶವನ್ನು ಒಗ್ಗೂಡಿಸಲು ಹಲವಾರು ರಾಜರೊಡನೆ ಸಂಧಾನ ಮಾಡುವುದಲ್ಲದೆ, ನಮ್ಮ ಭಾಗವನ್ನು ನಿಜಾಮರಿಂದ ಬಿಡುಗಡೆ ಮಾಡಿದ ಪ್ರಮುಖ ಕಾರ್ಯದ ಬಗ್ಗೆ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಆರ್‌ಡಿಎ ಮಾಜಿ ಅಧ್ಯಕ್ಷರುಗಳಾದ ರಾಜಕುಮಾರ, ವೈ.ಗೋಪಾಲ್ ರೆಡ್ಡಿ, ಕಡಗೋಲ ಆಂಜಿನಯ್ಯ, ರವೀಂದ್ರ ಜಲ್ದಾರ, ಎನ್. ಶ್ರೀನಿವಾಸ್ ರೆಡ್ಡಿ, ಉಟ್ಕೂರ ರಾಘವೇಂದ್ರ, ಪ್ರದೀಪ್ ಸಾನ್‌ಬಾಳ, ಎ.ಚಂದ್ರಶೇಖರ್, ಎಂ.ಸುಭಾಷ್, ಈ.ಶಶಿರಾಜ್, ರಾಮಚಂದ್ರ ಕಡಗೋಲು, ಮಹೇಂದ್ರರೆಡ್ಡಿ, ಮಂಚಾಲ ಭೀಮಣ್ಣ, ತಿಮ್ಮಪ್ಪ ಫಿರಂಗಿ, ಮಹಾಂತೇಶ್, ಲಕ್ಷ್ಮಣ ಹುಲಿಗಾರ ಗಜ್ಜಿ, ರಾಮಕೃಷ್ಣ, ಜೆ.ಎಂ.ಮೌನೇಶ್, ನವೀನ್ ರೆಡ್ಡಿ, ವೀರೇಶ್ ತಳವಾರ, ನರೇಶ್ ರೆಡ್ಡಿ, ರಾಜು ಗದ್ವಾಲ್ಕರ್, ಅಯೂಬ್, ವಿಷ್ಣು ರೆಡ್ಡಿ, ಡಿ.ಮಹದೇವ್, ಸುಲೋಚನಾ ಆಲ್ಕೂರು, ವಾಣಿಶ್ರೀ, ಶಾಂತಾ ಕುಲಕರ್ಣಿ, ನಾಗವೇಣಿ, ಸಂಗೀತ ಜಗತಾಪ್, ಶಾಂತಾ ಹಿರೇಮಠ, ತ್ರಿವೇಣಿ ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.