ಬಿಜೆಪಿ ಕಾರ್ಯಾಲಯದಲ್ಲಿ ಶ್ರೀರಾಮ ಪೂಜೆ ಸಂಪನ್ನ

ಬೀದರ್: ಜ.22:ಇಂದು ಜಿಲ್ಲಾ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ಬೆಳಿಗ್ಗೆ 10.15 ಗಂಟೆಗೆ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನಾ ನಿಮಿತ್ತ ಪೂಜೆ ಕಾರ್ಯಕ್ರಮ ನೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಾಲಯ ಪ್ರಭಾರಿ ರಾಜಶೇಖರ ನಾಗಮೂರ್ತಿ ಮಾತನಾಡಿ ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮ ಲಲ್ಲಾ ಮಂದಿರ ಸ್ಥಾಪನೆ ಒಂದು ಐತಿಹಾಸಿಕ ಪ್ರಸಂಗವಾಗಿದೆ ಎಂದು ತಿಳಿಸಿದರು. 500 ವರ್ಷಗಳ ಸುದೀರ್ಘ ಸಂಘರ್ಷದ ಫಲ ಇಂದು ನಾವು ಕಾಣುತ್ತಿದ್ದೇವೆ. ಈ ಸಂದರ್ಭದಲ್ಲಿ ನಾವುಗಳೆಲ್ಲರು ಧನ್ಯರು. ಶ್ರೀರಾಮ ಒಂದೇ ಧರ್ಮ ಅಥವಾ ಜಾತಿಗೆ ಸಿಮಿತ ಮಾಡಿ ನೋಡಬಾರದು. ಅಯೋಧ್ಯೆಯಲ್ಲಿದ್ದ ಭವ್ಯ ಮಂದಿರ ಪ್ರತಿಯೊಬ್ಬ ಭಾರತೀಯನ ಪುಣ್ಯ ಕ್ಷೇತ್ರವಾಗಿದೆ. ಶ್ರೀರಾಮ ಪೂಜಾ ಕಾರ್ಯಕ್ರಮ ದೃಷ್ಟಿಯಿಂದ ಸಂಪೂರ್ಣ ಕಾರ್ಯಾಲಯ ಅಲಂಕರಿಸಲಾಗಿದ್ದು ಹಾಗೂ ಜಿಲ್ಲಾ ಕಾರ್ಯಾಲಯದಲ್ಲಿ ಒಂದು ಸೆಲ್ಫಿ ಪಾಯಿಂಟ್ ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ರಾಜಕುಮಾರ ಪಾಟೀಲ ನೇಮತಾಬಾದ, ಶ್ರೀನಿವಾಸ ಚೌಧರಿ, ಕಪಿಲ ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ, ಸಂಜಕುಮಾರ ಸಜ್ಜನ, ಗೋಪಾಲಕೃಷ್ಣ ಕುಕಡಾಲ, ಶ್ರೀಮತಿ ಯೋಗೇಶ್ವರಿ, ಸೋನಕಾಂಬಳೆ, ಶ್ರೀಮತಿ ಸಂಗೀತಾ ಅಡಕಾಯಿ, ನೀತಿನ ಕರ್ಪೂರ, ರವಿಂದ್ರ ವಟ್ಟಗೆ, ವೀರನಾಥ ತೋಗಲೂರ್, ಕಾಶಿನಾಥ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.