ಬಿಜೆಪಿ ಕಾರ್ಯಾಲಯದಲ್ಲಿ ರಾಮನವಮಿ ಆಚರಣೆ

ದಾವಣಗೆರೆ. ಏ.೨೨; ಭಾರತೀಯ ಜನತಾ ಪಾರ್ಟಿಯ  ಜಿಲ್ಲಾ ಕಾರ್ಯಾಲಯದಲ್ಲಿ ಸಾಂಕೇತಿಕವಾಗಿ ಸಾಮಾಜಿಕ ಅಂತರದೊಂದಿಗೆ  ಕೋವಿಡ್‌ ನಿಯಮವನ್ನು ಪಾಲಿಸುತ್ತಾ  ಶ್ರೀ ರಾಮ ನವಮಿಯನ್ನು ಆಚರಿಸಲಾಯಿತು. ಈ ಸಂದಂರ್ಭದಲ್ಲಿ ಜಿಲ್ಲಾ ಅದ್ಯಕ್ಷರಾದ ವೀರೇಶ್‌ ಹನಗವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಬಿ. ಎಸ್. ಜಗದೀಶ್‌, ಜಿಲ್ಲಾ ಉಪಾಧ್ಯಕ್ಷರಾದ ಶಿವರಾಜ್‌ ಪಾಟೀಲ್‌, ಶ್ರೀನಿವಾಸ್‌ ದಾಸಕರಿಯಪ್ಪ,  ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿಯಾದ ಲಿಂಗರಾಜ್‌ ಗೌಳಿ, ಜಿಲ್ಲಾ ಮಾಧ್ಯಮ ಸಂಚಾಲಕರಾದ ವಿಶ್ವಾಸ್‌ ಹೆಚ್. ಪಿ. ಮಹಿಳಾ ಮೋರ್ಚ ಅಧ್ಯಕ್ಷರಾದ ಮಂಜುಳ ಮಹೇಶ್‌, ಪ್ರಧಾನ ಕಾರ್ಯದರ್ಶಿಯಾದ ಪುಷ್ಪವಾಲಿ, ಮಹಾ ನಗರ ಪಾಲಿಕೆಯ ಮಾಜಿ ಮೇಯರ್‌ ಹಾಲಿ ಸದಸ್ಯರಾದ ಅಜಯನ್‌ ಕುಮಾರ್‌ ,  ಹಾಗೂ ನಗರ ಪಾಲಿಕೆ ಸದಸ್ಯರುಗಳಾದ ಪ್ರಸನ್ನಕುಮಾರ್‌, ಶಿವಾನಂದ್‌ ಆರ್‌ , ಎಸ್. ಸಿ ಮೋರ್ಚ ಅಧ್ಯಕ್ಷರಾದ ಹನುಮಂತನಾಯ್ಕ,ಮಂಡಲ ಅಧ್ಯಕ್ಷರಾದ ಸಂಗನಗೌಡ್ರು, ಆನಂದರಾವ್‌ ಶಿಂಧೆ, ಮಾಜಿ ಮೇಯರ್‌ ವಸಂತ್‌ ಕುಮಾರ್‌,ಮುಖಂಡರುಗಳಾದ  ಗಂಗಾಧರ್‌, ಹನುಮಂತಪ್ಪ, ಭಾಗ್ಯ ಪಿಸಾಳೆ, ಸರಸ್ವತಿ, ಮುಂತಾದವರು ಉಪಸ್ಥಿತರಿದ್ದರು.